ಬಾಗಲಕೋಟೆ: 2025ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆಯಾಗಿದ್ದು, ಸಿದ್ದರಾಮಯ್ಯ ಮಂಡಿಸಿರೋ ಬಜೆಟ್ನ ಗಾತ್ರ ಬರೋಬ್ಬರಿ 4 ಲಕ್ಷ ಕೋಟಿ ರೂ ಆಗಿದೆ. ಈ ಬಗ್ಗೆ ಬಾಗಲಕೋಟೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ರಾಜ್ಯಸಭಾ ಸದಸ್ಯ ನಾರಾಯಣಸಾ ಕೆ.ಭಾಂಡಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರ ಬಜೆಟ್ ಮುಸಲ್ಮಾನರಿಗೆ ರಂಜಾನ್ ಕೊಡುಗೆ ಎಂದು ಹೇಳಿದ್ದಾರೆ.
ಸರ್ಕಾರ ರಂಜಾನ್ ಹಬ್ಬದ ಇಫ್ತಾರ್ ಕೂಟದ ಔತಣವನ್ನು ಪೂರ್ಣವಾಗಿ ಕೊಟ್ಟಂತಿದೆ. ಮುಸಲ್ಮಾನರಿಗೆ ಕೊಟ್ಟ ಅನುದಾನ ನೋಡಿದ್ರೆ, ಇದು ಮುಸಲ್ಮಾನರ ಸರ್ಕಾರ ಅನ್ನೋದನ್ನ ಸಿದ್ದರಾಮಯ್ಯ ಮತ್ತೆ ಸಾಬೀತು ಮಾಡಿದ್ದಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸಲ್ಮಾನರ ಮದುವೆಗೆ ಸಹಾಯಧನ ಕೊಟ್ಟಿದ್ದಾರೆ. ಅಲ್ಪಸಂಖ್ಯಾತ 16 ಮಹಿಳಾ ಕಾಲೇಜ್, 100 ಉರ್ದು ಶಾಲೆಗೆ ಹೈಟೆಕ್ ಟಚ್, ಹಜ್ ಭವನ ನಿರ್ಮಾಣಕ್ಕೆ ದುಡ್ಡು ಕೊಡ್ತಿದ್ದಾರೆ. ಮುಸಲ್ಮಾನರು ಎಂದು ಹೇಳಬಾರದು ಎಂಬ ಕಾರಣಕ್ಕೆ ಅಲ್ಪಸಂಖ್ಯಾತರು ಎಂದು ಹೇಳಿದ್ದಾರೆ. 25 ಸಾವಿರ ವಿದ್ಯಾರ್ಥಿಗಳಿಗೆ ಸ್ವಯಂ ರಕ್ಷಣಾ ತರಬೇತಿ ವಿಚಾರವಾಗಿ ಯಾಕೆ, ಅವರಿಗೆ ಯಾಕೆ ರಕ್ಷಣಾ ತರಬೇತಿ? ಬೇರೆ ವಿದ್ಯಾರ್ಥಿಗಳಿಗೆ ಸ್ವಯಂ ರಕ್ಷಣೆ ಬೇಡವೇನು ಎಂದು ಪ್ರಶ್ನೆ ಮಾಡಿದರು.
ಈ ಬಜೆಟ್ ನಲ್ಲಿ ಮುಸಲ್ಮಾನರಿಗೆ ಎನ್ ಕೊಡಬೇಕೆಂದು ರಂಜಾನ್ ಹಬ್ಬದ ಕೊಡುಗೆಯಾಗಿ ಸಂಪೂರ್ಣ ಬಜೆಟ್‌ನ್ನು ಮುಸಲ್ಮಾನರಿಗೆ ಕೊಟ್ಟಿದ್ದಾರೆ. ಎಲ್ಲವನ್ನೂ ಮುಸಲ್ಮಾನರಿಗೆ ಕೊಟ್ಟ ಈ ಸರ್ಕಾರದ್ದು ಬೋಗಸ್ ಬಜೆಟ್ ಉರ್ದು ಉರ್ದು ಅಂತ ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸಲ್ಮಾನರಿಗೆ ಕೊಟ್ಟಿದ್ದು, ಇದು ತಾರತಮ್ಯ ಮಾಡಿದಂತಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ ಎಬೋಲಾ ಪ್ರಕರಣದ ರಿಪೋರ್ಟ್ ನೆಗೆಟಿವ್ : ದಿನೇಶ್ ಗುಂಡೂರಾವ್ ಸ್ಪಷ್ಟನೆ ಬೆಂಗಳೂರು: ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ…
ಕಾಪು ಹಳೇ ಮಾರಿಯಮ್ಮ ದೇವಿಗೆ ಲಕ್ಷಪುಷ್ಪಾರ್ಚನೆ 135 ಕೆಜಿ ಕೆಂಪು ಕೇಪುಳ ಹೂ, 1,200ಕ್ಕೂ ಅಧಿಕ ಚೆಂಡು ಮಲ್ಲಿಗೆ ಸಮರ್ಪಣೆ…
ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಮಂಗಳೂರಿನ ನಿಶೆಲ್ ಫ್ಲೋರಾ ಆಲ್ಮೇಡಾ ಆಯ್ಕೆ ಮಂಗಳೂರು: ನಗರದ ಕುಲಶೇಖರದ ಕೊಂಗೂರು ನಿವಾಸಿಗಳಾದ…
ಶಿರ್ವ: ಆತ್ಮಹತ್ಯೆಗೆ ಪ್ರಚೋದನೆ ; ಮೂವರ ವಿರುದ್ಧ ದೂರು ದಾಖಲು ಶಿರ್ವ: ಪತ್ನಿ, ಆಕೆಯ ಸಹೋದರಿ ಮತ್ತು ಪತ್ನಿಗೆ ಇನ್‌ಸ್ಟಾಗ್ರಾಮ್…
ಹಳೆಯಂಗಡಿ: ನಿಂತಿದ್ದ ಬಸ್ಸಿಗೆ ಟಿಪ್ಪರ್ ಢಿಕ್ಕಿ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ ಹಳೆಯಂಗಡಿ: ಕಿನ್ನಿಗೋಳಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಸರ್ವಿಸ್ ಬಸ್ಸಿಗೆ…
ಉಡುಪಿ: ಸ್ಪೀಡ್ ರಾಡಾರ್ ಕೆಮರಾ ಕಣ್ಣು ; ಒಂದು ವಾರದಲ್ಲಿ 47,709 ವಾಹನಗಳು ಸಂಚಾರ ನಿಯಮ ಉಲ್ಲಂಘನೆ ಉಡುಪಿ :…