ಕಾಪು: ಕಾಪು ಪುರಸಭೆ ವ್ಯಾಪ್ತಿಯ ಮೂಳೂರು ತೊಟ್ಟಂ ವಾರ್ಡಿಗೆ ಸಂಬಂಧಿಸಿದ ಫಿಶರಿಸ್ ರಸ್ತೆಯೂ ಸಂಪೂರ್ಣ ಹದಗೆಟ್ಟ ಪರಿಣಾಮ ಪ್ರತಿದಿನ ವಾಹನ ಸವಾರರು ,ಪಾದಚಾರಿಗಳು ಸಂಕಟ ಪಡುವಂತಾಗಿದೆ.
ಗೆಸ್ಟ್ ಹೌಸ್ ಗಳ ಮೂಲದ ಮನೆ ಎಂಬಂತ್ತಿರುವ ಮೂಳೂರು ತೊಟ್ಟಂ ವಾರ್ಡಿನ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಕಾಪು ದ್ವೀಪಸ್ಥಂಭ-ಮಟ್ಟು ಬೀಚ್-ಮಲ್ಪೆ ಬಂದರಿಗೆ ಸಂಪರ್ಕಕೊಂಡಿಯಾಗಿರುವ ಈ ರಸ್ತೆ ಸದ್ಯ ಕಂಬಳದ ಗದ್ದೆಯಂತೆ ಮಾರ್ಪಟ್ಟಿದೆ.
ಸುಮಾರು ಹತ್ತು ವರ್ಷದ ಹಿಂದೆ ಡಾಂಬರಿಕರಣ ಕಂಡ ಈ ರಸ್ತೆಯೂ ವಾಣಿಜ್ಯ ರಸ್ತೆಯಾಗಿಯೂ ಮಾರ್ಪಡಾಗಿದ್ದು ಘಣ ವಾಹನಗಳು ಸೇರಿದಂತೆ ಬೇರೆ ಊರಿನಿಂದ ಕೂಡ ಬೀಚ್ ಸವಿಯಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಐವತ್ತಕ್ಕೂ ಅಧಿಕ ಗೆಸ್ಟ್ ಹೌಸ್ :
ಈ ಭಾಗದಲ್ಲಿ ಸುಮಾರು ಐವತ್ತಕ್ಕೂ ಅಧಿಕ ಪ್ರವಾಸಿಗರಿಗಾಗಿ ಐವತ್ತಕ್ಕೂ ಅಧಿಕ ಖಾಸಾಗಿ ಗೆಸ್ಟ್ ಹೌಸ್ ಗಳು ಕೂಡ ತಲೆ ಎತ್ತಿದ್ದು ದಿನದ ಇಪ್ಪತ್ತನಾಲ್ಕು ಗಂಟೆಯೂ ಕೂಡ ವಾಹನ ದಟ್ಟನೆ ಇರುತ್ತದೆ.
ಮಳೆಗಾಲದಲ್ಲಿ ಕೆಸರರು-ಬೇಸಿಗೆ ಧೂಳು ಹೈರಾಣು
ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣ ಕೆಸರುತುಂಬಿ ಪಾದಚಾರಿಗಳಿಗೆ ನಡೆಯಲು ಕಷ್ಟವಾದರೆ,ಇತರ ಸಮಯದಲ್ಲಿ ಸಂಪೂರ್ಣ ಧೂಳು ಅಕ್ಕಪಕ್ಕದ ಮನೆಯೊಳಗೆ ಸೇರಿಕೊಂಡು ಸಮಸ್ಯೆಯಾಗುತ್ತಿದೆ.
ಈ ಬಗ್ಗೆ ಸಂಬಂಧಪಟ್ಟ ಪುರಸಭೆ ಸದಸ್ಯರಿಗೆ ಮನವಿ ಮಾಡಿದ್ದರೂ ಕೂಡ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಅನ್ನುತ್ತಾರೆ ಗ್ರಾಮಸ್ಥರು.
“ಮೂರು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ-ಶಾಸಕರಿಗೆ ದಾಖಲೆ ಸಮೇತ ಮನವಿ ಸಲ್ಲಿಸಿದ್ದು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಆದರೆ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲ ,ಮುಂದಿನ ಪುರಸಭೆಯ ಸಭೆಯಲ್ಲಿ ಮತ್ತೊಂದು ಬಾರಿ ಧ್ವನಿಎತ್ತುವ ಮುಖೇನ ರಸ್ತೆ ದುರಸ್ತಿಗೆ ಆಗ್ರಹ ಮಾಡಲಾಗುತ್ತದೆ”
ಸತೀಶ್ಚಂದ್ರ : ಪುರಸಭೆ ಸದಸ್ಯರು,ತೊಟ್ಟಂವಾರ್ಡ್
“ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತಿದೆ ಅಷ್ಟು ಮಾತ್ರವಲ್ಲದೆ ಘನವಾಹನಗಳ ಸಂಚಾರ ಕೂಡ ಜಾಸ್ತಿಯಾಗಿಯೇ ಇದೆ ,ಸುಮಾರು ಹತ್ತು ವರ್ಷದ ಹಿಂದೆ ಹಾಕಿದ ಡಾಂಬರು ಸಂಪೂರ್ಣ ಮಳೆ-ಹಾಗೂ ವಾಹನದ ದಟ್ಟಣೆಯಿಂದ ಕೊಚ್ಚಿಹೋಗಿದೆ ಮನವಿಗೆ ಯಾವುದೇ ರೀತಿಯ ಸ್ಪಂದನೆ ಇಲ್ಲ “
ಹೇಮನಾಥ್ : ಗ್ರಾಮಸ್ಥರು
ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…
ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…
ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…
ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ…
ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…
ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…