ಶ್ರೀ ಗಳ ಆರೋಗ್ಯದಲ್ಲಿ ಚೇತರಿಕೆ , ಭಕ್ತರು ಆತಂಕ ಪಡುವ ಅಗತ್ಯವಿಲ್ಲ: ಡಾ.ಪರಮೇಶ್ – Vishwanews24

Featured, ಜಿಲ್ಲೆ
ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯ ಮೊದಲಿಗಿಂತಲೂ ಕೊಂಚ ಸುಧಾರಣೆಯಾಗಿದ್ದು, ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಹೇಳಿದ್ದಾರೆ.
ಇಂದು 2ನೇ ಬಾರಿಗೆ ಮಾಧ್ಯಮಗಳಿಗೆ ಶ್ರೀಗಳ ಆರೋಗ್ಯದ ಕುರಿತು ಮಾಹಿತಿ ನೀಡಿದ ಅವರು, ಬೆಳಗ್ಗೆ ಇದ್ದ ಪರಿಸ್ಥಿತಿಗಿಂತಲೂ ಈಗ ಶ್ರೀಗಳ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ಹೀಗಾಗಿ ಭಕ್ತರು ಆತಂಕ ಪಡುವ ಅಗತ್ಯವಿಲ್ಲ. ಶ್ರೀಗಳ ಆರೋಗ್ಯದ ಕುರಿತು ಬೆಂಗಳೂರಿನ ನುರಿತ ವೈದ್ಯರೊಂದಿಗೆ ಸಲಹೆ ಪಡೆದು ಚಿಕಿತ್ಸೆ ಮುಂದುವರೆಸಿದ್ದೇವೆ. ಕೆಲ ವೈದ್ಯರು ಬೆಂಗಳೂರಿನಿಂದ ಆಗಮಿಸುತ್ತಿದ್ದಾರೆ. ಅವರು ಬಂದ ಕೂಡಲೇ ಶ್ರೀಗಳಿಗೆ ಅವರು ಚಿಕಿತ್ಸೆ ನಡೆಸಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಶ್ರೀಗಳ ಭಕ್ತರು ಆತಂಕ ಪಡುವ ಅಗತ್ಯವಿಲ್ಲ, ವದಂತಿಗಳಿಗೆ ಕಿವಿಗೊಡಬೇಡಿ.. ಮಠದತ್ತ ಭಕ್ತರು ಬರುವುದು. ಕಾಲ ಕಾಲಕ್ಕೆ ಶ್ರೀಗಳ ಆರೋಗ್ಯದ ಕುರಿತು ಮಾಧ್ಯಮಗಳ ಮೂಲಕ ನಿಮಗೆ ನಾವೇ ಮಾಹಿತಿ ನೀಡುತ್ತೇವೆ. ಭಕ್ತರು ಮಠದತ್ತ ಬರುವುದು ಬೇಡ. ಇದರಿಂದ ಭದ್ರತೆಗೂ ತೊಂದರೆಯಾಗಲಿದೆ. ನಮ್ಮ ಕೆಲಸಗಳಿಗೂ ತೊಂದರೆಯಾಗಲಿದೆ ಎಂದು ಡಾ.ಪರಮೇಶ್ ಮನವಿ ಮಾಡಿಕೊಂಡರು.