Featured

ಸಮುದ್ರದ ಅಲೆಗಳ ಅಬ್ಬರಕ್ಕೆ ಮಕ್ಕಳ  ಮುಂದೆಯೇ ಕೊಚ್ಚಿ ಹೋದ ತಾಯಿ ; ವಿಡಿಯೋ ವೈರಲ್‌ – Vishwanews24

ಸಮುದ್ರದ ಅಲೆಗಳ ಅಬ್ಬರಕ್ಕೆ ಮಕ್ಕಳ  ಮುಂದೆಯೇ ಕೊಚ್ಚಿ ಹೋದ ತಾಯಿ-ವಿಡಿಯೋ ವೈರಲ್‌

ಮುಂಬಯಿ: ತಾಯಿಯೊಬ್ಬಳು ಪುಟ್ಟ ಮಕ್ಕಳ ಕಣ್ಣು ಮುಂದೆಯೇ ಸಮುದ್ರದ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ಹೃದಯ ಹಿಂಡುವ ಘಟನೆ ಮುಂಬಯಿಯ ಬಾಂದ್ರಾದಲ್ಲಿರುವ ಬ್ಯಾಂಡ್‌ಸ್ಟ್ಯಾಂಡ್ ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಜ್ಯೋತಿ ಸೋನಾರ್(32) ಮೃತ ಮಹಿಳೆ.

ಜ್ಯೋತಿ ಸೋನಾರ್ ಅವರು ಪತಿ ಹಾಗೂ ತನ್ನ ಮಕ್ಕಳೊಂದಿಗೆ ಪಿಕ್‌ ನಿಕ್‌ ಗೆಂದು ಜುಹು ಚೌಪಾಟಿಗೆ ಬಂದಿದ್ದರು. ಆದರೆ ಅಲೆಗಳ ಅಬ್ಬರ ಹೆಚ್ಚಾಗಿರುವ ಕಾರಣ ಜುಹು ಬೀಚ್‌ ಗೆ ಪ್ರವೇಶ ನಿಷೇಧಿಸಲಾಗಿತ್ತು. ಹೀಗಾಗಿ ಕುಟುಂಬ ಬಾಂದ್ರಾಕ್ಕೆ ಬಂದಿತ್ತು.

ಬಾಂದ್ರಾದಲ್ಲಿ ಸಮುದ್ರದ ಬಳಿ ಜ್ಯೋತಿ ತನ್ನ ಪತಿಯ ಜತೆ ಫೋಟೋ ತೆಗೆಸಿಕೊಳ್ಳಲು ಬಂಡೆಯ ಮೇಲೆ ಕೂತಿದ್ದಾರೆ. ಈ ಸಂದರ್ಭದಲ್ಲಿ ಸಮುದ್ರದ ಅಲೆಗಳು ಅಪ್ಪಳಿಸುತ್ತಿದ್ದರೂ ಫೋಟೋಗಾಗಿ ಜ್ಯೋತಿ ಗಂಡನನ್ನು ಹಿಡಿದುಕೊಂಡು ಕೂತಿದ್ದಾರೆ. ಮಕ್ಕಳ ಕೈಯಲ್ಲಿ ಮೊಬೈಲ್‌ ಕೊಟ್ಟು ಖುಷಿಯಿಂದ ಪೋಸ್‌ ಕೊಟ್ಟಿದ್ದಾರೆ. ಆದರೆ ರಭಸವಾಗಿ ಅಪ್ಪಳಿಸಿದ ಅಲೆಯೊಂದು ಜ್ಯೋತಿ ಅವರನ್ನು ಎಳೆದುಕೊಂಡೇ ಹೋಗಿದೆ. ಇದನ್ನು ನೋಡಿದ ಮಕ್ಕಳು “ಅಮ್ಮ ಅಮ್ಮ..” ಎಂದು ಕೂಗಲು ಶುರು ಮಾಡಿದ್ದಾರೆ.

ಈ ವೇಳೆ ಅಲ್ಲೇ ಇದ್ದ ಸ್ಥಳೀಯ ನಿವಾಸಿ ಮುಕೇಶ್‌ ಎನ್ನುವರು ಜ್ಯೋತಿ ಅವರ ಸೀರೆಯನ್ನು ಹಿಡಿದು ಅವರನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಮುಕೇಶ್‌ ಕೂಡ ಈ ಪ್ರಯತ್ನದಲ್ಲಿ ವಿಫಲವಾದಗ ಬೇರೆಯವರು ಮುಕೇಶ್‌ ಅವರ ಕಾಲನ್ನು ಎಳೆದು ಹೊರಕ್ಕೆ ಎಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಪೊಲೀಸರು, ಅಗ್ನಿಶಾಮಕ ದಳದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಜ್ಯೋತಿ ಅವರ ಮೃತದೇಹವನ್ನು ಹೊರಕ್ಕೆ ತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ವರದಿ ತಿಳಿಸಿದೆ. ಇದೀಗ ಮೊಬೈಲ್‌ನಲ್ಲಿ ಸೆರೆಯಾದ ವಿಡಿಯೋ ವೈರಲ್‌ ಆಗಿದೆ.

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

2 days ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

2 days ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

2 days ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

2 days ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

2 days ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

2 days ago