ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಅವರನ್ನು ಭಾರತದ ಭವ್ಯ ಪ್ರಜೆಗಳನ್ನಾಗಿ ರೂಪಿಸುವ ಇಡೀ ಶಿಕ್ಷಕರ ಸಮುದಾಯಕ್ಕೆ ಅಭಿನಂದನೆ ಸಲ್ಲಿಸಿದ ರಾಷ್ಟ್ರಪತಿ -Vishwanews24
ನವದೆಹಲಿ:ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಅವರನ್ನು ಭಾರತದ ಭವ್ಯ ಪ್ರಜೆಗಳನ್ನಾಗಿ ರೂಪಿಸುವ ಮೂಲಕ ಸಮೃದ್ಧ ಮತ್ತು ಸದೃಢ ರಾಷ್ಟ್ರವನ್ನು ನಿರ್ಮಿಸಲು ಅಮೂಲ್ಯ ಮಾನವ ಸಂಪನ್ಮೂಲದ ಕೊಡುಗೆ ನೀಡುತ್ತಿರುವ ಇಡೀ ಶಿಕ್ಷಕರ ಸಮುದಾಯಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅಭಿನಂದನೆ ಸಲ್ಲಿಸಿದ್ದಾರೆ.
ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ದೇಶದ ಶಿಕ್ಷಕರಿಗೆ ಶುಭಕೋರಿದ್ದಾರೆ. ಶಿಕ್ಷಕರಿಗೆ ನನ್ನ ಶುಭಾಶಯಗಳು ಮತ್ತು ಸನ್ಮಾನಿಸಲು ನನಗೆ ತುಂಬಾ ಸಂತೋಷವಾಗಿದೆ ಎಂದು ಕೋವಿಂದ್ ತಮ್ಮ ಸಂದೆಶದಲ್ಲಿ ತಿಳಿಸಿದರು. ಮಾಜಿ ರಾಷ್ಟ್ರಪತಿ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಮೂಲಕ, ನಾವು ಒಬ್ಬ ಪ್ರಖ್ಯಾತ ರಾಜಕಾರಣಿ, ಶ್ರೇಷ್ಠ ವಿದ್ವಾಂಸರು ಮತ್ತು ಬೋಧನಾ ಭ್ರಾತೃತ್ವದ ಅತ್ಯಂತ ಶ್ರೇಷ್ಠ ವ್ಯಕ್ತಿಗಳಿಗೆ ಗೌರವ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.
