ಸಾರಿಗೆ ಉದ್ಯಮಿ ಪಾಂಗಳ ರಬೀಂದ್ರ ನಾಯಕ್ ನಿಧನ -Vishwanews24

Featured, ಉಡುಪಿ

ಸಾರಿಗೆ ಉದ್ಯಮಿ ಪಾಂಗಳ ರಬೀಂದ್ರ ನಾಯಕ್ ನಿಧನ -Vishwanews24

ಉಡುಪಿ: ಹಿರಿಯ ಸಾರಿಗೆ ಉದ್ಯಮಿ ಪಾಂಗಳ ರಬೀಂದ್ರ ನಾಯಕ್ (99) ವಯೋಸಹಜ ಅನಾರೋಗ್ಯದಿಂದ ಶನಿವಾರ ಬೆಳಗ್ಗೆ ಬುಡ್ನಾರಿನಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

1922ರ ಫೆಬ್ರವರಿ 9ರಂದು ಉಡುಪಿಯಲ್ಲಿ ಜನಿಸಿದ ಅವರು, ಬಾಂಬೆ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀ ಪಡೆದು ಸ್ವಲ್ಪ ಸಮಯ ಖಾಸಗಿ ಕಂಪೆನಿಯಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ 1951ರಲ್ಲಿ ಹನುಮಾನ್ ಟ್ರಾನ್ಸ್‌ಪೋರ್ಟ ಕಂಪನಿಗೆ ಸೇರಿ 1972ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ, ನಂತರ ಶಿವಮೊಗ್ಗದ ಶ್ರೀಗಜಾನನ ಮೋಟಾರ್ ಟ್ರಾನ್ಸ್‌ಪೋರ್ಟ ಕಂಪೆನಿ ವ್ಯವಸ್ಥಾಪಕ ನಿರ್ದೇಶಕರಾಗಿ 70ರ ದಶಕದಲ್ಲಿ ಅವಿಭಜಿತ ದ .ಕ. ಜಿಲ್ಲೆ ಸಹಿತ ಮಲೆನಾಡು ಭಾಗದಲ್ಲಿ ಹಳ್ಳಿಗೆ ಬಸ್ ಸೇವೆ ತಲುಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಉಡುಪಿ ಜಿಲ್ಲಾಸ್ಪತ್ರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ, ಜಿಲ್ಲಾಸ್ಪತ್ರೆಯ ಅಭಿವೃದ್ಧಿಗೆ ದೇಣಿಗೆಯನ್ನು ನೀಡಿದ್ದರು. ಉಡುಪಿಯ ಹಿರಿಯ ನಾಗರಿಕರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮಂಗಳೂರು: ಪೊಲೀಸ್ ಸಿಬ್ಬಂದಿ ಹೃದಯಘಾತದಿಂದ ನಿಧನ -Vishwanews24