ಸಚಿವ ಸಂಪುಟ ವಿಸ್ತರಣೆಗೆ ಮೈತ್ರಿ ಸರ್ಕಾರದಲ್ಲಿ ಮತ್ತೆ ಶಾಸಕರ ಭಿನ್ನಾಭಿಪ್ರಾಯ : ಕಾಂಗ್ರೆಸ್ ತಮ್ಮ ನೆರವಿಗೆ ಬಂದ ಕುರುಬ ಸಮಾಜಕ್ಕೆ ಕೈ ಕೊಡಲು ಹೊರಟಿದೆಯೇ?
ರಾಜ್ಯ ರಾಜಕೀಯ ಚುನಾವಣೆಯ ನಂತರ ದಿನದಿನಕ್ಕೂ ಒಂದಲ್ಲಾ ಒಂದು ವಿಚಾರ ಅಥವಾ ವಿವಾದದಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು , ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಲೇ ಇದೆ. ಇದೀಗ ಖಾತೆ ಹಂಚಿಕೆಯ ವಿಷಯ ಮುಂದೆ ಬಂದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.ಕಾಂಗ್ರೆಸ್ ಪಕ್ಷಕ್ಕೆ ಮಾನ್ಯ ಮುಖ್ಯಮಂತ್ರಿಯವರಾದ ಕುಮಾರ ಸ್ವಾಮಿಯವರು ಇಂಧನ ಇಲಾಖೆಯ ಆಫರ್ ನೀಡಿರುವ ಮಾಹಿತಿ ಬಂದಿದೆ.
ಡಿಕೆಶಿ ಅವರಿಗಾಗಿ, ಇಂಧನ ಖಾತೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಆಫರ್ ಮಾಡಿರುವುದಾಗಿ ಹಲವರ ಅಭಿಪ್ರಾಯವಾಗಿದೆ.ಕುಮಾರಸ್ವಾಮಿ ಅವರು ತಾವು ನೀಡುತ್ತಿರುವ ಈ ಆಫರ್ ಬಗ್ಗೆ ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸುವುದಾಗಿಯೂ ಹೇಳಿಕೆ ನೀಡಲಾಗಿದೆ. ಇದರ ಹಿಂದಿನ ಉದ್ದೇಶ ವಕ್ಕಲಿಗ ಸಮಯದಾಯದ ಬೆಂಬಲ ಪಡೆಯುವುದಾಗಿದೆ. ಆದರೆ ಇಲ್ಲಿ ಅಂದರೆ ಈ ಬಾರಿ ಕಾಂಗ್ರೆಸ್ ಗೆಲುವಿಗೆ ಕಾರಣವಾದ ಕುರುಬ ಸಮಾಜವನ್ನು ಕಡೆಗಣಿಸಲಾಗಿದೆ ಎಂದು ಆ ಸಮುದಾಯದ ಶಾಸಕರು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ಖಾತೆ ಹಂಚಿಕೆಯ ವಿಷಯದಲ್ಲಿ ಸಿದ್ಧರಾಮಯ್ಯನವರೇ ತಮ್ಮ ಕುರುಬ ಸಮಾಜದ ಶಾಸಕರಿಗೆ ಮಂತ್ರಿ ಪದವಿಗೆ ಗಮನ ನೀಡುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದು, ಕಾಂಗ್ರೆಸ್ ತಮ್ಮ ನೆರವಿಗೆ ಬಂದ ಕುರುಬ ಸಮಾಜಕ್ಕೆ ಕೈ ಕೊಡಲು ಹೊರಟಿದೆಯೇ? ಎಂಬುದು ಹಲವರ ಅನುಮಾನವಾಗಿದೆ.
