ಶ್ರುತಿ ಹರಿಹರನ್ Me Too ಪ್ರಕರಣ : ಅರ್ಜುನ್ ಸರ್ಜಾಗೆ  ಬಿಗ್ ರಿಲೀಫ್ – Vishwanews24

Featured, ರಾಜ್ಯ ನ್ಯೂಸ್

ಶ್ರುತಿ ಹರಿಹರನ್ Me Too ಪ್ರಕರಣ : ಅರ್ಜುನ್ ಸರ್ಜಾಗೆ  ಬಿಗ್ ರಿಲೀಫ್ ;

ಬಿ-ರಿಪೋರ್ಟ್ ವರದಿ ಅಂಗೀಕರಿಸಿದ ಕೋರ್ಟ್

ಬೆಂಗಳೂರು: ಬಹು ಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮೀ ಟೂ ಆರೋಪ ಮಾಡಿದ್ದರು. ಈ ಆರೋಪ ಸಂಬಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ತನಿಖೆ ನಡೆಸಿದ್ದಂತ ಪೊಲೀಸರು ನ್ಯಾಯಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಈ ವರದಿಯನ್ನು ನ್ಯಾಯಾಲಯ ಅಂಗೀಕರಿಸಿದೆ. ಹೀಗಾಗಿ ನಟ ಅರ್ಜುನ್ ಸರ್ಜಾಗೆ ಮೀ ಟೂ ಆರೋಪದಲ್ಲಿ ಬಿಗ್ ರಿಲೀಫ್ ಸಿಕ್ಕಂತೆ ಆಗಿದೆ.

ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮೀ ಟೂ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಕುರಿತು ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೂಡ ಆರಂಭಿಸಿದ್ದರು. ಆದ್ರೇ ನಟಿ ಶ್ರುತಿ ಹರಿಹರ್, ನಟ ಅರ್ಜುನ್ ಸರ್ಜಾ ಬಗ್ಗೆ ಮಾಡಿದ್ದಂತ ಮೀ ಟೂ ಆರೋಪ ಪ್ರಕರಣದಲ್ಲಿ ಯಾವುದೇ ಸರಿಯಾದ ಸಾಕ್ಷಿಯನ್ನು ಒದಗಿಸಿರಲಿಲ್ಲ.

ಉಡುಪಿ: ಲಂಚಕ್ಕೆ ಬೇಡಿಕೆ  – ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಎಸಿಬಿ ದಾಳಿ :  ಮೂವರ ಬಂಧನ – Vishwanews24

ಈ ಪ್ರಕರಣ ಸಂಬಂಧ ಎಲ್ಲಾ ರೀತಿಯಲ್ಲಿ ತನಿಖೆ ನಡೆಸಿದ್ದಂತ ಕಬ್ಬನ್ ಪಾರ್ಕ್ ಪೊಲೀಸರು, ನ್ಯಾಯಾಲಯಕ್ಕೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನಲೆಯಲ್ಲಿ ಬಿ-ರಿಪೋರ್ಟ್ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣ ನಡೆಸಿದಂತ ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯವು, ಪೊಲೀಸರು ಮೀ ಟೂ ಪ್ರಕರಣದಲ್ಲಿ ನಟ ಅರ್ಜುನ್ ಸರ್ಜಾ ವಿರುದ್ಧ ಸಲ್ಲಿಸಿದ್ದಂತ ಬಿ-ರಿಪೋರ್ಟ್ ವರದಿಯನ್ನು ಅಂಗೀಕರಿಸಿದೆ. ಈ ಮೂಲಕ ಅರ್ಜುನ್ ಸರ್ಜಾಗೆ ಬಿಗ್ ರಿಲೀಫ್ ನೀಡಿದೆ.

Leave a Reply