ಸಮಾಜ ಸೇವೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಿಗೆ ಕೇರಳ ರಾಜ್ಯದಲ್ಲಿ ಸನ್ಮಾನ:vishwanews24

Featured, ಉಡುಪಿ

ಸಮಾಜ ಸೇವೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಿಗೆ ಕೇರಳ ರಾಜ್ಯದಲ್ಲಿ ಸನ್ಮಾನ:vishwanews24

ಕಾಪು: ಇಕಾನಾಮಿ ಸೊಸೈಟಿ ಆಫ್ ಇಂಡಿಯಾ ಇವರು ದೆಹಲಿಯಲ್ಲಿ ಪಂಚತಾರಾ ಹೋಟೆಲಿನಲ್ಲಿ ನಡೆದ ಸಮಾರಂಭದಲ್ಲಿ ಸಮಾಜಸೇವೆಯಲ್ಲಿ ಗೋಲ್ಡ್ ಸ್ಟಾರ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಕಾಪುವಿನ ಮೂವರು ಸಮಾಜ ಸೇವಕರಾದ ಜನಸಂಪರ್ಕ ಜನಸೇವಾ ವೇದಿಕೆ ಕಾಪು ಇದರ ಅಧ್ಯಕ್ಷರಾದ ದಿವಾಕರ ಬಿ.ಶೆಟ್ಟಿ ಕಳತ್ತೂರು,ಸಮಾಜಸೇವಾ ವೇದಿಕೆ ಕಾಪು ಇದರ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಉಭಯ ವೇದಿಕೆ ಸಂಚಾಲಕರಾದ ದಿವಾಕರ.ಡಿ.ಶೆಟ್ಟಿ ಕಳತ್ತೂರು ಇವರನ್ನು ಕೇರಳ ರಾಜ್ಯದ ಕುಂಬಳೆಯಲ್ಲಿ ಕೈರಾಳಿ ಪ್ರಕಾಶನ ಕಾಸರಗೋಡು ಇವರ ಆಶ್ರಯದಲ್ಲಿ ಕುಂಬಳೆ ಮಾಧವ ಪೈ ಸ್ಮಾರಕ ಸಭಾಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ||ಎಂ.ಎನ್ ನಂದೀಶ್ ಹಂಚೆ ಇವರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕರಾದ ಡಾ//ರತ್ನಾಕರ ಮಲ್ಲಾಮೂಲೆ, ಕರ್ನಾಟಕರಾಜ್ಯ ಪುಸ್ತಕ ಪ್ರಾಧಿಕಾರದ ಸದಸ್ಯ ಟಿ.ಎ.ಎನ್ ಖಂಡಿಗೆ , ಕುಂಬಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಸಾರ್ ಮೊಗ್ರಾಲ್ ಲೇಖಕಿ ಡಾ||ಪ್ರಮೀಳಾ ಮಾಧವ ಉಡುಪಿ ಪರ್ಯಾಯ ಮಹೋತ್ಸವದ ಕಾವ್ಯದಕ್ಷ ಪ್ರದೀಪ ಕಲ್ಕೂರ, ಗಡಿನಾಡ ಅಕಾಡೆಮಿ ಕಾಸರಗೋಡು ಮಾಜಿ ಅಧ್ಯಕ್ಷ ಪ್ರಭಾಕರ ಕಲ್ಲಾರಾಯ ನ್ಯಾಯವಾದಿ ಟಿ.ಎ ಗಂಗಾಧರನ್ ಕೈರಾಳಿ ಪ್ರಕಾಶನದ ವ್ಯವಸ್ಥಾಪಕರಾದ ಎ.ಆರ್ ಸುಬ್ಬಯ್ಯಕಟ್ಟೆ ,ಲೇಖಕಿ ಶ್ರೀಮತಿ ಸ್ನೇಹಲತಾ ದಿವಾಕರ್, ಸಾಹಿತಿಗಳು,ವಿದ್ವಾಂಸರು ಕೈರಾಳಿ ಪ್ರಕಾಶನದ ನಿರ್ದೆಶಕರುಗಳಾದ ಅಖಿಲೇಶ್ ನಗುಮುಗಂ ರವಿ ನಾಯ್ಕಷ್ಟು ಪ್ರೋ.ಶಿನಾಥ್ ಕಾಸರಗೋಡು, ಡಾ||ಮನೋಹರ್ ಎಂ.ಜಿ ಝಡ್.ಎ ಕಯ್ಯಾರ್ ,ಪ್ರಥ್ವಿರಾಜ್ ಶೆಟ್ಟಿ ಕುಂಬಳೆ ವಿದ್ಯಾಗಣೇಶ್ ಅಣಂಗೋರು ಮುಂತಾದವರು ಉಪಸ್ಥಿತರಿದ್ದರು.

Leave a Reply