ಚೆನ್ನೈ,: ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಬಡ್ತಿ ಪಡೆಯಬೇಕಾದರೆ ತಮ್ಮ ಸಮಗ್ರ ಆಸ್ತಿ ವಿವರಗಳನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ.
ಎಲ್ಲಾ ಸರ್ಕಾರಿ ನೌಕರರು ತಮ್ಮ ಚರ-ಸ್ಥಿರ ಆಸ್ತಿ, ಉಳಿತಾಯ ಹಾಗೂ ಸಾಲದ ಮಾಹಿತಿಯನ್ನು ಅಕ್ಟೋಬರ್ 31 ರೊಳಗೆ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕೆಂದು ಕಟ್ಟುನಿಟ್ಟಿನ ಗಡುವು ನೀಡಲಾಗಿದೆ. ನಿಗದಿತ ಗಡುವಿನೊಳಗೆ ಆಸ್ತಿ ವಿವರ ಸಲ್ಲಿಸುವ ನೌಕರರ ಹೆಸರುಗಳನ್ನು ಮಾತ್ರ ಮುಂದಿನ ಬಡ್ತಿ ಪರಿಗಣನಾ ಪಟ್ಟಿಗೆ ಸೇರಿಸಲಾಗುತ್ತದೆ. ಮಾಹಿತಿ ನೀಡದವರಿಗೆ ಬಡ್ತಿ ಭಾಗ್ಯ ಇಲ್ಲ.
ಇನ್ನು ಕೇವಲ ಸ್ವಂತ ಹೆಸರಿನಲ್ಲಿರುವ ಆಸ್ತಿ ಮಾತ್ರವಲ್ಲದೆ, ಬೇರೆಯವರ ಹೆಸರಿನಲ್ಲಿ (ಬೆನಾಮಿ ಅಥವಾ ಕುಟುಂಬ ಸದಸ್ಯರ ಹೆಸರಿನಲ್ಲಿ) ಖರೀದಿಸಿರುವ ಆಸ್ತಿ ವಿವರಗಳನ್ನೂ ನಮೂದಿಸಬೇಕು. ಜೊತೆಗೆ ಆ ವ್ಯಕ್ತಿಯೊಂದಿಗಿನ ಸಂಬಂಧವನ್ನೂ ಸ್ಪಷ್ಟವಾಗಿ ನಮೂದಿಸುವುದು ಕಡ್ಡಾಯವಾಗಿದೆ..
ಅಕ್ಟೋಬರ್ 31 ರೊಳಗೆ ಮಾಹಿತಿ ನೀಡಲು ವಿಫಲರಾಗುವ ನೌಕರರನ್ನು ‘ಸರ್ಕಾರಿ ನೌಕರರ ನಡವಳಿಕೆ ನಿಯಮಾವಳಿ’ಯನ್ನು ಉಲ್ಲಂಘಿಸಿದವರು ಎಂದು ಪರಿಗಣಿಸಿ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ನೌಕರರು ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಿ ತಮ್ಮ ಸ್ಥಿರ-ಚರ ಆಸ್ತಿಗಳು, ಬ್ಯಾಂಕ್ ಉಳಿತಾಯ ಹಾಗೂ ಠೇವಣಿಗಳು ಮತ್ತು ತಾವು ಹೊಂದಿರುವ ಸಾಲದ ವಿವರ ಮತ್ತು ಹೊಣೆಗಾರಿಕೆಯ ವಿವರಗಳನ್ನು ಸಲ್ಲಿಸಬೇಕು.
ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್‌ನ ಶೌರ್ಯ ಪ್ರಶಸ್ತಿ ಘೋಷಣೆ ಜೆರುಸಲೇಂ: ಫ್ಲೈದುಬೈ ವಿಮಾನದ ಅವಘಡ ತಪ್ಪಿಸಿ 174 ಪ್ರಯಾಣಿಕರ…
ಬೆಂಗಳೂರು: ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆ ; ಬಸವನಗರ ಮುಖ್ಯರಸ್ತೆ 20 ದಿನ ಬಂದ್ ಬೆಂಗಳೂರು: ಕೆರೆ ಕಾಲುವೆಗೆ ಸೇತುವೆ…
ರಾಜ್ಯಾದ್ಯಂತ 45 ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಹಲವು ಕಡೆ ನಿಯಮ ಉಲ್ಲಂಘನೆ ಪತ್ತೆ 70…
ಮೈಸೂರು ದಸರಾಕ್ಕೆ ಕೇಮಾರು ಶ್ರೀ ಸಹಿತ ಜಿಲ್ಲೆಯ ಸ್ವಾಮೀಜಿಗಳಿಗೆ ಆಹ್ವಾನ ನೀಡಿದ ಮುಖ್ಯಮಂತ್ರಿ ಡಿಕೆಶಿ ಮೂಡುಬಿದಿರೆ : ಅ.11 ರಂದು…
ಕಾರ್ಕಳದಲ್ಲಿ ಕಾಂಗ್ರೆಸ್‌ನಿಂದ ‘ಸತ್ಯ ಮೇವ ಜಯತೆ’ ಬೃಹತ್ ಪ್ರತಿಭಟನಾ ಸಭೆ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಆರ್ಥಿಕ ಭದ್ರತೆ…
ಮಂಜನಾಡಿ ಗುಡ್ಡ ಕುಸಿತ ದುರಂತಕ್ಕೆ ಒಂದೂವರೆ ವರ್ಷ: ಇನ್ನೂ ದಾಖಲಾಗದ ಎಫ್‌ಐಆರ್ ಮಂಗಳೂರು: ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಉರು…