ಸಾಯೋ ತನಕ ನಿಮ್ಮ ಋಣವನ್ನು ಮರೆಯೋಲ್ಲ, ನೀವು ನಮಗೆ ಪುನರ್ಜನ್ಮ ಕೊಟ್ಟಿದ್ದೀರ : ಮಂಡ್ಯ ಜನತೆಗೆ ಧನ್ಯವಾದ ತಿಳಿಸಿದ ಚಾಲೆಂಜಿಂಗ್ ಸ್ಟಾರ್ -Vishwanews24
ಮಂಡ್ಯ : ಸಾಯೋ ತನಕ ನಿಮ್ಮ ಋಣವನ್ನು ಮರೆಯೋಲ್ಲ, ನೀವು ನಮಗೆ ಪುನರ್ಜನ್ಮ ಕೊಟ್ಟಿದ್ದೀರ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಜನತೆಗೆ ಧನ್ಯವಾದ ತಿಳಿಸಿದ್ದಾರೆ.
ನಗರದಲ್ಲಿ ಇಂದು ನಡೆದ ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾನು ಅಂಬರೀಷ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಲ್ಲ, ಬದಲಾಗಿ ಅವರ ರೂಪದಲ್ಲಿ ಕಾಣುವ ನಿಮ್ಮೆಲ್ಲರಿಗೆ ಜನ್ಮ ದಿನದ ಶುಭಾಶಯಗಳನ್ನು ಕೋರುತ್ತೇನೆ. ಸುಮಲತಾ ಅಮ್ಮನಿಗೆ ನೀವು ಬೆಂಬಲ ನೀಡಿ ಗೆಲ್ಲಸಿದ್ದೀರಿ. ಮಂಡ್ಯದಲ್ಲಿ ನಿಂತು ಮಾತನಾಡುವ ಯೋಗ್ಯತೆ ಕೊಟ್ಟಿದ್ದೀರಿ., ನಿಮ್ಮ ಪಾದಗಳಿಗೆ ನಮಸ್ಕರಿಸುತ್ತೇನೆ ಎಂದು ದಚ್ಚು ಭಾಗಿ ವೇದಿಕೆಕೆ ನಮಸ್ಕರಿಸಿದರು.
ಒಂದು ವೇಳೆ ನಾವು ಈ ಚುನಾವಣೆ ಹಬ್ಬದಲ್ಲಿ ಸೋಲು ಕಂಡಿದ್ದರೆ ನಮ್ಮ ಪರಿಸ್ಥಿತಿ ಬಹಳ ಕಷ್ಟವಾಗುತ್ತಿತ್ತು.ಕೆಲವರು ತಮ್ಮ ಪಕ್ಷದ ನಾಯಕರನ್ನು ಎದುರು ಹಾಕಿಕೊಂಡು ನಮ್ಮ ಪರ ಪ್ರಚಾರಕ್ಕೆ ನಿಂತರು ನಿಮ್ಮ ಸಹಕಾರ, ಬೆಂಬಲ, ಪ್ರೀತಿಗೆ ನಾನು ಸದಾ ಚಿರಋಣಿ ಎಂದರು.
