ಸಿದ್ದರಾಮಯ್ಯ ಅವರು ಸೃಷ್ಟಿಸಿದ್ದ ಮರಿ ಟಿಪ್ಪುಗಳು ನಡೆಸಿದ ಹೇಯಾಕೃತ್ಯದಿಂದ ಮಂಗಳೂರಿನಲ್ಲಿ ಹಿಂಸಾಚಾರ ನಡೆದಿದೆ : ಪ್ರತಾಪ್ ಸಿಂಹ -Vishwanews24

Featured, ರಾಜ್ಯ ನ್ಯೂಸ್

ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸೃಷ್ಟಿಸಿದ್ದ ಮರಿ ಟಿಪ್ಪುಗಳು ನಡೆಸಿದ ಹೇಯಾಕೃತ್ಯದಿಂದ ಮಂಗಳೂರಿನಲ್ಲಿ ಹಿಂಸಾಚಾರ ನಡೆದಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗೆ ಮತ ಹಾಕಿದರೆ ಸಾಕು ಅವರನ್ನು ಅಮಾಯಕರು ಎಂಬುದು ಕಾಂಗ್ರೆಸ್ ನಿಲುವು. ಕಲ್ಲಿನಿಂದ ಹೊಡೆದರೆ ಜನ ಬದುಕುತ್ತಾರಾ? ಇಂತಹ ಸಂದರ್ಭದಲ್ಲಿ ತಮ್ಮ ಪ್ರಾಣ ಲೆಕ್ಕಿಸದೇ ಪೊಲೀಸರು ಜನರ ರಕ್ಷಣೆಗೆ ನಿಂತಿದ್ದಾರೆ. ಅವರ ಕರ್ತವ್ಯದ ಬಗ್ಗೆ ಮಾತನಾಡುವ ಮೊದಲು ಅವರು ಆತ್ಮ ಸಾಕ್ಷಿ ಕೇಳಿಕೊಳ್ಳಲಿ ಎಂದರು.

ದುಷ್ಕರ್ಮಿಗಳು ಹೇಗೆ ಕಲ್ಲುಗಳನ್ನು ಸಂಗ್ರಹಿಸಿ ತಂದು ಎಸೆದಿದ್ದಾರೆ ಎಂದು ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಈ ದೃಶ್ಯ ನೋಡಿ ಮಾತನಾಡಲಿ, ಐಸಿಯೂ ಒಳಗೆ ಹೋಗಿ ಗಲಾಟೆ ಮಾಡಿದ್ದಾರೆ. ಇಂತವೆಲ್ಲ ಟಿಪ್ಪು ವಂಶಸ್ಥರು ಮಾತ್ರ ಮಾಡುವ ಕೆಲಸ ಇವರನ್ನು ಸಿದ್ದರಾಮಯ್ಯ ಅಮಾಯಕರು ಎನ್ನುತ್ತಾರೆ ಎಂದು ಕಿಡಿಕಾರಿದರು.