ಬೆಂಗಳೂರು: ಸಿದ್ದರಾಮಯ್ಯ ಅವರ ಅವಶ್ಯಕತೆ ಇನ್ನೂ ನಮ್ಮ ಪಕ್ಷಕ್ಕೆ ಸಾಕಷ್ಟಿದೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅಂಥವರ ಆಶೀರ್ವಾದ ಇಲ್ಲದೇ ಕಾಂಗ್ರೆಸ್ ಪಕ್ಷ ಬೆಳೆಯೋದಕ್ಕೆ ಸಾಧ್ಯನೇ ಇಲ್ಲ ಎಂದು ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ರೀತಿಯನ್ನ ಶ್ಲಾಘಿಸಿದರು. ಅಲ್ಲದೇ ಮುಂದಿನ ಸಿಎಂ ಡಿಕೆ ಶಿವಕುಮಾರ್ ಅವರನ್ನ ಕೊಂಡಾಡಿದರು.
ಇದನ್ನೂ ಓದಿ:
ಡಿಕೆ ಶಿವಕುಮಾರ್ ಅವರು ಸಿಎಂ ಆಗ್ತಿರೋದು ಸಂತೋಷ ಆಗ್ತಿದೆ. ಇದೊಂದು ಹೊಸ ಜವಾಬ್ದಾರಿ. ಸಿದ್ದರಾಮಯ್ಯರಿಗೂ ನಾವು ಅಭಿನಂದನೆ ಸಲ್ಲಿಸುತ್ತೇವೆ. ಡಿಕೆ ಶಿವಕುಮಾರ್ ಪಕ್ಷಕ್ಕೆ ದುಡಿದ್ದಾರೆ, ಬಿಜೆಪಿ ಅವರು ಕಷ್ಟ ಕೊಟ್ಟರೂ, ಜೈಲಿಗೆ ಹಾಕಿದ್ರು ಡಿಕೆಶಿ ಪಕ್ಷ ನಿಷ್ಠೆ ಬಿಟ್ಟಿಲ್ಲ. ಸ್ವತಂತ್ರ ಅಭ್ಯರ್ಥಿ ಆಗಿ ಗೆದ್ದಾಗ ದೇವೇಗೌಡರು ಮಂತ್ರಿ ಆಗೋ ಆಫರ್ ಕೊಟ್ಟರೂ, ಬಿಜೆಪಿ ಸಿಎಂ ಆಫರ್ ಕೊಟ್ಟರೂ ಅವರು ಹೋಗಲಿಲ್ಲ. ಹೊಸ ಸರ್ಕಾರದಲ್ಲಿ ಡಿಸಿಎಂ ಹುದ್ದೆ ಸೃಷ್ಟಿ ಆಗಬೇಕು. ಹೊಸ ನಾಯಕತ್ವಕ್ಕೆ ಇದು ಅವಶ್ಯಕತೆ ಇದೆ. ಆದ್ರೆ ಎಷ್ಟು ಆಗಬೇಕು ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.
ಇಂಧನ ದರ ಏರಿಕೆ : ಏರ್ ಇಂಡಿಯಾ, ಇಂಡಿಗೋ 250 ದೇಶೀಯ ವಿಮಾನಗಳ ಹಾರಾಟ ಕಡಿತ ನವದೆಹಲಿ :ಭಾರತದ ಪ್ರತಿಷ್ಟಿತ…
ಕಾಸರಗೋಡು: ಇಲಿ ಪಾಷಾಣ ಸೇವಿಸಿ ನವವಿವಾಹಿತೆ ಆತ್ಮಹತ್ಯೆ ಕಾಸರಗೋಡು : ಮದುವೆಯಾದ ಕೇವಲ ಒಂದೂವರೆ ತಿಂಗಳಲ್ಲೇ ನವವಿವಾಹಿತೆಯೊಬ್ಬರು ಇಲಿ ಪಾಷಾಣ…
ಮನೆಯ ಎಸಿ ಸ್ಫೋಟ : ಸಿಸಿಐ ಮಾಜಿ ಮುಖ್ಯಸ್ಥ ಧನೇಂದ್ರ ಕುಮಾರ್ ಸಾವು ಹೊಸದಿಲ್ಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗದ (CCI) ಮಾಜಿ…
ಧರ್ಮಸ್ಥಳ: ಮತ್ತು ಬರುವ ಜ್ಯೂಸ್ ನೀಡಿ ವೃದ್ಧೆಯ ಹತ್ತು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿ ; ಪ್ರಕರಣ…
ಕೊಂಕಣ ರೈಲ್ವೆ ಮಾನ್ಸೂನ್ ವೇಳಾಪಟ್ಟಿ ಪ್ರಕಟ : ಜೂ. 15ರಿಂದ ಅ. 20ರ ವರೆಗೆ ಜಾರಿಗೆ ಉಡುಪಿ: ಮುಂಗಾರು ಸವಾಲಿಗೆ…
ಜೂ.12ರವರೆಗೆ ಮಂಗಳೂರು ಜಂಕ್ಷನ್ - ಮುಂಬೈ ಸಿಎಸ್‌ಎಂಟಿ ರೈಲು ಥಾಣೆಯವರೆಗೆ ಸಂಚಾರ ಮಂಗಳೂರು: ಮುಂಬೈ ಸಿಎಸ್‌ಎಂಟೆ ನಿಲ್ದಾಣದಲ್ಲಿ ಪ್ಲಾಟ್‌ಫಾರಂ ವಿಸ್ತರಣಾ…