ಉಡುಪಿ

ಸಾರ್ವಜನಿಕ ಗಣೇಶೋತ್ಸವ : ಸಂಪೂರ್ಣವಾಗಿ ನಿರ್ಭಂಧಿಸಿರುವುದನ್ನು ಸರಕಾರ ಪುರ್ನವಿಮರ್ಶಿಸಿ ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಿಸಲು ಅನುಮತಿ ನೀಡಬೇಕು : ಉಡುಪಿ ಜಿಲ್ಲಾ ಕಾಂಗ್ರೆಸ್ -Vishwanews24

ಉಡುಪಿ: ಜಾತಿ, ಮತ ಬೇಧಬಾವವಿಲ್ಲದೆ ಎಲ್ಲಾ ವರ್ಗದವರೂ ಪಾಲ್ಗೊಳ್ಳುವ ಈ ಹಬ್ಬವನ್ನು ಸಂಪೂರ್ಣವಾಗಿ ನಿರ್ಭಂಧಿಸಿರುವುದನ್ನು ಸರಕಾರ ಪುರ್ನವಿಮರ್ಶಿಸಿ ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಿಸಲು ಅನುಮತಿ ನೀಡಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ,

ಕೋವಿಡ್-19 ನೆಪ ಹೇಳಿ ರಾಜ್ಯ ಸರಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಯನ್ನು ಸಂಪೂರ್ಣ ನಿರ್ಬಂಧಿಸಿರುವುದು ಸಮಂಜಸವಲ್ಲ. ಗಣೇಶೋತ್ಸವವನ್ನು ಸರಳವಾಗಿ ಆಚರಿಸಬೇಕು ಎನ್ನುವ ಈ ಹಿಂದಿನ ಸರಕಾರದ ನಿರ್ಧಾರಕ್ಕೆ ಧಾರ್ಮಿಕ ಬಂಧುಗಳು ಸಹಮತ ವ್ಯಕ್ತಪಡಿಸಿರುವಾಗ ಈಗಾಗಲೇ ಸಾರ್ವಜನಿಕ ಗಣೇಶೋತ್ಸವವನ್ನು ನಡೆಸಲು ಪೂರ್ವ ತಯಾರಿ ನಡೆಸಿರುವ ಸಂಸ್ಥೆಗಳ ಪಾಡೇನು ? ಸಾರ್ವಜನಿಕ ಗಣೇಶೋತ್ಸವ ನಿಷೇಧಿಸಿ ತಮ್ಮ ತಮ್ಮ ಮನೆಗಳಲ್ಲಿಯೇ ಗಣೇಶ ಮೂರ್ತಿಯನ್ನು ಇಟ್ಟು ಧಾರ್ಮಿಕ ಆಚರಣೆಗಳನ್ನು ಮಾಡಬೇಕು ಎನ್ನುವ ಸರಕಾರದ ಮಾರ್ಗಸೂಚಿ ಸಾರ್ವಜನಿಕರ ಧಾರ್ಮಿಕ ಭಾವನೆಗೆ ಘಾಸಿಯಾದಂತೆ.

ರಾಜ್ಯದಲ್ಲಿ ಈಗಾಗಲೇ ಸರಕಾರದ ಮಾರ್ಗಸೂಚಿಯಂತೆ ಸಣ್ಣಪುಟ್ಟ ಸಮಾರಂಭಗಳು ನಡೆಯುತ್ತಿದೆ. ಬಾರ್, ಜಿಮ್, ದೇವಸ್ಥಾನಗಳು, ವ್ಯಾಪಾರ ಕೇಂದ್ರಗಳು ಕಾರ್ಯಚರಿಸುತ್ತಿವೆ. ಸಚಿವರುಗಳು, ಅಧಿಕಾರಿಗಳ ಜನ ಸಂಪರ್ಕ ಸಭೆಗಳು ನಿರಾತಂಕವಾಗಿ ನಡೆಯುತ್ತಿದೆ. ಹೀಗಿರುವಾಗ ಸರಕಾರ ಧಾರ್ಮಿಕ ಭಾವನೆಗೆ ಧಕ್ಕೆ ತರದಂತೆ ಸರಕಾರದ ಮಾರ್ಗಸೂಚಿಯಂತೆ ಗಣೇಶೋತ್ಸವ ಆಚರಿಸಲು ಅನುಮತಿ ನೀಡಬೇಕು. ಜಾತಿ, ಮತ ಬೇಧಬಾವವಿಲ್ಲದೆ ಎಲ್ಲಾ ವರ್ಗದವರೂ ಪಾಲ್ಗೊಳ್ಳುವ ಈ ಹಬ್ಬವನ್ನು ಸಂಪೂರ್ಣವಾಗಿ ನಿರ್ಭಂಧಿಸಿರುವುದನ್ನು ಸರಕಾರ ಪುರ್ನವಿಮರ್ಶಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಸರಕಾರವನ್ನು ಆಗ್ರಹಿಸಿದ್ದಾರೆ.

Vishwa News 24

Recent Posts

ಉಡುಪಿ : ಪೋಲಿಸ್ ಕಾನ್ಸ್ಟೇಬಲ್ ಹುದ್ದೆಗೆ ಉಚಿತ ತರಭೇತಿ ಕಾರ್ಯಗಾರ – vishwanews24

ಉಡುಪಿ : ಪೋಲಿಸ್ ಕಾನ್ಸ್ಟೇಬಲ್ ಹುದ್ದೆಗೆ ಉಚಿತ ತರಭೇತಿ ಕಾರ್ಯಗಾರ ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಲ್ಲಿ ಸಿವಿಲ್ ಪೋಲಿಸ್ ಕಾನ್ಸ್ಟೇಬಲ್ 3395…

3 minutes ago

ಕಾರ್ಕಳ : ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಆರೋಪಿ ಸೌಮ್ಯ ಶೆಟ್ಟಿ ಜಾಮೀನು ನಿರಾಕರಿಸಿದ ಹೈಕೋರ್ಟ್‌ – vishwanews24

ಕಾರ್ಕಳ : ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಆರೋಪಿ ಸೌಮ್ಯ ಶೆಟ್ಟಿ ಜಾಮೀನು ನಿರಾಕರಿಸಿದ ಹೈಕೋರ್ಟ್‌ ಉಡುಪಿ : ಕಳೆದ…

20 minutes ago

ಇಂಡಿಗೋ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಹೊಸ ‘ಲೈಟ್’ ದರದಲ್ಲಿ ಸಿಗಲಿದೆ  ಭರ್ಜರಿ ಲಾಭ -vishwanews24

ಇಂಡಿಗೋ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಹೊಸ 'ಲೈಟ್' ದರದಲ್ಲಿ ಸಿಗಲಿದೆ  ಭರ್ಜರಿ ಲಾಭ ನವದೆಹಲಿ: ಭಾರತದ ಪ್ರಮುಖ ವಿಮಾನಯಾನ…

36 minutes ago

ಉಡುಪಿ : ಸಿಎ, ವೈದ್ಯ, ಪತ್ರಿಕಾ ರಂಗದ ಸಾಧಕರಿಗೆ ಮಲಬಾರ್ ವಿಶ್ವ ಗೌರವ ಪುರಸ್ಕಾರ – vishwanews24

ಉಡುಪಿ : ಸಿಎ, ವೈದ್ಯ, ಪತ್ರಿಕಾ ರಂಗದ ಸಾಧಕರಿಗೆ ಮಲಬಾರ್ ವಿಶ್ವ ಗೌರವ ಪುರಸ್ಕಾರ ಉಡುಪಿ : ಮಲಬಾರ್ ಗೋಲ್ಡ್…

51 minutes ago

ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ -vishwanews24

ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ…

16 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು – vishwanews24

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು ಶಿರ್ವ : ಶಂಕರಪುರದ…

19 hours ago