ಸಚಿವ ಹೆಚ್‌.ಸಿ ಮಹದೇವಪ್ಪ ಹೆಸರಿನಲ್ಲಿ ಬರೋಬ್ಬರಿ 27 ಲಕ್ಷ ರೂ. ವಂಚಿಸಿದ ಖತರ್ನಾಕ್‌ ಮಹಿಳೆ – vishwanews24

Featured, ರಾಜ್ಯ ನ್ಯೂಸ್

ಸರ್ಕಾರಿ ಯೋಜನೆಗಳ ಸವಲತ್ತು ಕೊಡಿಸೋದಾಗಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದು ದೋಖಾ

ಮೈಸೂರು: ಸಚಿವ ಹೆಚ್.ಸಿ ಮಹದೇವಪ್ಪಅವರ ಹೆಸರಿನಲ್ಲಿ ಖತರ್ನಾಕ್‌ ಮಹಿಳೆಯೊಬ್ಬಳು 27 ಲಕ್ಷ ರೂ. ವಂಚಿಸಿರುವ ಘಟನೆ ಜಿಲ್ಲೆಯ ಟಿ.‌ ನರಸೀಪುರ  ತಾಲೂಕಿನ ಕೊಳತ್ತೂರು ಗ್ರಾಮದಲ್ಲಿ ನಡೆದಿದೆ.

ಇದೇ ಗ್ರಾಮದ ಜ್ಯೋತಿ ಎಂಬ ಮಹಿಳೆ, ಸರ್ಕಾರದ ವಿವಿಧ ಯೋಜನೆಗಳ ಸವಲತ್ತು ಹಾಗೂ ಸಾಲ ಕೊಡಿಸುವುದಾಗಿ ನಂಬಿಸಿ ನೂರಾರು ಮಹಿಳೆಯರು ಮತ್ತು ಯುವಕರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದಾಳೆ .

ಬರೋಬ್ಬರಿ 27 ಲಕ್ಷ ರೂ. ವರೆಗೆ ಹಣ ವಂಚನೆ ಮಾಡಿದ್ದಾಳೆ. ವಂಚನೆಗೊಳಗಾದ ಗ್ರಾಮಸ್ಥರು ತಲಕಾಡು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದು, ನ್ಯಾಯ ಕೊಡಿಸುವಂತೆ ಪೋಲೀಸರಿಗೆ ಮೊರೆ ಇಟ್ಟಿದ್ದಾರೆ. ಪೊಲೀಸರು ತನಿಖೆಗೆ ತಯಾರಿ ನಡೆಸಿದ್ದಾರೆ.

ಬೆಳಪು: “ದಿ ವಾಲ್ನಟ್ ವೆಸ್ಟ್’ ಪೀಠೋಪಕರಣ ಉತ್ಪಾದನಾ ಘಟಕ ಉದ್ಘಾಟನೆ ಮತ್ತು ಶಂಕುಸ್ಥಾಪನೆ – vishwanews24

Leave a Reply