ಸಂಸದೆ ಶೋಭಾ ಕರಂದ್ಲಾಜೆ “ಬ್ಯಾಂಕ್ ಅಕೌಂಟ್” ಹ್ಯಾಕ್ ; 20 ಲಕ್ಷ ಹಣ ದೋಚಿದ ಖದೀಮರು – Vishwanews24
ನವದೆಹಲಿ:ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆಯವರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 20 ಲಕ್ಷ ರೂಪಾಯಿ ಎಗರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಂಸತ್ ಭವನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರತಿಯೊಬ್ಬ ಸಂಸದರಿಗೂ ಖಾತೆ ತೆರೆಯಲಾಗಿರುತ್ತದೆ. ಸಂಸದರ ವೇತನ, ಇರತೆ ಭತ್ಯೆಗಳು ಈ ಬ್ಯಾಂಕಿನ ಖಾತೆಗಳಿಗೆ ನೇರವಾಗಿ ಸಂದಾಯವಾಗುತ್ತದೆ.
ಸಂಸದೆ ಶೋಭಾ ಕರಂದ್ಲಾಜೆ ಅವರ ಎಸ್‌ಬಿಐ ಖಾತೆಗೆ ಕನ್ನ ಹಾಕಿರುವ ದುಷ್ಕರ್ಮಿಗಳು 20 ಲಕ್ಷ ರುಪಾಯಿ ದೋಚಿದ್ದುಈ ಖಾತೆ ಹ್ಯಾಕ್ ಆಗಿರುವುದಾಗಿ ಶೋಭಾ ಕರಂದ್ಲಾಜೆ ಒಪ್ಪಿಕೊಂಡಿದ್ದಾರೆ.
ಈ ಸಂಬಂಧ ಶೋಭಾ ಅವರು ಸಂಸತ್ ಭವನ ಮಾರ್ಗದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

