ಸಾಮಾಜಿಕ ಜಾಲತಾಣದಲ್ಲಿ ಸೌದಿ ದೊರೆ ಬಗ್ಗೆ ಅವಹೇಳನ ಪೋಸ್ಟ್ : ಸೌದಿಯಲ್ಲಿ ಕುಂದಾಪುರದ ಯುವಕ ಅರೆಸ್ಟ್ -Vishwanews24
ಉಡುಪಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸೌದಿ ದೊರೆ ಬಗ್ಗೆ ಅವಹೇಳನ ಮಾಡಿರುವ ಆರೋಪದಲ್ಲಿ ಕುಂದಾಪುರದ ಯುವಕ ಅರೆಸ್ಟ್ ಆಗಿದ್ದಾನೆ.
ಸೌದಿಯ ದಮಾಮ್ ನ ಕಂಪನಿಯಲ್ಲಿ ಕುಂದಾಪುರ ಮೂಲದ ಹರೀಶ್ ಬಂಗೇರ ಕೆಲಸ ಮಾಡುತ್ತಿದ್ದಾನೆ. ಈತ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಯ (ಸಿಎಎ) ಕಾಯ್ದೆಯ ಪರ ಬರೆದು ಪೋಸ್ಟ್ ಮಾಡಿದ್ದರು. ಈ ಬರಹದ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಕೂಡಲೇ ಹರೀಶ್, ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಕೇಳಿದ ವೀಡಿಯೋ ಅಪ್ಲೋಡ್ ಮಾಡಿದ್ದನು.
ಇದಾದ ಕೂಡಲೇ ಹರೀಶ್ ಬಂಗೇರ ಎಂಬ ಮತ್ತೊಂದು ಅಕೌಂಟಲ್ಲಿ ಸೌದಿ ದೊರೆಗೆ ಅವಹೇಳನ ಮಾಡಿದ ಫೋಟೋ, ಬರಹ ಅಪ್ಲೋಡಾಗಿದೆ. ಈ ಪೋಸ್ಟ್ ಸೌದಿಯಲ್ಲಿ ಶೇರ್ ಆಗಿದೆ. ಹರೀಶ್ ನನ್ನು ಸೌದಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಆದರೆ ಈ ಮಧ್ಯೆ ಇವರ ಹೆಸರಿನಲ್ಲಿ ಬೇರೆಯವರು ಯಾರೋ ನಕಲಿ ಖಾತೆ ತೆರೆದು ಅದರಲ್ಲಿ ಅಲ್ಲಿನ ರಾಜ, ಮೆಕ್ಕಾ ಬಗ್ಗೆ ನಿಂದನಾತ್ಮಕ ಬರಹ ಬರೆದು ಹಾಕಿದ್ದರಿಂದ ಮತ್ತೆ ಸಮಸ್ಯೆ ಸೃಷ್ಟಿಯಾಗಿದ್ದು, ಇದರಿಂದ ಹರೀಶ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.
