ಶ್ರೀ ಕ್ಷೇತ್ರ ಪರೆಂಕುದ್ರು ಮಹಾಕಾಳಿ ಮಂತ್ರದೇವತಾ ಸನ್ನಿಧಿಯಲ್ಲಿ ದಿನಾಂಕ 30 ಎಪ್ರಿಲ್ 2018 ರ ಸೋಮವಾರ ವಾರ್ಷಿಕೋತ್ಸವ ಕಾರ್ಯಕ್ರಮ.

Featured, ಉಡುಪಿ

ಶ್ರೀ ಕ್ಷೇತ್ರ ಪರೆಂಕುದ್ರು ಮಹಾಕಾಳಿ ಮಂತ್ರದೇವತಾ ಸನ್ನಿಧಿಯಲ್ಲಿ ದಿನಾಂಕ ೩೦ ಎಪ್ರಿಲ್ ೨೦೧೮ ರ ಸೋಮವಾರ ವಾರ್ಷಿಕೋತ್ಸವ ಕಾರ್ಯಕ್ರಮ.

kAup: ಶ್ರೀ ಮಹಾಕಾಳಿ ಮಂತ್ರದೇವತಾ ಸನ್ನಿಧಿ ಪರೆಂಕುದ್ರು ,ಕೋಟೆ ಕಟಪಾಡಿ ಯಲ್ಲಿ ದಿನಾಂಕ 30-ಎಪ್ರಿಲ್2018 ಸೋಮವಾರದಂದು ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದ್ದು ಆ ಪ್ರಯುಕ್ತ ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ಗಣಯಾಗ, ನವಕ ಪ್ರಧಾನ, ಚಂಡಿಕಯಾಗ ಮತ್ತು ಮಹಾಕಾಳಿ ಅಮ್ಮನ ದರ್ಶನ ಸೇವೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ಜರಗಲಿದೆ. ತದನಂತರ ಸಂಜೆ 6 ಗಂಟೆಗೆ ಬಾಲಭಂಡಾರ ಸೇವೆ ಮತ್ತು ರಾತ್ರಿ 9 ಗಂಟೆಯಿಂದ ಮಂತ್ರದೇವತೆ,ವರ್ತೆ ಪಂಜುರ್ಲಿ,ಚೌಂಡಿ,ಗುಳಿಗ,ರಾಹು ದೈವಗಳ ಕೋಲ ಸೇವೆಯು ಜರಗಲಿದ್ದು . ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಧಿಗಳೆಲ್ಲರೂ ಬಂದು ಸಹಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಶ್ರೀ ಕ್ಷೇತ್ರದ ಪ್ರಕಟನೆ ತಿಳಿಸಿದೆ.