ಸಕಲೇಶಪುರ – ಸುಬ್ರಹ್ಮಣ್ಯ ಕಾಮಗಾರಿ ಹಿನ್ನೆಲೆ : ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿ ವಿಸ್ತರಣೆ  – vishwanews24

Featured, ದಕ್ಷಿಣ ಕನ್ನಡ

ಸಕಲೇಶಪುರ-ಸುಬ್ರಹ್ಮಣ್ಯ ಕಾಮಗಾರಿ ಹಿನ್ನೆಲೆ : ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿ ವಿಸ್ತರಣೆ 

ಸುಬ್ರಹ್ಮಣ್ಯ: ಮಂಗಳೂರು- ಬೆಂಗಳೂರು ರೈಲು ಮಾರ್ಗದ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ (ಘಾಟ್ ಸೆಕ್ಷನ್) ನಡುವಿನ ರೈಲ್ವೇ ವಿದ್ಯುದ್ದೀಕರಣ ಕಾರ್ಯವು ನಡೆಯುತ್ತಿರುವ ಕಾರಣ, ನೈಋತ್ಯ ರೈಲ್ವೇ ನ. 2ರಿಂದ ಡಿ. 15ರ ವರೆಗೆ ಪ್ರತೀದಿನ ನಾಲ್ಕು ಗಂಟೆಗಳ ಕಾಲ ಲೈನ್ ಬ್ಲಾಕ್ ತೆಗೆದುಕೊಳ್ಳಲಿದ್ದು, ಈ ಕಾರಣದಿಂದಾಗಿ ಕೆಲವು ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿಯನ್ನು ವಿಸ್ತರಿಸಲಾಗಿದೆ.

ರೈಲು ಸಂಖ್ಯೆ 16539 ಯಶವಂತಪುರ- ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಮೊದಲು ನ. 1ರ ರವರೆಗೆ ರದ್ದುಗೊಂಡಿತ್ತು. ಈಗ ನ. 8ರಿಂದ ಡಿ. 13ರ ವರೆಗೆ ರದ್ದುಗೊಳ್ಳಲಿದೆ.

ಬಂಟ್ವಾಳ : ಡಿವೈಡರ್ ಗೆ ಕಾರು ಡಿಕ್ಕಿ – ಚಾಲಕ ಮೃತ್ಯು ; ನಾಲ್ವರಿಗೆ ಗಾಯ – vishwanews24

ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಮೊದಲು ನ. 2ರ ವರೆಗೆ ರದ್ದುಗೊಂಡಿತ್ತು, ಈಗ ನ. 9ರಿಂದ ಡಿ. 14ರ ವರೆಗೆ ರದ್ದುಗೊಳ್ಳಲಿದೆ. ರೈಲು ಸಂಖ್ಯೆ 16575 ಯಶವಂತಪುರ – ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್ ಮೊದಲು ಅ. 30ರ ವರೆಗೆ ರದ್ದುಗೊಂಡಿತ್ತು. ಈಗ ನ. 2ರಿಂದ ಡಿ. 14ರ ವರೆಗೆ ರದ್ದುಗೊಳ್ಳಲಿದೆ.

ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್- ಯಶವಂತಪುರ ಎಕ್ಸ್‌ಪ್ರೆಸ್ ಮೊದಲು ಅ. 30 ರವರೆಗೆ ರದ್ದುಗೊಂಡಿತ್ತು. ಈಗ ನ. 3ರಿಂದ ಡಿ. 15ರ ವರೆಗೆ ರದ್ದುಗೊಳ್ಳಲಿದೆ.

ರೈಲು ಸಂಖ್ಯೆ 16515 ಯಶವಂತಪುರ – ಕಾರವಾರ ಎಕ್ಸ್‌ಪ್ರೆಸ್ ಮೊದಲು ಅ. 31ರ ವರೆಗೆ ರದ್ದುಗೊಂಡಿತ್ತು. ಈಗ ನ. 3ರಿಂದ ಡಿ. 15ರ ವರೆಗೆ ರದ್ದುಗೊಳ್ಳಲಿದೆ. ರೈಲು ಸಂಖ್ಯೆ 16516 ಕಾರವಾರ – ಯಶವಂತಪುರ ಎಕ್ಸ್‌ಪ್ರೆಸ್ ಮೊದಲು ನ. 1ರ ವರೆಗೆ ರದ್ದುಗೊಂಡಿತ್ತು. ಈಗ ನ. 4ರಿಂದ ಡಿ. 16ರ ವರೆಗೆ ರದ್ದುಗೊಳ್ಳಲಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ :  ಹಾಸಿಗೆ, ದಿಂಬು ಕೇಳಿದ್ದ ದರ್ಶನ್‌ಗೆ ಬಿಗ್‌ ಶಾಕ್ – vishwanews24

Leave a Reply