ಸುಬ್ರಹ್ಮಣ್ಯ : ಚಾಲಕನ ನಿಯಂತ್ರಣ ತಪ್ಪಿ ಮದುವೆ ವಾಹನ ಪಲ್ಟಿ ; 22 ಮಂದಿಗೆ ಗಾಯ – vishwanews24
ಸುಬ್ರಹ್ಮಣ್ಯ : ಚಾಲಕನ ನಿಯಂತ್ರಣ ತಪ್ಪಿ ಮದುವೆ ವಾಹನ ಪಲ್ಟಿ – 22 ಮಂದಿಗೆ ಗಾಯ
ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ಸಭಾಭವನದಲ್ಲಿ ಮದುವೆಗೆ ಆಗಮಿಸುತ್ತಿದ್ದ ಮದುವೆಯ ವಾಹನವೊಂದು ಬಿಸ್ಲೆ ಘಾಟ್ ತಿರುವಿನಲ್ಲಿ ವಾಹನ ಪಲ್ಟಿಯಾಗಿ ವ್ಯಾನ್ನಲ್ಲಿದ್ದವರಿಗೆ 22 ಮಂದಿ ಗಂಭೀರ ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯದಲ್ಲಿ ಕೂಡುರಸ್ತೆ ವನಗೂರುನ ಯುವಕ ಹಾಗೂ ಏನೆಕಲ್ಲಿನ ವಧುವಿನೊಂದಿಗೆ ಇಂದು ಮದುವೆ ಕಾರ್ಯಕ್ರಮ ನಡೆಯಬೇಕಿತ್ತು. ಈ ಮದುವೆಗೆ ಹುಡುಗನ ಕಡೆಯವರು ವಾಹನದಲ್ಲಿ ಬರುತ್ತಿದ್ದರು ಎನ್ನಲಾಗಿದೆ. ವಧು – ವರ ಇಬ್ಬರೂ ನಿನ್ನೆಯೇ ಹಾಲ್ಗೆ ಬಂದಿದ್ದರೆಂದು ತಿಳಿದು ಬಂದಿದೆ. ವ್ಯಾನ್ನಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಪ್ರಥಮ ಚಿಕಿತ್ಸೆಗಾಗಿ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಆರು ಅಂಬ್ಯೂಲೆನ್ಸ್ಗಳಲ್ಲಿ ಮಂಗಳೂರಿಗೆ ಕರೆದೊಯ್ಯಲಾಗಿದೆ. ಎಂದು ತಿಳಿದು ಬಂದಿದೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು – vishwanews24
ಮದುವೆಗೆಂದು ಕುಕ್ಕೆ ಸುಬ್ರಮಣ್ಯಕ್ಕೆ ಹೊರಟ ಟೆಂಪೋವೊಂದು ಬಿಸಿಲೆ ಘಾಟ್ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 22 ಮಂದಿ ಗಾಯಗೊಂಡ ಘಟನೆ ನಡೆದಿದೆ. ಘಟನೆಯಲ್ಲಿ ಹಲವರು ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದು, ಎನ್ನಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ
