ಶಿವಮೊಗ್ಗ: ಹರ್ಷ ಮನೆಗೆ ಯಶ್ಪಾಲ್‌ ಸುವರ್ಣ ಭೇಟಿ : ವೈಯುಕ್ತಿಕ ನೆರವು ರೂ. 1 ಲಕ್ಷ  ಹಸ್ತಾಂತರ – Vishwanews24

Featured, ರಾಜ್ಯ ನ್ಯೂಸ್

ಹರ್ಷನ ಹತ್ಯೆಯ ಹಿಂದೆ ಜಿಹಾದಿ ಸಂಘಟನೆಯ ಕೈವಾಡ ; ಅವರದ್ದೇ ಭಾಷೆಯಲ್ಲಿ ಉತ್ತರ ನೀಡುವ ಕೆಲಸ ಮಾಡುತ್ತೇವೆ

ಮಗನ ಸ್ಥಾನದಲ್ಲಿ ನಿಂತು ಕುಟುಂಬಕ್ಕೆ ನೆರವಾಗುತ್ತೇವೆ..

ಶಿವಮೊಗ್ಗ: ಶಿವಮೊಗ್ಗದಲ್ಲಿ ಮತಾಂಧ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಭಜರಂಗದಳದ ಕಾರ್ಯಕರ್ತ ಹರ್ಷ ರವರ ಮನೆಗೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಭೇಟಿ ನೀಡಿ ತಾಯಿ ಹಾಗೂ ಕುಟುಂಬಸ್ಥರಿಗೆ ಸಾಂತ್ವಾನ ತಿಳಿಸಿದರು.

ಈ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ನೆಲೆಯಲ್ಲಿ ರೂ. 1 ಲಕ್ಷ ಮೊತ್ತದ ಚೆಕ್ ನೀಡಿ ಈ ಸಂಕಷ್ಟದ ಸಂದರ್ಭದಲ್ಲಿ ಸಮಸ್ತ ಹಿಂದೂ ಸಮಾಜ ಕುಟುಂಬದ ಜತೆ ನಿಲ್ಲುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಹರ್ಷನ ಹತ್ಯೆಯ ಹಿಂದೆ ಜಿಹಾದಿ ಸಂಘಟನೆಯ ಕೈವಾಡ ಇದ್ದು ನಾವು ಅದಕ್ಕೆ ಅವರದ್ದೇ ಭಾಷೆಯಲ್ಲಿ ಉತ್ತರ ನೀಡುವ ಕೆಲಸ ಮಾಡುತ್ತೇವೆ. ಇದು ಹಿಜಾಬ್‌ ನ ಗಲಾಟೆಯ ಭಾಗವಾಗಿ ಘಟನೆ ನಡೆದಿದ್ದು ಹಿಜಾಬ್‌ ಗಲಾಟೆಯಲ್ಲೂ ಕೂಡ ಜಿಹಾದಿಗಳ ಹುನ್ನಾರವಿತ್ತು. ಸದ್ಯ ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇವೆ ಮಗನ ಸ್ಥಾನದಲ್ಲಿ ನಿಂತು ಕುಟುಂಬಕ್ಕೆ ನೆರವಾಗುತ್ತೇವೆ ಎಂದರು.

ಇದನ್ನೂ ಓದಿ :

ಎಲ್ಲಾ ಧರ್ಮದ ಜನರು ‘ಶಾಲಾ ಸಮವಸ್ತ್ರ’ವನ್ನು ಒಪ್ಪಿಕೊಳ್ಳಬೇಕು : ಗೃಹ ಸಚಿವ ಅಮಿತ್ ಶಾ – Vishwanews24

Leave a Reply