ಕಾಪು, : ಸಿಡಿಲು ಬಿಡಿದ ಪರಿಣಾಮ ಒಂದು ಕರು ಹಾಗೂ ಹಸುವೊಂದು ಮೃತಪಟ್ಟರೆ, ಇನ್ನೊಂದರ ಸ್ಥಿತಿ ಗಂಭೀರವಾಗಿರುವ ಘಟನೆ ಕಾಪುವಿನ ಪಡುಗ್ರಾಮದ ಲೈಟ್ ಹೌಸ್ ರೋಡ್ ನಲ್ಲಿ ಮಂಗಳವಾರ ನಡೆದಿದೆ.
ಇಲ್ಲಿನ ಲೈಟ್ ಹೌಸ್ ರೋಡ್ ನಿವಾಸಿ ಶಂಸುದ್ದೀನ್ ಎಂಬವರ ಮನೆಯಲ್ಲಿದ್ದ ಮೂರು ಗೋವುಗಳಿಗೆ ಸಿಡಿಲು ಬಡಿದಿದ್ದು ಇದರಲ್ಲಿ ಎರಡು ಹಸುಗಳು ಸಿಡಿಲು ಬಡಿತಕ್ಕೆ ಸಾವನ್ನಪ್ಪಿದ್ದರೆ, ಇನ್ನೊಂದು ಹಸು ಜೀವನ್ಮರಣ ಸ್ಥಿತಿಯಲ್ಲಿದೆ. ಮುಂಜಾವ ಸುರಿದ ಗಾಳಿ ಮಳೆ ಜೊತೆಗೆ ಸಿಡಿಲಿನ ಆಘಾತಕ್ಕೆ ಮನೆ ಹಿಂಬದಿಯಲ್ಲಿರುವ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಎರಡು ಗೋವುಗಳು ಮೃತಪಟ್ಟಿವೆ.
ಶಂಸುದ್ದೀನ್ ಅವರು ಕಳೆದ ಎಂಟು ವರುಷಗಳಿಂದ ಹೈನುಗಾರಿಕೆ ಮೂಲಕ ಹಾಲು ಮಾರಿ ಜೀವನ ನಡೆಸುತ್ತಾ ಬಂದಿದ್ದು, ಹಸುಗಳ ಸಾವಿನಿಂದ ಕಂಗಾಲಾಗಿದ್ದಾರೆ. ಸಿಡಿಲಿನ ಬಡಿತಕ್ಕೀಡಾದ ಎರಡು ಜೆರ್ಸಿ ಹಸುಗಳನ್ನು ಇತ್ತೀಚೆಗಷ್ಟೇ ಬ್ಯಾಂಕ್ ಸಾಲ ಪಡೆದು ಖರೀದಿಸಿದ್ದರು. ಇದರಲ್ಲಿ ಒಂದು ಹಸು ಮೃತಪಟ್ಟರೆ, ಇನ್ನೊಂದು ಜೀವನ್ಮರಣ ಸ್ಥಿತಿಯಲ್ಲಿದೆ. ಬಲಿಯಾದ ಕರುವೂ ಒಂದು ವರುಷ ಜೆರ್ಸಿ ಕರುವಾಗಿದೆ. ಸ್ಥಳೀಯ ಪುರಸಭೆ ಸದಸ್ಯೆ ಮಮತಾ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ ಬೆಂಗಳೂರು,: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ…
ಕಾರವಾರ - ಮಡಗಾಂವ್ ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ ಶಿರಸಿ: ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ…
ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಸ್ಪರ್ಧೆಯಲ್ಲೂ ಇಲ್ಲ: ರಾಜಣ್ಣ ಖಡಕ್ ಹೇಳಿಕೆ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.…
ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ; ₹23.67 ಲಕ್ಷ ಮೌಲ್ಯದ ಸೊತ್ತು ವಶ…
ಉಡುಪಿ : ಯುವಕ ನಾಪತ್ತೆ ಉಡುಪಿ : ಮೂಲತಃ ನೇಪಾಳ ದೇಶದವರಾದ, ಪ್ರಸ್ತುತ ಮಣಿಪಾಲದ ಲಕ್ಷಿö್ಮÃಶ ನಗರದಲ್ಲಿರುವ ಹೋಟೆಲ್ ಒಂದರಲ್ಲಿ…
ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ ಉಡುಪಿ…