ಶೌರ್ಯ ರಥ ಯಾತ್ರಾ ಮೆರವಣಿಗೆ : ಮಂಗಳೂರು ನಗರದಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ.. Vishwanews24
ಶೌರ್ಯ ರಥ ಯಾತ್ರಾ ಮೆರವಣಿಗೆ : ಮಂಗಳೂರು ನಗರದಲ್ಲಿ ಬದಲಿ ಸಂಚಾರ ವ್ಯವಸ್ಥೆ..
ಮಂಗಳೂರು : ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ವತಿಯಿಂದ ಆಯೋಜಿಸಲಾಗಿರುವ “ ಶೌರ್ಯ ರಥ ಯಾತ್ರಾ ” ಮೆರವಣಿಗೆ ಇಂದು ಮಧ್ಯಾಹ್ನ 2 ಗಂಟೆಗೆ ನಗರದ ಅಂಬೇಡ್ಕರ್ ವೃತ ದಿಂದ ಪ್ರಾರಂಭವಾಗಿ ನಗರದ ಕದ್ರಿ ಮೈದಾನದಲ್ಲಿ ಸಂಪನ್ನಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ಅಂಬೆಡ್ಕರ್ ವೃತ್ತದಿಂದ ಬಂಟ್ಸ್ ಹಾಸ್ಟೇಲ್ ಕಡೆಗೆ, ಪಿ ವಿ ಎಸ್ ವೃತ್ತದಿಂದ ಬಂಟ್ಸ್ ಹಾಸ್ಟೇಲ್ ಕಡೆಗೆ, ಕದ್ರಿ ಕಂಬಳ ಜಂಕ್ಷನ್ ಕಡೆಯಿಂದ ಬಂಟ್ಸ್ ಹಾಸ್ಟೇಲ್ ಕಡೆಗೆ, ಮಲ್ಲಿಕಟ್ಟೆ ಕಡೆಯಿಂದ ಬಂಟ್ಸ್ ಹಾಸ್ಟೇಲ್ ಕಡೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಕಾರ್ಯಕ್ರಮ ಮುಗಿಯುವವರೆಗೆ ನಿಷೇಧಿಸಲಾಗಿದೆ.
ಬದಲಿ ಸಂಚಾರ ವ್ಯವಸ್ಥೆ ಈ ಕೆಳಗಿನಂತಿದೆ :
1. ಪಡೀಲ್ ಮತ್ತು ತಲಪಾಡಿಕಡೆಯಿಂದ ಬರುವ ಎಲ್ಲಾ ಕೆ ಎಸ್ ಆರ್ ಟಿ ಸಿ ಬಸ್ಸುಗಳು ಪಂಪ ವೆಲ್ ಗೆ ಬಂದು ಪಂಪ್ ವೆಲ್ ನಿಂದ ನಂತೂರು, ಕೆ ಪಿ ಟಿ ಮಾರ್ಗ ಮುಖಾಂತರ ಕೆ ಎಸ್ ಆರ್ ಟಿ ಸಿ ಗೆ ಅಂತೆಯೇ ಕೆ ಎಸ್ ಆರ್ ಟಿ ಸಿ ಯಿಂದ ಹೊರ ಹೋಗುವ ಎಲ್ಲಾ
ಬಸ್ಸುಗಳು ಕೆ ಪಿ ಟಿ, ನಂತೂರು, ಪಂಪ್ ವೆಲ್ ಮುಖಾಂತರ ಮುಂದುವರಿಯುವುದು.
2. ನಂತೂರು ಕಡೆಯಿಂದ ಸ್ಟೇಟ್ ಬ್ಯಾಂಕ್ ಕಡೆಗೆ ಬರುವ ಎಲ್ಲಾ ಬಸ್ಸುಗಳು ಹಾಗೂ ಇತರ ವಾಹನಗಳು ಶಿವಭಾಗ್, ಹಾರ್ಟಿಕಲ್ಚರ್ , ಬೆಂದೂರು, ಕರಾವಳಿ, ಕಂಕನಾಡಿ ಜಂಕ್ಷನ್ ತಲುಪಿ ಪಳ್ನೀರು ರಸ್ತೆ ಮುಖಾಂತರ ಸ್ಟೇಟ್ ಬ್ಯಾಂಕ್ ಕಡೆ ಮುಂದುವರಿಯುವುದು.
3. ಪಂಪ್ ವೆಲ್ ಕಡೆಯಿಂದ ಸ್ಟೇಟ್ ಬ್ಯಾಂಕ್ ಕಡೆಗೆ ಹೋಗುವ ಎಲ್ಲಾ ಬಸ್ಸುಗಳು ಹಾಗೂ ಇತರ ವಾಹನಗಳು ಕಂಕನಾಡಿ ಜಂಕ್ಷನಿಗೆ ಬಂದು ಪಳ್ನೀರು ರಸ್ತೆ ಮುಖಾಂತರ ಸ್ಟೇಟ್ ಬ್ಯಾಂಕ್ ಕಡೆಗೆ ಮುಂದುವರಿಯುವುದು.
4. ಕಾವೂರು, ಬೋಂದೇಲ್ ಕಡೆಯಿಂದ ಬರುವ ಬಸ್ಸುಗಳು ಹಾಗೂ ಇತರ ವಾಹನಗಳು ಕೆ ಎಸ್ ಆರ್ ಟಿ ಸಿ , ಲಾಲ್ ಭಾಗ್, ಪಿ ವಿ ಎಸ್, ಕೆ ಎಸ್ ಆರ್
ರಸ್ತೆ ಮುಖಾಂತರ ಹಂಪನಾ ಕಟ್ಟೆ ಗೆ ಬಂದು ಸ್ಟೇಟ್ ಬ್ಯಾಂಕ್ ಕಡೆಗೆ ಮುಂದುವರಿಯುವುದು.
5. ಸ್ಟೇಟ್ ಬ್ಯಾಂಕ್ ಕಡೆಯಿಂದ ಉಡುಪಿ, ಮೂಡಬಿದೆ ಕಡೆಗೆ ಹೋಗುವ ಎಲ್ಲಾ ಬಸ್ಸು ಹಾಗೂ ಇತರ ವಾಹನಗಳು ಕೆ ಎಸ್ ಆರ್ ರಸ್ತೆ ಮುಖಾಂತರ ಪಿ ವಿ ಎಸ್, ಲಾಲ್ ಭಾಗ್ ಜಂಕ್ಷನ್ ನಿಂದ ಮುಂದಕ್ಕೆ ಉಡುಪಿ ಕಡೆಗೆ ಸಂಚರಿಸುವುದು, ಕೆ ಎಸ್ ಆರ್ ಟಿ ಸಿ, ಕೆ ಪಿ ಟಿ
ಮುಖಾಂತರ ಮೂಡಬಿದ್ರೆ ಕಡೆಗೆ ಸಂಚರಿಸುವುದು.
ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಶಾಸಕ ಪ್ರದೀಪ್ ಈಶ್ವರ್ – Vishwanews24
ಅಂತೆಯೇ ಪುತ್ತೂರು, ತಲಪಾಡಿ, ಕಡೆಗೆ ಸಂಚಾರಿಸುವ ಎಲ್ಲಾ ಬಸ್ಸುಗಳು ಹಾಗೂ ಇತರ ವಾಹನಗಳು ಹಂಪನಕಟ್ಟೆ ಜಂಕ್ಷನ್ನಿ0ದ
ಬಲಕ್ಕೆ ತಿರುಗಿ ಪಳ್ನೀರು ರಸ್ತೆ ಮುಖಾಂತರ ಕಂಕನಾಡಿ, ಕರಾವಳಿ ಜಂಕ್ಷನ್ ಮುಖೇನಾ ಮುಂದುವರಿಯುವುದು.
