‘ಸರಿಗಪಮ’ ಋತ್ವಿಕ್ ಗೆ ಕಣ್ಣು ದಾನ ಮಾಡಲು ಮುಂದಾದ ಬಳ್ಳಾರಿಯ ತಾತ ಸಿದ್ಧಲಿಂಗನಗೌಡ..

Featured, ಜಿಲ್ಲೆ

ಬಳ್ಳಾರಿ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಇರುವ ಸ್ಪರ್ಧಿಗಳ ಪೈಕಿ ಗಮನ ಸೆಳೆದಿರುವವರಲ್ಲಿ ಋತ್ವಿಕ್ ಸಹ ಒಬ್ಬರು. ತನ್ನ ಹಾಡಿನಿಂದಲೇ ಎಲ್ಲರ ಗಮನ ಸೆಳೆದಿರುವ ಋತ್ವಿಕ್ ಕಂಠಸಿರಿಗೆ ಕರಗಿರುವ ವೃದ್ಧರೊಬ್ಬರು, ತಮ್ಮ ಕಣ್ಣುಗಳನ್ನೆ ಗಾಯಕನಿಗೆ ದಾನ ಮಾಡಲು ಮುಂದಾಗಿದ್ದಾರೆ.

ಪ್ರತಿ ವಾರ ಋತ್ವಿಕ್ ಹಾಡುವ ಹಾಡು ಎಲ್ಲರಿಗೂ ಇಷ್ಟ ಆಗುತ್ತದೆ. ಕಾರ್ಯಕ್ರಮದ ತೀರ್ಪುಗಾರರು ಸಹ ಋತ್ವಿಕ್ ಗಾಯನವನ್ನು ಹೋಗಳುತ್ತಾರೆ. ಆದರೆ, ಇದೀಗ ಋತ್ವಿಕ್ ಹಾಡು ಕೇಳಿ ಇಷ್ಟ ಪಟ್ಟಿರುವ ಒಬ್ಬ ತಾತ ಅವರಿಗೆ ಕಣ್ಣು ದಾನ ಮಾಡಲು ಮುಂದೆ ಬಂದಿದ್ದಾರೆ.

ಬಳ್ಳಾರಿಯ ಕೊಟ್ಟುರು ಗ್ರಾಮದ ಸಿದ್ಧಲಿಂಗನಗೌಡ ಎಂಬ ತಾತ ಋತ್ವಿಕ್ ಹಾಡು ಕೇಳಿ ಮನಸೊತಿದ್ದಾರೆ. 74 ವರ್ಷದ ಅಜ್ಜ ಋತ್ವಿಕ್ ಗೆ ನೇತ್ರದಾನ ಮಾಡಲು ಹಠ ಮಾಡುತ್ತಿದ್ದಾರೆ.

ನಾನು ಅಂಧ ಹಾಡುಗಾರ ಋತ್ವಿಕ್ ಗೆ ಕಣ್ಣುದಾನ ಮಾಡಲು ಸಿದ್ಧನಾಗಿದ್ದೇನೆ. ಒಂದು ತಿಂಗಳ ಹಿಂದೆ ನನ್ನ ದೇಹ, ಕಣ್ಣುಗಳನ್ನ ಬಳ್ಳಾರಿ ಸರ್ಕರಿ ಆಸ್ಪತ್ರೆಗೆ ಬರೆದುಕೊಟ್ಟಿದ್ದೇನೆ. ನನ್ನ ಸಾವಿನ ನಂತರ ನನ್ನ ಕಣ್ಣುಗಳನ್ನು ಋತ್ವಿಕ್‍ಗೆ ಅಳವಡಿಸಬಹುದು ಎಂದಿದ್ದಾರೆ.