Featured

ಶ್ರೀ ಚಾಮುಂಡೇಶ್ವರಿ ದೇವಿಯ ನೆನೆಯುತ್ತ ಈ ದಿನದ ದ್ವಾದಶ ರಾಶಿಯ ಫಲಾಫಲಗಳನ್ನು ತಿಳಿಯೋಣ. ಪಂಡಿತ್ ಗಿರಿಧರ ಶಾಸ್ತ್ರಿ (ಖ್ಯಾತ ಜ್ಯೋತಿಷ್ಯರು) ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸಲು ಲಭ್ಯರಿದ್ದಾರೆ. ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣ ವಿರಲಿ, ನಿಮ್ಮ ಒಂದು ಕರೆ ಪರಿಹಾರ ಸೂಚಿಸಬಹುದು. 9945098262

ಶ್ರೀ ಚಾಮುಂಡೇಶ್ವರಿ ದೇವಿಯ ನೆನೆಯುತ್ತ ಈ ದಿನದ ದ್ವಾದಶ ರಾಶಿಯ ಫಲಾಫಲಗಳನ್ನು ತಿಳಿಯೋಣ.
ಪಂಡಿತ್ ಗಿರಿಧರ ಶಾಸ್ತ್ರಿ (ಖ್ಯಾತ ಜ್ಯೋತಿಷ್ಯರು)
ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸಲು ಲಭ್ಯರಿದ್ದಾರೆ.
ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣ ವಿರಲಿ, ನಿಮ್ಮ ಒಂದು ಕರೆ ಪರಿಹಾರ ಸೂಚಿಸಬಹುದು.
9945098262

ಮೇಷ ರಾಶಿ
ಇಲ್ಲಸಲ್ಲದ ಚಿಂತೆಗಳಿಂದ ನಿಮ್ಮ ಮನಸ್ಥಿತಿ ಕದಡಬಹುದು, ಮಾನಸಿಕ ಚೈತನ್ಯ ಪಡೆದುಕೊಳ್ಳಿ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಫಲಿತಾಂಶ ಕಾಣಸಿಗುವುದಿಲ್ಲ. ನಿಮ್ಮ ವ್ಯಕ್ತಿತ್ವ ಮತ್ತು ವಿಚಾರಧಾರೆಗಳನ್ನು ಹಲವರು ಕಡೆಗಣಿಸಬಹುದು, ನಿಮ್ಮ ವ್ಯವಸ್ಥೆಯಲ್ಲಿ ನೀವು ನಡೆಯಿರಿ ಖಂಡಿತ ಗೆಲುವು ನಿಮಗೆ ಕಟ್ಟಿಟ್ಟಬುತ್ತಿ.
ಶುಭ ಸಂಖ್ಯೆ 9
ಗಿರಿಧರ ಶಾಸ್ತ್ರಿ 9945098262

ವೃಷಭ ರಾಶಿ
ಇಂದು ಆಕಸ್ಮಿಕವಾದ ಶುಭಫಲಗಳನ್ನು ಕಾಣಲಿದ್ದೀರಿ. ದೈವಿಕ ಕಾರ್ಯ ಸಂಕಲ್ಪಗಳಿಗೆ ವ್ಯವಸ್ಥಿತ ಯೋಜನೆ ಹಾಕಿಕೊಳ್ಳುವ ಸಾಧ್ಯತೆ ಇದೆ. ವ್ಯಾವಹಾರಿಕವಾಗಿ ಈ ದಿನ ಸಮೃದ್ಧತೆ ಹಾಗೂ ಲಾಭ ನಿರೀಕ್ಷಿಸಬಹುದು. ನಿಮ್ಮ ಹಣಕಾಸಿನ ವ್ಯವಸ್ಥೆಯು ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ. ಸಂಗಾತಿಯೊಡನೆ ಉತ್ತಮ ಒಡನಾಟ ಹಾಗೂ ಅವರ ಬೇಡಿಕೆಗಳನ್ನು ಪೂರೈಸುವ ಸ್ವಭಾವ ಕಾಣಬಹುದು.
ಶುಭ ಸಂಖ್ಯೆ 6
ಗಿರಿಧರ ಶಾಸ್ತ್ರಿ 9945098262

ಮಿಥುನ ರಾಶಿ
ಉದ್ಯೋಗದಲ್ಲಿ ಕೆಲವು ತಪ್ಪುಗಳು ನಡೆಯಬಹುದು, ಆದಷ್ಟು ಜಾಗ್ರತೆಯಿಂದ ಕಾರ್ಯನಿರ್ವಹಿಸಿ. ಕುಟುಂಬಸ್ಥರ ನೆರವನ್ನು ನಿಮ್ಮ ಕೆಲಸಕಾರ್ಯಗಳಲ್ಲಿ ತೆಗೆದುಕೊಳ್ಳುವುದು ಒಳಿತು. ನಿಮ್ಮ ಸಂಕೋಚದ ಸ್ವಭಾವವನ್ನು ಆದಷ್ಟು ಬಿಟ್ಟುಬಿಡಿ. ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಆತ್ಮೀಯರೊಡನೆ ಚರ್ಚಿಸಿ ಪರಿಹಾರ ಹುಡುಕಿ. ಮುನಿಸಿಕೊಂಡಿರುವ ಸಂಗಾತಿಯನ್ನು ಸಂತೈಸುವ ಜವಾಬ್ದಾರಿ ನಿಮ್ಮ ಮೇಲಿದೆ.
ಶುಭ ಸಂಖ್ಯೆ 2
ಗಿರಿಧರ ಶಾಸ್ತ್ರಿ 9945098262

ಕರ್ಕಾಟಕ ರಾಶಿ
ನಿಮ್ಮನ್ನು ಅರ್ಥಮಾಡಿಕೊಳ್ಳುವರು ಇಲ್ಲ ಎಂಬ ಚಿಂತೆಯನ್ನು ಬಿಟ್ಟು, ಆಗುವ ಕೆಲಸದ ಕಡೆ ಜ್ಞಾನ ನೀಡಿ. ನಿಮ್ಮನ್ನು ಕಡೆಗಣಿಸಿದವರನ್ನು ನಿಮ್ಮ ಯಶಸ್ವಿ ಕಾರ್ಯಗಳಿಂದ ಪಾಠ ಕಲಿಸಬೇಕಾದ ಸಂದರ್ಭ ಬರಬಹುದು. ಹಣಕಾಸಿನ ವಿಷಯವಾಗಿ ಪ್ರಗತಿದಾಯಕ ಬೆಳವಣಿಗೆ ಕಂಡು ಬರುತ್ತದೆ. ಕುಟುಂಬದಲ್ಲಿನ ಸಮಸ್ಯೆಗಳಿಂದ ಮಾನಸಿಕ ಕಿರಿಕಿರಿ ಆಗಬಹುದು. ನಿಮ್ಮ ಕಾರ್ಯಗಳಲ್ಲಿ ವಿವೇಚನೆಯಿಂದ ವರ್ತಿಸಿ. ಕುಟುಂಬದೊಡನೆ ಪ್ರವಾಸಕ್ಕೆ ಹೋಗುವುದರಿಂದ ಶುಭ ಫಲ ಕಾಣಬಹುದು.
ಶುಭ ಸಂಖ್ಯೆ 7
ಗಿರಿಧರ ಶಾಸ್ತ್ರಿ 9945098262

ಸಿಂಹ ರಾಶಿ
ಹೆಚ್ಚುವರಿ ಕೆಲಸದಿಂದ ನಿಮ್ಮ ಮನಸ್ಸಿನಲ್ಲಿ ಅಶಾಂತಿ ಮೂಡುತ್ತದೆ. ಇಂದಿನ ಕಾರ್ಯಗಳು ಬಹಳಷ್ಟು ತೊಂದರೆ ನೀಡಬಹುದು. ಕೆಲಸದ ವಿಷಯವಾಗಿ ಶ್ರದ್ಧೆ ಬೆಳೆಸಿಕೊಳ್ಳಿ. ಕೆಲವು ಸಮಸ್ಯೆಗಳನ್ನು ತಾಳ್ಮೆಯಿಂದ ಪರಿಹಾರ ಮಾಡಿ. ನಿಮ್ಮ ಮಾತುಗಳು ಹೆಚ್ಚು ಪ್ರಕರ ವಾಗಿರಬಹುದು ಇದರಿಂದ ಸಮಸ್ಯೆಗಳು ಹೆಚ್ಚಾಗಬಹುದು. ಆದಷ್ಟು ಮಾತಿನಲ್ಲಿ ಮೃದುತ್ವ ಇರಲಿ. ನಿಮ್ಮ ಸರ್ವಾಂಗೀಣ ಅಭಿವೃದ್ಧಿಗೆ ಕುಟುಂಬದ ಬೆಂಬಲ ನಿರೀಕ್ಷಿಸಬಹುದು.
ಶುಭ ಸಂಖ್ಯೆ 3
ಗಿರಿಧರ ಶಾಸ್ತ್ರಿ 9945098262

ಕನ್ಯಾ ರಾಶಿ
ಕೆಲಸದಲ್ಲಿ ಜಯ ಸಾಧನೆ ಆಗಲಿದೆ. ಸಾಲದ ಸಮಸ್ಯೆಯಿಂದ ಮುಕ್ತವಾಗುವ ಸಾಧ್ಯತೆ ಇದೆ. ನಿಮ್ಮ ಬಾಳಸಂಗಾತಿಯ ಉತ್ತಮ ಕಾರ್ಯ ಶೈಲಿಗಳಿಂದ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ. ಬರುವಂತ ಹಣಕಾಸು ಬಂದು ಸೇರುವ ಭಾಗ್ಯ ಈದಿನ ಕಾಣಬಹುದು. ಮನೆದೇವರ ಆಶೀರ್ವಾದದ ಮೊರೆಹೋಗುವ ಚಿಂತನೆ ನಡೆಸುವಿರಿ. ಮಕ್ಕಳಿಂದ ನಿಮ್ಮ ತೊಂದರೆಗಳಿಗೆ ಚೇತರಿಕೆ ದೊರೆಯುತ್ತದೆ ಹಾಗೂ ಅವರ ಅಭಿವೃದ್ಧಿಯಿಂದ ನಿಮ್ಮ ಹಲವು ಸಮಸ್ಯೆಗಳು ದೂರವಾಗುವುದು ನಿಶ್ಚಿತ.
ಶುಭ ಸಂಖ್ಯೆ 8
ಗಿರಿಧರ ಶಾಸ್ತ್ರಿ 9945098262

ತುಲಾ ರಾಶಿ
ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಇರಾದೆ ಹೊಂದಿದ್ದೀರಿ. ಈ ದಿನವು ಪ್ರೇಮಮಯದಿಂದ ಕೂಡಿರಬಹುದು, ಆನಂದದ ಸಮಯವನ್ನು ಸಂಗಾತಿಯೊಡನೆ ಕಳೆಯುವಿರಿ. ಪ್ರೇಮಾಂಕುರವಾಗುವ ಶುಭ ಲಕ್ಷಣಗಳು ಈ ದಿನ ಕಾಣಬಹುದು. ಪ್ರಣಯದಲ್ಲಿ ವಿಶೇಷ ಆಸಕ್ತಿ ಕಂಡುಬರುತ್ತದೆ. ಪ್ರತಿಯೊಂದು ಯೋಜನೆಗಳಲ್ಲಿ ಪ್ರಗತಿದಾಯಕ ಬೆಳವಣಿಗೆ ಕಾಣಬಹುದು. ಆರ್ಥಿಕವಾಗಿ ಸದೃಢತೆಯನ್ನು ಸಾಧಿಸುವಿರಿ.
ಶುಭ ಸಂಖ್ಯೆ 9
ಗಿರಿಧರ ಶಾಸ್ತ್ರಿ 9945098262

ವೃಶ್ಚಿಕ ರಾಶಿ
ಉತ್ಸಾಹದಿಂದ ಕೆಲಸದಲ್ಲಿ ಪಾಲ್ಗೊಳ್ಳುವ ನಿಮ್ಮ ಮನಸ್ಥಿತಿ ಕಾಣಬಹುದು. ಅಂದುಕೊಂಡ ಯೋಜನೆಗಳಲ್ಲಿ ಯಶಸ್ವಿಗೊಳಿಸುತ್ತೀರಿ.
ಬೃಹತ್ ಯೋಜನೆಗಳನ್ನು ಪಡೆದುಕೊಳ್ಳುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ವಾಕ್ ಶಕ್ತಿಯಿಂದ ಸಿದ್ದಿ ದೊರೆಯಲಿದೆ. ದೀರ್ಘಾವಧಿ ಹೂಡಿಕೆಗಳು ಬಹುತೇಕವಾಗಿ ಕಂಡುಬರುತ್ತದೆ. ನಿಮ್ಮ ನಿರೀಕ್ಷಿತ ಕಾರ್ಯಗಳಿಗೆ ಹಣಕಾಸಿನ ಆಡಚಣೆಯಾಗಬಹುದು, ಸ್ನೇಹಿತರು ಸಕಾಲದಲ್ಲಿ ಸಹಾಯ ಮಾಡುವರು. ಮಕ್ಕಳ ಕೆಲವು ವಿಷಯಗಳು ನಿಮ್ಮ ಮನಸ್ಸಿಗೆ ಬೇಸರ ತರಿಸುತ್ತದೆ.
ಶುಭ ಸಂಖ್ಯೆ 5
ಗಿರಿಧರ ಶಾಸ್ತ್ರಿ 9945098262

ಧನಸ್ಸು ರಾಶಿ
ನಿಮ್ಮ ಹಿತೈಷಿಗಳು ಕಾರಣಾಂತರಗಳಿಂದ ನಿಮ್ಮ ಬಗ್ಗೆ ಅಸಮಾಧಾನ ಹೊರಹಾಕಬಹುದು. ಕುಟುಂಬದಲ್ಲಿ ಬಿನ್ನಬಿಪ್ರಾಯ ಹೆಚ್ಚಾಗುವ ಸಾಧ್ಯತೆ ಇದೆ. ಆಸ್ತಿ ಹಣಕಾಸಿನ ವ್ಯಾಜ್ಯಗಳು ನಿಮ್ಮ ಮನಸ್ಥಿತಿ ಹಾಳು ಮಾಡಬಹುದು. ನಿಮ್ಮ ಸರ್ವ ಸಮಸ್ಯೆಗಳಿಗೆ ಹಿರಿಯರ ನೆರವು ಪಡೆಯುವುದು ಒಳ್ಳೆಯದು. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ನಿಮ್ಮ ಸಹಕಾರ ಅಗತ್ಯವಾಗಿದೆ.
ಶುಭ ಸಂಖ್ಯೆ 3
ಗಿರಿಧರ ಶಾಸ್ತ್ರಿ 9945098262

ಮಕರರಾಶಿ
ಅಲೌಕಿಕ ಎನಿಸುವ ಘಟನೆಗಳು ಜರುಗಬಹುದಾದ ದಿನ. ನಿಮ್ಮ ಕೆಲಸಗಳಲ್ಲಿ ಉತ್ತಮ ವಹಿವಾಟು ಹಾಗೂ ಆರ್ಥಿಕ ಚೈತನ್ಯ ಕಂಡುಬರುತ್ತದೆ. ಕೊಟ್ಟಂತಹ ಕಾರ್ಯವನ್ನು ವಿಶ್ವಾಸದಿಂದ ಪೂರ್ಣಗೊಳಿಸಿ. ಕೌಟುಂಬಿಕ ಮನಸ್ತಾಪಗಳನ್ನು ಸರಿಪಡಿಸಿಕೊಳ್ಳಿ. ಕೆಲವು ಸಣ್ಣ ಪ್ರಮಾದಗಳನ್ನು ಮರೆತು ನೀವು ದೊಡ್ಡವರಾಗಿ.
ಶುಭ ಸಂಖ್ಯೆ 4
ಗಿರಿಧರ ಶಾಸ್ತ್ರಿ 9945098262

ಕುಂಭ ರಾಶಿ
ನಿಮ್ಮ ಕಾರ್ಯಚಟುವಟಿಕೆಯು ಆತ್ಮಬಲ ಹಾಗೂ ಬುದ್ಧಿ ಬಲದಿಂದ ಅಸಾಧ್ಯ ಎಂಬುದನ್ನು ಸಾಧಿಸುವಿರಿ. ಕ
ಕುಟುಂಬಸ್ಥರೊಡನೆ ಪ್ರವಾಸದ ಸವಿ ಅನುಭವ ಪಡೆಯುವ ಸಾಧ್ಯತೆ. ನಿಮ್ಮ ಆರ್ಥಿಕ ರೂಪುರೇಷೆಗಳಿಗೆ ಆತ್ಮೀಯ ವ್ಯಕ್ತಿಗಳ ನೆರವನ್ನು ಪಡೆಯುವಿರಿ. ಬಹುದಿನಗಳ ಸಮಸ್ಯೆಗಳಿಗೆ ಈ ದಿನ ಮುಕ್ತಿ ಕೊಡುವ ಸಾಧ್ಯತೆ ಇದೆ. ಲೇವಾದೇವಿ ವ್ಯವಹಾರವನ್ನು ಈ ದಿನ ಮಾಡದಿರುವುದು ಸೂಕ್ತ. ವಿದ್ಯಾರ್ಥಿಗಳಿಗೆ ಶುಭ ಫಲಗಳು ಕಂಡುಬರುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಸ್ಥಾನ ಸಿಗಬಹುದಾದ ಸಾಧ್ಯತೆ.
ಶುಭ ಸಂಖ್ಯೆ 2
ಗಿರಿಧರ ಶಾಸ್ತ್ರಿ 9945098262

ಮೀನ ರಾಶಿ
ವಿನಾಕಾರಣ ವಾದ-ವಿವಾದಗಳಲ್ಲಿ ತೊಡಗಿ ನಿಮ್ಮ ವರ್ಚಸ್ಸನ್ನು ಹಾಳುಮಾಡಿಕೊಳ್ಳಬೇಡಿ. ಸರ್ವರ ಅಭಿಪ್ರಾಯದಂತೆ ಪ್ರಯಾಣ ಬೆಳೆಸುವುದು ಉತ್ತಮ. ನಿಮ್ಮ ಮೊಂಡುವಾದ ಗಳಿಂದ ವರ್ಚಸ್ಸಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ನಿಮ್ಮ ವಿರುದ್ಧ ವಿನಾಕಾರಣ ಸಮಸ್ಯೆ ಸೃಷ್ಟಿಸಬಹುದು ಎಚ್ಚರವಿರಲಿ. ನಿಮ್ಮಲ್ಲಿನ ಪ್ರತಿಭಾ ಶಕ್ತಿಯಿಂದ ಉತ್ತಮ ಸಾಧನೆ ಮಾಡಲಿದ್ದೀರಿ. ಅಮೂಲ್ಯ ವಸ್ತುಗಳನ್ನು ಕಾಪಾಡಿಕೊಳ್ಳುವ ಚಿಂತನೆ ನಡೆಸಿ, ಎಲ್ಲೆಂದರಲ್ಲಿ ಇಡುವುದು ಸೂಕ್ತವಲ್ಲ.
ಶುಭ ಸಂಖ್ಯೆ 1
ಗಿರಿಧರ ಶಾಸ್ತ್ರಿ 9945098262

ಜ್ಯೋತಿಷ್ಯರು ಗಿರಿಧರ ಶಾಸ್ತ್ರಿ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ, ಸಂತಾನ, ವಿದೇಶ ಪ್ರಯಾಣ, ಹಣಕಾಸು, ಸಾಲಭಾದೆ, ಶತ್ರು ಕಾಟ ಇನ್ನಿತರ ಗುಪ್ತ ಹಾಗೂ ಕಠಿಣ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945098262

Vishwa News 24

Recent Posts

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ 4 ತಿಂಗಳ ಕಾಲ ನಿಷೇಧ – vishwanews24

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…

3 hours ago

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ – vishwanews24

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್‌ 21 ರಂದು ನೀಟ್‌–ಯುಜಿ  ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…

3 hours ago

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

23 hours ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

1 day ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

1 day ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

1 day ago