Featured

ಸಮಗ್ರ ಗ್ರಾಮಾಭಿವೃದ್ಧಿಗಾಗಿ ಬಿಜೆಪಿ ಬೆಂಬಲಿತ ಗ್ರಾ.ಪಂ. ಅಭ್ಯರ್ಥಿಗಳನ್ನು ಗೆಲ್ಲಿಸಿ ಶಾಸಕ ರಘುಪತಿ ಭಟ್ -Vishwanews24

ಸಮಗ್ರ ಗ್ರಾಮಾಭಿವೃದ್ಧಿಗಾಗಿ ಬಿಜೆಪಿ ಬೆಂಬಲಿತ ಗ್ರಾ.ಪಂ. ಅಭ್ಯರ್ಥಿಗಳನ್ನು ಗೆಲ್ಲಿಸಿ ಶಾಸಕ ರಘುಪತಿ ಭಟ್ -Vishwanews24

ಉಡುಪಿ : ಗ್ರಾಮಗಳಉದ್ಧಾರವೇ ದೇಶದಉದ್ಧಾರ.ಇಂದು ಗ್ರಾಮ ಪಂಚಾಯತ್‌ಸಹಿತ ವಿವಿಧ ಸ್ತರದ ಸ್ಥಳೀಯಾಡಳಿತ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರದಲ್ಲಿಬಿಜೆಪಿನೇತೃತ್ವದ ಅಭಿವೃದ್ಧಿ ಪರಆಡಳಿತವಿದೆ.ಈ ಪರ್ವ ಕಾಲದಲ್ಲಿ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಭ್ಯರ್ಥಿಗಳನ್ನು ಗರಿಷ್ಠ ಸಂಖ್ಯೆಯಲ್ಲಿ ಗೆಲ್ಲಿಸಿಕೊಡುವಮೂಲಕ ಜನತೆ ಗ್ರ‍್ರಾಮಾಭಿವೃದ್ಧಿಗೆ ತಮ್ಮ ಅಮೂಲ್ಯ ಕೊಡುಗೆ ನೀಡಬೇಕುಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದರು.

ಅವರು ಪಂದುಬೆಟ್ಟುನಲ್ಲಿ ನಡೆದ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಷದ ಪ್ರಮುಖರು, ಗ್ರಾ.ಪಂ. ಚುನಾವಣಾ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಅಭಿವೃದ್ಧಿಗೆ ಇನ್ನೊಂದು ಹೆಸರು ಬಿಜೆಪಿ ಎಂಬ ರೀತಿಯಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಸರಕಾರಗಳು ವಿನೂತನ ಜನಪರ ಯೋಜನೆಗಳ ಅನುಷ್ಠಾನಮತ್ತು ವಿಶಿಷ್ಟ ಕಾರ್ಯಸಾಧನೆಗಳ ಮೂಲಕಸರ್ವಸ್ಪರ್ಶಿ ಸರ್ವವ್ಯಾಪಿಯಾಗಿದಾಖಲೆಯ ಅಭಿವೃದ್ಧಿಯತ್ತ ದಾಪುಗಾಲುಹಾಕುತ್ತಿವೆ. ಉಜ್ವಲ ಉಚಿತ ಗ್ಯಾಸ್‌ವಿತರಣೆ, ಕೃಷಿ ಸಮ್ಮಾನ್ ಯೋಜನೆ, ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಸಹಾಯಹಸ್ತ,ಆರ್ಥಿಕಪುನಶ್ಚೇತನಕ್ಕೆಸಹಾಯಧನ,ಸ್ವೋಉದ್ಯೋಗ ಸೃಷ್ಠಿಸುವಆತ್ಮನಿರ್ಬರಭಾರತ ಯೋಜನೆ,ರೈತ ಸ್ನೇಹಿಯಾಗಿರುವ ನೂತನ ಕೇಂದ್ರಕೃಷಿಕಾಯ್ದೆ, ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಗೋಹತ್ಯೆ ನಿಷೇಧ ಮಸೂದೆ,ಗ್ರಾಮಾಂತರ ರಸ್ತೆಗಳಉನ್ನತೀಕರಣ ಇವೇ ಮುಂತಾದಜನಪರ, ಅಭಿವೃದ್ಧಿಪರನಡೆ ಜನಮಾನಸದಲ್ಲಿಬಿಜೆಪಿ ನೇತೃತ್ವದಆಡಳಿತದಲ್ಲಿಭರವಸೆಮೂಡಿಸಿವೆಎಂದರು.

ಗ್ರಾಮ ಪಂಚಾಯತ್ ಚುನಾವಣೆ ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಚುನಾವಣೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಆಡಳಿತಕ್ಕೆ ಬಂದ ಬಳಿಕ ಗ್ರಾಮಾಂತರ ಪ್ರದೇಶಗಳಲ್ಲಿ

ಹಿಂದೆಂದೂ ಕಂಡು ಕೇಳರಿಯದರೀತಿಯಲ್ಲಿ ಅಭಿವೃದ್ಧಿಯಶಖೆ ಆರಂಭಗೊAಡಿದೆ. ಕಡೆಕಾರು-ಅಂಬಲಪಾಡಿ ಪ್ರದೇಶದಲ್ಲಿ ರೂ.೫ ಕೋಟಿ ಅನುದಾನದಲ್ಲಿ ನದಿದಂಡೆ ರಚನೆ ಕಾಮಗಾರಿಗೆ ಟೆಂಡರ್ ಮಂಜೂರಾತಿಗೊAಡು ಕಾಮಗಾರಿ ಪ್ರಾರಂಭಗೊAಡಿದೆ.ವಾರಾಹಿ ಕುಡಿಯುವನೀರಿನ ಯೋಜನೆಯು ೨೦೨೨ ಮಾರ್ಚ್ನಲ್ಲಿ ಸಂಪೂರ್ಣಗೊಳ್ಳಲಿದ್ದು ಉಡುಪಿ ನಗರದಿಂದ ಅಂಬಲಪಾಡಿ ಗ್ರಾ.ಪಂ. ಸಹಿತ ಉಡುಪಿ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಗೂ ನಿರಂತರ ಶುದ್ಧ ನೀರುಪೂರೈಕೆಗೆ ಸುವ್ಯವಸ್ಥೆಮಾಡಲಾಗುವುದು.ಅಂಬಲಪಾಡಿ ಗ್ರಾ.ಪ.ವ್ಯಾಪ್ತಿಯ ಕಸ ನಿರ್ವಹಣೆಯನ್ನು ಉಡುಪಿ ನಗರಸಭೆಯ ಮಾದರಿಯಲ್ಲೇ ಕರ್ವಾಲುಘಟಕದ ಮೂಲಕನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು.ಅಂಬಲಪಾಡಿ ಗ್ರಾ.ಪಂ.ಗೆ ಸಂಪರ್ಕ ಕೊಂಡಿಯಾಗಿರುವ ಆದಿವುಡುಪಿ-ಮಲ್ಪೆ ರಾಜ್ಯ ಹೆದ್ದಾರಿಯನ್ನು ೧೦೦ ಫೀಟ್ ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸಲು ರೂ.೯೧ ಕೋಟಿ ಅನುದಾನ ಮಂಜೂರಾಗಿದ್ದು ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯಸರಕಾರಗಳು ಹಾಗೂ ಎಲ್ಲ ಸ್ತರದ ಜನಪ್ರತಿನಿಧಿಗಳ ಸಹಕಾರದೊಂದಿಗೆ ಎಲ್ಲಾಅಭಿವೃದ್ಧಿ ಕೆಲಸ ಕಾರ್ಯಗಳುಇನ್ನಷ್ಟು ವೇಗ ಪಡೆಯಲಿವೆ.ಅಭಿವೃದ್ಧಿಯೇಬಿಜೆಪಿ ಗೆಲುವಿಗೆ ಶ್ರೀರಕ್ಷೆಯಾಗಿರುವಈ ಸಂದರ್ಭದಲ್ಲಿಪಕ್ಷದ ಕಾರ್ಯಕರ್ತರು ಸರಕಾರದ ಸಾಧನೆಗಳನ್ನುಮನೆಮನೆಗೆ ತಲುಪಿಸಿಬಿಜೆಪಿ ಬೆಂಬಲಿತ ಎಲ್ಲಾ ಅಭ್ಯರ್ಥಿಗಳಅಂತರದಗೆಲುವಿಗೆ ಕಂಕಣಬದ್ಧರಾಗಿ ಶ್ರಮಿಸಬೇಕು ಎಂದು ಶಾಸಕ ಭಟ್ ಕರೆ ನೀಡಿದರು.

ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಸಭೆಯ ಅಧ್ಯಕ್ಷತೆವಹಿಸಿ ಅಭ್ಯರ್ಥಿಗಳಿಗೆ ಶುಭಹಾರೈಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ ಮತ್ತು ಅಂಬಲಪಾಡಿ ಗ್ರಾ.ಪಂ. ಚುನಾವಣಾ ಉಸ್ತುವಾರಿ ಗಿರೀಶ್ ಎಮ್. ಅಂಚನ್ ಚುನಾವಣಾ ಪ್ರಚಾರಹಾಗೂ ಗೆಲುವಿನ ಕಾರ್ಯತಂತ್ರಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು,ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಜಿಲ್ಲಾ ಸಹವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು,ಬಿಜೆಪಿ ಉಡುಪಿ ನಗರ ಉಪಾಧ್ಯಕ್ಷ ವೆಂಕಟರಮಣ ಕಿದಿಯೂರು, ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್, ಚುನಾವಣಾ ಸಹ ಉಸ್ತುವಾರಿ ರೋಷನ್ ಶೆಟ್ಟಿ, ಬಿಜೆಪಿ ಅಂಬಲಪಾಡಿ-ಕಡೆಕಾರು ಮಹಾಶಕ್ತಿಕೇಂದ್ರದ ಅಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸಹ ಸಂಚಾಲಕ ಉಮೇಶ್ ಪೂಜಾರಿ ಕುತ್ಪಾಡಿ, ಶಕ್ತಿ ಕೇಂದ್ರಗಳ ಅಧ್ಯಕ್ಷರಾದ ನಾಗರಾಜ್ ಕರ್ಕೇರ ಕಿದಿಯೂರು, ವಿಜಯ ಶೆಟ್ಟಿ ಕಪ್ಪೆಟ್ಟು, ಪಕ್ಷದಪ್ರಮುಖರು,ವಿವಿಧ ಸ್ತರದ ಪದಾಧಿಕಾರಿಗಳು,ಮಾಜಿ ಗ್ರಾ.ಪಂ. ಸದಸ್ಯರು,ಗ್ರಾ.ಪಂ. ಚುನಾವಣಾ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Vishwa News 24

Recent Posts

ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ – vishwanews24

ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…

2 hours ago

ಮಹಾರಾಷ್ಟ್ರ : ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ- vishwanews24

ಮಹಾರಾಷ್ಟ್ರ : ಮಳೆ ಅಬ್ಬರ - ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ…

3 hours ago

ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ  – vishwanews24

ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ  ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ…

3 hours ago

ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ – vishwanews24

ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…

3 hours ago

ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ – vishwanews24

ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…

3 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

3 days ago