ಸಂತೆ ಮಾರ್ಕೆಟ್ ವ್ಯಾಪಾರಿ ಕಾಂತಾರದ ಖಾಕಿಧಾರಿ..!! ಕಾಪುವಿನ ಕಲಾವಿದನಿಗೆ ಅವಕಾಶ ಕೊಟ್ಟ ರಿಷಬ್.vishwanews24
ಸಂತೆ ಮಾರ್ಕೆಟ್ ವ್ಯಾಪಾರಿ
ಕಾಂತಾರದ ಖಾಕಿಧಾರಿ..!!
ಕಾಪುವಿನ ಕಲಾವಿದನಿಗೆ
ಅವಕಾಶ ಕೊಟ್ಟ ರಿಷಬ್.
ಕಾಪು : ಸದ್ಯ ಸ್ಯಾಂಡಲ್ ವುಡ್ ನಲ್ಲಿ ಕಾಂತಾರ ಸಿನಿಮಾದ್ದೇ ಹವಾ . ಬಾಲಿವುಡ್ ಗೆ ಡಬ್ ಆಗ್ತಿರುವ ಕಾಂತಾರ ವರ್ಲ್ಡ್ ವೈಡ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಚಿತ್ರದಲ್ಲಿ ಕಾರಾಗೃಹದ ಸೀಕ್ವೆನ್ಸ್ ನಲ್ಲಿ ಕಾಪುವಿನ ಯುವಕ ಶ್ರೀಶೈಲ ನಟಿಸಿದ್ದಾರೆ.
ಪೊಲೀಸ್ ಪಾತ್ರದಲ್ಲಿ ಶ್ರೀಶೈಲ ಪಾತ್ರ ಮಾಡಿದ್ದಾರೆ. ರಿಷಬ್ ಶಿಕ್ಷೆ ಅನುಭವಿಸುವ ಸಂದರ್ಭದಲ್ಲಿ ಇವರು ಎಂಟ್ರಿ ಕೊಡ್ತಾರೆ. ಜೈವಿನಿಂದ ಪಾರಾಗಲು ಹಾಕಿರುವ ಸ್ಕೆಚ್ ಅನ್ನ ಕಾಪುವಿನ ಶ್ರೀಶೈಲ ಬಯಲು ಮಾಡಿ ಚಿತ್ರಕ್ಕೆ ದೊಡ್ಡ ಟ್ವಿಸ್ಟ್ ಕೊಟ್ಟಿದ್ದಾರೆ.

ಒಂದು ವಾರಗಳ ಕಾಲ ಕೆರಾಡಿಯ ಸಿನಿಮಾ ಸೆಟ್ನಲ್ಲಿ ನಟ ಬೀಡು ಬಿಟ್ಟಿದ್ದರು. ಶ್ರೀ ಶೈಲ ಮೂಲತಃ ಬಾಗಲಕೋಟೆ ಯವರು. ಪ್ರಸ್ತುತ ಹದಿನೈದು ವರ್ಷಗಳಿಂದ ಕಾಪುವಿನಲ್ಲಿ ವಾಸವಾಗಿದ್ದಾರೆ. ಕುಟುಂಬ ಹಲವಾರು ವರ್ಷಗಳಿಂದ ಇಲ್ಲಿಯೇ ನೆಲೆಸಿದೆ. ಈತ ಸಂತೆ ಮಾರುಕಟ್ಟೆಯಲ್ಲಿ ದಿನಸಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದು ಇಂತಹ ಯುವಕ ಸಿನಿಮಾಕ್ಕೆ ಆಯ್ಕೆಯಾಗಿದ್ದು ಚಿತ್ರದ ಘನತೆ ಮತ್ತಷ್ಟು ಹೆಚ್ಚಿದೆ.

ಶ್ರೀಶೈಲ ನೈಜ ನಟನೆಯನ್ನು ನೋಡಿದ ಸ್ಥಳೀಯ ರಂಗಭೂಮಿ ಕಲಾವಿದರು ಕಿರುಚಿತ್ರ ಮತ್ತು ನಾಟಕಗಳಲ್ಲಿ ಅಭಿನಯಿಸುವಂತೆ ಆಫರ್ ಕೊಟ್ಟಿದ್ದಾರೆ.

