ಕಾಪು: ಕಾಪು ಲಾಕ್ಡೌನ್ ಮುಂದುವರಿಕೆಯ ಹಿನ್ನೆಲೆಯಲ್ಲಿ ಕಾಪು ಮೀನುಮಾರುಕಟ್ಟೆ ಹಾಗೂ ಮಾರ್ಕೆಟ್ ಭಾಗದಲ್ಲಿ ಸಾಮಾಜಿಕ ಅಂತರ ಉಲ್ಲಂಘನೆಯಾಗುತ್ತಿದ್ದು ಈ ಬಗ್ಗೆ ಆದಿತ್ಯವಾರ ಭೇಟಿ ನೀಡಿದ ಉಡುಪಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಾರ್ಕೆಟ್ನಲ್ಲಿ ಸರಿಯಾದ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ನಡೆಯುತ್ತಿಲ್ಲ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ನಿರ್ದೇಶನದ ಪ್ರಕಾರ ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವುಡ ಮತ್ತು ಕಾಪು ಸಬ್ಇನ್ಸ್ಪೆಕ್ಟರ್ ರಾಘವೇಂದ್ರ ಅವರ ಜಂಟಿ ಕಾರ್ಯಾಚರಣೆಯಲ್ಲಿ ನಡೆಸಿ ಮೀನು ಮಾರಾಟಗಾರರಿಗೆ ಹಾಗೂ ಮಾಂಸದಂಗಡಿ ಮತ್ತು ಮಾರ್ಕೆಟ್ ಒಳಭಾಗದಲ್ಲಿ ಕಾರ್ಯಾಚರಣೆ ಮಾಡುವ ಅಗತ್ಯ ವಸ್ತುಗಳ ಅಂಗಡಿ ಮಾಲಕರಿಗೆ ಎಚ್ಚರಿಕೆ ನೀಡಿ ಸಾಮಾಜಿಕ ಅಂತರ ಮತ್ತು ಜನರನ್ನು ಗುಂಪು ಸೇರಿಸಿ ವ್ಯಾಪಾರ ಮಾಡುತ್ತಿರುವವರ ಮೇಲೆ ಕೇಸ್ ದಾಖಲಿಸಲಾಗುವುದು ಎಂದರು.
ಹಾಗೂ ತರಕಾರಿ ಹಾಗೂ ದಿನಸಿ ಅಂಗಡಿಗಳ ಮಾಲಕರು ಗ್ರಾಹಕರು ನಡೆಯಲು ಬಳಸುವ ಫುಟ್ಪಾತ್ ಮೇಲೆ ಅಳವಡಿಸಿರುವ ಎಲ್ಲಾ ಟೇಬಲ್ ತೆರವುಗೊಳಿಸಿ ಸುಗಮ ವ್ಯಾಪಾರ ಮಾಡಬೇಕೆಂದು ಆದೇಶ ಮಾಡಿದರು,ಕೇವಲ ಒಂದು ದಿನದ ಅವಕಾಶವನ್ನು ನೀಡಿ ಕಾನೂನು ಮೀರಿ ವರ್ತಿಸಿದ್ದಲ್ಲಿ ಮುಂದಿನ 15 ದಿನದವರೆಗೆ ಕಾಪು ಮಾರ್ಕೆಟ್ ಅನ್ನು ಬಂದ್ ಮಾಡುವುದಾಗಿ ತಾಕೀತು ಮಾಡಿದರು.
ಕಾಪು ಮಾರ್ಕೆಟ್ ನಲ್ಲಿ ಸುಂಕ ವಸೂಲಿ ಮಾಡುವವ ಈ ಭಾಗದಲ್ಲಿ ಗೊಂದಲ ಹಾಗೂ ಕಾನೂನು ಉಲ್ಲಂಘನೆಯಾಗದ ರೀತಿಯಲ್ಲಿ ಕ್ರಮಕೈಗೊಳ್ಳವುದು ಜವಾಬ್ದಾರಿಯಾಗಿದೆ ಸಾಮಾಜಿಕ ಅಂತರ ಮತ್ತು ಹತ್ತು ಗಂಟೆಯ ಒಳಗೆ ಇಡೀ ಮಾರ್ಕೆಟ್ ಬಂದ್ ಆಗದೇ ಇದ್ದಲ್ಲಿ ಸುಂಕ ವಸೂಲಿಗಾರನ ಮೇಲೆ ಕೇಸ್ ದಾಖಲಿಸಲಾಗುವುದಾಗಿ ಎಚ್ಚರಿಕೆ ನೀಡಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…