ಸಿಡಿ ಪ್ರಕರಣ : ಇಂತಹ 10 ವೀಡಿಯೋ ಬರಲಿ ನಾನು ಹೆದರಲ್ಲ , ಕಾನೂನು ಹೋರಾಟ ನಡೆಸಿ ನಿರ್ದೋಷಿ ಆಗಿ ಬರುತ್ತೇನೆ : ರಮೇಶ್ ಜಾರಕಿಹೊಳಿ -Vishwanews24
ಸಿಡಿ ಪ್ರಕರಣ : ಇಂತಹ 10 ವೀಡಿಯೋ ಬರಲಿ ನಾನು ಹೆದರಲ್ಲ , ಕಾನೂನು ಹೋರಾಟ ನಡೆಸಿ ನಿರ್ದೋಷಿ ಆಗಿ ಬರುತ್ತೇನೆ : ರಮೇಶ್ ಜಾರಕಿಹೊಳಿ -Vishwanews24
ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಎರಡನೇ ವೀಡಿಯೋ ಹೇಳಿಕೆ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಯುವತಿ ಯಾರದ್ದೋ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದು, ಇಂತಹ 10 ವೀಡಿಯೋ ಬರಲಿ ನಾನು ಹೆದರಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ, ಇದೊಂದು ದೊಡ್ಡ ಷಡ್ಯಂತ್ರವಾಗಿದ್ದು, ರಾಜಕೀಯವಾಗಿ ಎದುರಿಸಲು ಸಿದ್ಧನಿದ್ದೇನೆ. ನಾನು ದೂರು ನೀಡಿದ ಅರ್ಧ ಗಂಟೆ ನಂತ್ರ ವೀಡಿಯೋ ಬಂದಿರೋದು ಎಲ್ಲರಿಗೂ ಗೊತ್ತು. ಈ ರೀತಿಯ 10 ವೀಡಿಯೋಗಳು ಬಂದ್ರೂ ಎದುರಿಸುವ ಶಕ್ತಿ ನನ್ನಲಿದೆ ಎಂದರು.
ಇದನ್ನೂ ಓದಿ :ಸಿಡಿ ಪ್ರಕರಣ : ಯುವತಿಯ ಜೀವ ಹಾಗೂ ಮಾನ ರಕ್ಷಣೆಗೆ ಬದ್ಧನಾಗಿದ್ದೇನೆ : ರಮೇಶ್ ಕುಮಾರ್ -Vishwanews24
ಸಿಡಿ ಯುವತಿ ಮೊದಲ ಮತ್ತು ಎರಡನೇ ವೀಡಿಯೋದಲ್ಲಿ ಧ್ವನಿ ಹೇಗಿತ್ತು ಅನ್ನೋದನ್ನ ಗಮನಿಸಿ. ಸಮಯ ಬಂದಾಗ ನಾನು ನನ್ನ ಬಳಿ ಇರೋ ದಾಖಲಾತಿ ಬಿಡುಗಡೆ ಮಾಡ್ತೀನಿ. ಮೊನ್ನೆವರೆಗೂ ವಿಪಕ್ಷಗಳು ಹಾಗೂ ಸಿದ್ದರಾಮಯ್ಯ ಬಗ್ಗೆ ನನಗೆ ಅಪಾರಗೌರವ ಇತ್ತು. ರೇಪ್ ಕೇಸ್ ಹಾಕಿ ಅಂತ ಹೇಳಿದಾಗ ನನಗೂ ಒಂದು ಕ್ಷಣ ಶಾಕ್ ಆಯ್ತು. ಯಾಕೆ ಅವರು ಹಾಗೆ ಹೇಳಿದ್ರೂ ಅನ್ನೋದು ಗೊತ್ತಿಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಸದನದಲ್ಲಿ ಕಾಂಗ್ರೆಸ್ ಧರಣಿಗೆ ಅಸಮಾಧಾನ ಹೊರ ಹಾಕಿದರು.
ನಿರ್ದೋಷಿ ಆಗಿ ಬರುತ್ತೇನೆ: ನಾನು ಮಾತ್ರ ಯಾವುದೇ ತಪ್ಪು ಮಾಡಿಲ್ಲ. ಅವರನ್ನ ಜೈಲಿಗೆ ಕಳುಹಿಸದೇ ಬಿಡಲ್ಲ. ವೀಡಿಯೋದಲ್ಲಿ ಹೇಳುವ ಯುವತಿ ಪೊಲೀಸರ ಮುಂದೆ ಬಂದು ಹೇಳಲಿ. ಕಾಂಗ್ರೆಸ್ ನಾಯಕರ ಸಹಕಾರ ಕೇಳ್ತಾರೆ ಅಂದ್ರೆ ಇದರಲ್ಲಿರುವ ಷಡ್ಯಂತ್ರ ಅರ್ಥವಾಗಬೇಕಿದೆ. ನಾವು ಸಹ ಹಲವು ದಾಖಲೆ ಸಂಗ್ರಹಿಸಿದ್ದು, ಸದ್ಯ ನನ್ನ ಜೇಬಿನಲ್ಲಿರೋ ದಾಖಲೆ ತೋರಿಸಿದ್ರೆ ಎಲ್ಲರೂ ಶಾಕ್ ಆಗ್ತಾರೆ. ಮಹಾ ನಾಯಕನ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಆದ್ರೆ ನಾನು ಕಾನೂನು ಹೋರಾಟ ನಡೆಸಿ ನಿರ್ದೋಷಿ ಆಗಿ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬ್ಯಾಂಕ್ ಗ್ರಾಹಕರ ಗಮನಕ್ಕೆ: ಮಾರ್ಚ್ 27 ರಿಂದ ಸತತ ಏಳು ದಿನ ಬ್ಯಾಂಕ್ಗಳು ಕಾರ್ಯನಿರ್ವಹಿಸುವುದಿಲ್ಲ -Vishwanews24
