ಸಿಡಿ ಪ್ರಕರಣ : ಧಾರಾವಾಹಿ ರೀತಿಯಲ್ಲಿ ಆಡಿಯೊ, ವಿಡಿಯೋ ಬರುತ್ತಿದೆ : ಬಸವರಾಜ ಬೊಮ್ಮಾಯಿ -Vishwanews24
ಸಿಡಿ ಪ್ರಕರಣ : ಧಾರಾವಾಹಿ ರೀತಿಯಲ್ಲಿ ಆಡಿಯೊ, ವಿಡಿಯೋ ಬರುತ್ತಿದೆ : ಬಸವರಾಜ ಬೊಮ್ಮಾಯಿ -Vishwanews24
ಬೆಂಗಳೂರು, : ಸಿಡಿ ಪ್ರಕರಣವನ್ನು ಧಾರಾವಾಹಿಗೆ ಹೋಲಿಕೆ ಮಾಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ”ಧಾರಾವಾಹಿ ರೀತಿಯಲ್ಲಿ ಆಡಿಯೊ, ವಿಡಿಯೋ ಬರುತ್ತಿದೆ” ಎಂದು ಹೇಳಿದ್ದಾರೆ.
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ”ಎಸ್ಐಟಿ ಈ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಿದೆ. ವೈಜ್ಞಾನಿಕ ಪರಿಶೀಲನೆ ನಡೆಸಲಾಗುತ್ತದೆ. ಯಾವುದೇ ಒತ್ತಡ, ಪ್ರಭಾವ ಇಲ್ಲಿ ನಡೆಯುತ್ತಿಲ್ಲ. ಕಾನೂನು ಬದ್ದವಾಗಿ ಎಸ್ಐಟಿ ತನಿಖೆ ಮಾಡುತ್ತದೆ” ಎಂದು ಹೇಳಿದರು.
ಇದನ್ನೂ ಓದಿ : ಉಡುಪಿ : ಗ್ರಾ.ಪಂ. ಉಪ ಚುನಾವಣೆ; ಸಂತೆ ಜಾತ್ರೆ ನಿಷೇಧ :ಜಿಲ್ಲಾಧಿಕಾರಿ ಜಿ.ಜಗದೀಶ್ -Vishwanews24
”ಈಗ ಧಾರಾವಾಹಿ ರೀತಿಯಲ್ಲಿ ಆಡಿಯೊ, ವಿಡಿಯೋ ಬರುತ್ತಿದೆ. ಯುವತಿ ವಿಡಿಯೋ ಬಿಡುಗಡೆ ಮಾಡಿದ್ದಾಳೆ ಎಂಬ ಕಾರಣಕ್ಕೆ ಈ ಪ್ರತಿಕ್ರಿಯೆ ನಾನು ನೀಡುವುದಿಲ್ಲ. ಆದರೆ ಪ್ರಕರಣದ ತನಿಖೆ ನ್ಯಾಯಬದ್ದವಾಗಿ ನಡೆಯಲಿದೆ. ಎಸ್ಐಟಿ ನಿಷ್ಠುರವಾಗಿ ತನಿಖೆ ನಡೆಸುತ್ತಿದೆ. ಯಾರ ಪರವಾಗಿಯೂ ಯಾರ ವಿರುದ್ದವಾಗಿಯೂ ತನಿಖೆ ನಡೆಯುತ್ತಿಲ್ಲ. ನಿಜವಾದ ತಪ್ಪಿತಸ್ಥರು ಯಾರೂ ಎಂಬ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ” ಎಂದರು
