ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಇಡುವುದು ಬೇಡ : ಯಡಿಯೂರಪ್ಪ – VIshwanews24

Featured, ರಾಜ್ಯ ನ್ಯೂಸ್

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಸೂಕ್ತವಲ್ಲ :  ಯಡಿಯೂರಪ್ಪ

ಬೆಂಗಳೂರು: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಇಡುವುದನ್ನು ಕೈಬಿಟ್ಟು ರಾಜ್ಯ , ರಾಷ್ಟ್ರ ಹಾಗೂ ಇತಿಹಾಸಕ್ಕೆ ಕೊಡುಗೆ ನೀಡುವಂತಹ ಮಹನೀಯರ ಹೆಸರನ್ನು ಇಡುವಂತೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

“ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತೀರ್ಮಾನದಿಂದ ಮನದುಂಬಿ ಬಂದಿದೆ. ಈ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಇಡುವುದು ಬೇಡ. ಕರ್ನಾಟಕದ ಯಾವುದೇ ಗಣ್ಯ ವ್ಯಕ್ತಿಗಳ ಹೆಸರು ಇಡುವುದು ಸೂಕ್ತ ಎಂದು ವಿನಯದಿಂದ ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ.

ಈ ಹಿಂದೆ ಪ್ರಸ್ತಾವ ಬಂದಾಗ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದು ತಮ್ಮ ಹೆಸರು ಇಡುವುದು ಬೇಡ, ಬೇರೆ ಯಾವುದೇ ಗಣ್ಯರ ಹೆಸರನ್ನಿಡುವಂತೆ ಸೂಚಿಸಿದ್ದರು.

ಬೆಂಗಳೂರು: ಪ್ರೇಮಿಗಳ ದಿನಾಚರಣೆಗೆ ಹಿಂದೂ ಸಂಘಟನೆಗಳ ಅಡ್ಡಿ ಆತಂಕ; ಪಾರ್ಕ್‌ , ಮಾಲ್‌ ಗಳಲ್ಲಿ ಪೊಲೀಸ್ ಹೈ ಅಲರ್ಟ್‌ – Vishwanews24

Leave a Reply