Featured

ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ಗೆಹ್ಲೋಟ್ – vishwanews24

ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ಗೆಹ್ಲೋಟ್

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌  ಅವರು ಇಂದು (ಮೇ 29) ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಸಂವಿಧಾನಬದ್ಧವಾಗಿ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದಾರೆ. ಈ ಬಗ್ಗೆ ಲೋಕಭವನದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ ಅನ್ನೋ ಮಾಹಿತಿ  ಲಭ್ಯವಾಗಿದೆ. ಆದಾಗ್ಯೂ ಹೊಸ ಸರ್ಕಾರ ರಚನೆಯಾಗುವವರೆಗೆ ಇನ್ನೂ 2-3 ದಿನಗಳ ಕಾಲ ಸಿದ್ದರಾಮಯ್ಯ ಅವರು ಹಂಗಾಮಿ ಸಿಎಂ ಆಗಿ ಮುಂದುವರಿಯಲಿದ್ದಾರೆ.

ರಾಜ್ಯಪಾಲರು ರಾಜಧಾನಿಯಲ್ಲಿ ಇಲ್ಲದ ಕಾರಣ, ಅವರ ಅನುಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗುರುವಾರ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಹಸ್ತಾಂತರಿಸಿದ್ದರು. ರಾಜೀನಾಮೆ ಪತ್ರವನ್ನ ಕಾರ್ಯದರ್ಶಿಗಳು ಸ್ವೀಕರಿಸಿದ್ದರೂ, ಸಂವಿಧಾನದ ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ಖುದ್ದಾಗಿ ಸಹಿ ಮಾಡಬೇಕಿತ್ತು. ಗುರುವಾರ (ಮೇ 28) ರಾತ್ರಿ ಇಂದೋರ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ರಾಜ್ಯಪಾಲರು ಇಂದು ಬೆಳಗ್ಗೆಯೇ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

Vishwa News 24

Recent Posts

ಇಂಧನ ದರ ಏರಿಕೆ : ಏರ್‌ ಇಂಡಿಯಾ, ಇಂಡಿಗೋ 250 ದೇಶೀಯ ವಿಮಾನಗಳ ಹಾರಾಟ ಕಡಿತ – vishwanews24

ಇಂಧನ ದರ ಏರಿಕೆ : ಏರ್‌ ಇಂಡಿಯಾ, ಇಂಡಿಗೋ 250 ದೇಶೀಯ ವಿಮಾನಗಳ ಹಾರಾಟ ಕಡಿತ ನವದೆಹಲಿ :ಭಾರತದ ಪ್ರತಿಷ್ಟಿತ…

10 hours ago

ಕಾಸರಗೋಡು: ಇಲಿ ಪಾಷಾಣ ಸೇವಿಸಿ ನವವಿವಾಹಿತೆ ಆತ್ಮಹತ್ಯೆ – vishwanews24

ಕಾಸರಗೋಡು: ಇಲಿ ಪಾಷಾಣ ಸೇವಿಸಿ ನವವಿವಾಹಿತೆ ಆತ್ಮಹತ್ಯೆ ಕಾಸರಗೋಡು : ಮದುವೆಯಾದ ಕೇವಲ ಒಂದೂವರೆ ತಿಂಗಳಲ್ಲೇ ನವವಿವಾಹಿತೆಯೊಬ್ಬರು ಇಲಿ ಪಾಷಾಣ…

11 hours ago

ಮನೆಯ ಎಸಿ ಸ್ಫೋಟ : ಸಿಸಿಐ ಮಾಜಿ ಮುಖ್ಯಸ್ಥ ಧನೇಂದ್ರ ಕುಮಾರ್ ಸಾವು – vishwanews24

ಮನೆಯ ಎಸಿ ಸ್ಫೋಟ : ಸಿಸಿಐ ಮಾಜಿ ಮುಖ್ಯಸ್ಥ ಧನೇಂದ್ರ ಕುಮಾರ್ ಸಾವು ಹೊಸದಿಲ್ಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗದ (CCI) ಮಾಜಿ…

13 hours ago

ಧರ್ಮಸ್ಥಳ: ಮತ್ತು ಬರುವ ಜ್ಯೂಸ್ ನೀಡಿ ವೃದ್ಧೆಯ ಹತ್ತು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿ ; ಪ್ರಕರಣ ದಾಖಲು – vishwanews24

ಧರ್ಮಸ್ಥಳ: ಮತ್ತು ಬರುವ ಜ್ಯೂಸ್ ನೀಡಿ ವೃದ್ಧೆಯ ಹತ್ತು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿ ; ಪ್ರಕರಣ…

13 hours ago

ಕೊಂಕಣ ರೈಲ್ವೆ ಮಾನ್ಸೂನ್‌ ವೇಳಾಪಟ್ಟಿ ಪ್ರಕಟ : ಜೂ. 15ರಿಂದ ಅ. 20ರ ವರೆಗೆ ಜಾರಿಗೆ – vishwanews24

ಕೊಂಕಣ ರೈಲ್ವೆ ಮಾನ್ಸೂನ್‌ ವೇಳಾಪಟ್ಟಿ ಪ್ರಕಟ : ಜೂ. 15ರಿಂದ ಅ. 20ರ ವರೆಗೆ ಜಾರಿಗೆ ಉಡುಪಿ: ಮುಂಗಾರು ಸವಾಲಿಗೆ…

13 hours ago

ಜೂ.12ರವರೆಗೆ ಮಂಗಳೂರು ಜಂಕ್ಷನ್ – ಮುಂಬೈ ಸಿಎಸ್‌ಎಂಟಿ ರೈಲು ಥಾಣೆಯವರೆಗೆ ಮಾತ್ರ ಸಂಚಾರ – vishwanews24

ಜೂ.12ರವರೆಗೆ ಮಂಗಳೂರು ಜಂಕ್ಷನ್ - ಮುಂಬೈ ಸಿಎಸ್‌ಎಂಟಿ ರೈಲು ಥಾಣೆಯವರೆಗೆ ಸಂಚಾರ ಮಂಗಳೂರು: ಮುಂಬೈ ಸಿಎಸ್‌ಎಂಟೆ ನಿಲ್ದಾಣದಲ್ಲಿ ಪ್ಲಾಟ್‌ಫಾರಂ ವಿಸ್ತರಣಾ…

14 hours ago