ಸಾವಿರಾರು ಜನರಿಗೆ ದಾರಿದೀಪವಾದ ಕರ್ನಾಟಕ ಸಾಯಿಬಾಬ ಬಿರಿದಾಂಕಿತ ಗುರೂಜಿ ಸಾಯಿ ಈಶ್ವರ್ ಗೆ ಜುಲೈ 26 ರಂದು ಅಭಿನಂದನಾ ಕಾರ್ಯಕ್ರಮ.

Featured, ಉಡುಪಿ, ಜಿಲ್ಲೆ

ಕಾಪು : ಸಾಯಿ ಸಂತ್ವಾನ ಮಂದಿರ ಶಂಕರಪುರದಲ್ಲಿ ಗುರು ಪೂರ್ಣಿಮೆ ಹಾಗೂ ಸಾಯಿತುತ್ತು ಮಂಗಳೂರು ವಾಹನದ ಉದ್ಘಾಟನೆ ಮತ್ತು ಹೈದರಾಬಾದ್‍ನ “ರೀಚ್ ದ ಗಾಡ್ ” ಸಂಸ್ಥೆಯಿಂದ ಕರ್ನಾಟಕ ಸಾಯಿಬಾಬ ಬಿರುದಾಂಕಿತ ಗುರೂಜಿ ಸಾಯಿ ಈಶ್ವರ್ ರವರಿಗೆ ಅಭಿನಂದನಾ ಕಾರ್ಯಕ್ರಮವು ಜುಲೈ 26ರ ಬೆಳಿಗ್ಗೆ 10 ಗಂಟೆಗೆ ಶ್ರೀ ದ್ವಾರಕಮಯಿ ಸಾಯಿ ಸಾಂತ್ವಾನ ಮಂದಿರದಲ್ಲಿ ನಡೆಯಲಿದೆ.

ಕೊಡವೂರು ಶ್ರೀ ಸಾಯಿಬಾಬ ಮಂದಿರದ ಧರ್ಮದರ್ಶಿ ದಿವಾಕರ್ ಶೆಟ್ಟಿ ಧರ್ಮದರ್ಶಿ ದಿವಾಕರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಲಿರುವ ಕಾರ್ಯಕ್ರಮವನ್ನ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಲಿದ್ದಾರೆ.
ಸಾಯಿತುತ್ತು ಮಂಗಳೂರು ವಾಹನದ ಚಾಲನೆಯನ್ನ ಗುರ್ಮೆ ಸುರೇಶ್ ಶೆಟ್ಟಿ ಮಾಡಲಿದ್ದು , ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಾಯಿ ವಿದ್ಯಾ ಯೋಜನೆಗೆ ಚಾಲನೆ ನೀಡಲಿದ್ದಾರೆಂದು ಪ್ರಕಟನೆ ತಿಳಿಸಿದೆ.