ಸುರತ್ಕಲ್: ಈಜಾಡಲು ತೆರಳಿದ್ದ ನಾಲ್ವರಲ್ಲಿ ಮೂವರು ನೀರುಪಾಲು – vishwanews24

Featured, ದಕ್ಷಿಣ ಕನ್ನಡ

ಸುರತ್ಕಲ್: ಈಜಾಡಲು ತೆರಳಿದ್ದ ನಾಲ್ವರಲ್ಲಿ ಮೂವರು ನೀರುಪಾಲು ; ಇಬ್ಬರ ಮೃತದೇಹ ಪತ್ತೆ

ಸುರತ್ಕಲ್:‌ ಪ್ರವಾಸಕ್ಕೆಂದು ಬಂದಿದ್ದ ನಾಲ್ವರು ಸ್ನೇಹಿತರು ಈಜಾಡಲು ನೀರಿಗೆ ಇಳಿದಿದ್ದು, ಈ ಪೈಕಿ ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಒಬ್ಬರನ್ನು ರಕ್ಷಿಸಿದ ಘಟನೆ ಜ.8ರ ಬುಧವಾರ ಇಲ್ಲಿನ ಹೊಸಬೆಟ್ಟು ಬೀಚ್ ನ ನಿರ್ಮಾಣ ಹಂತದ ಜೆಟ್ಟಿ ಬಳಿಯಿರುವ ಬೀಚ್ ನಲ್ಲಿ ಸಂಭವಿಸಿದೆ.

ಬೆಂಗಳೂರು ಜೆಪಿನಗರ ನಿವಾಸಿ ಸತ್ಯವೇಲು (30), ಶಿವಮೊಗ್ಗದ ಶಿವಕುಮಾರ್, ಚಿತ್ರದುರ್ಗ ಜಿಲ್ಲೆಯ ಗುಳಿ ಹೊಸಹಳ್ಳಿ, ಉಪ್ಪರಿಗೇನಹಳ್ಳಿಯ ಶಿವಲಿಂಗಪ್ಪ ಅವರ ಪುತ್ರ ಮಂಜುನಾಥ್. ಎಸ್ (31) ಮೃತಪಟ್ಟವರಾಗಿದ್ದು, ಬೀದರ್ ಜಿಲ್ಲೆಯ ಹಂಗಾರಗಾದ ವಿಶ್ವಂಬರ್ ಅವರ ಪುತ್ರ ಪರಮೇಶ್ವರ್ (30) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಯುವತಿಯ ಅತ್ಯಾಚಾರ: ಬಿಜೆಪಿ ಮುಖಂಡನ ವಿರುದ್ದ FIR , ತಲೆಮರೆಸಿಕೊಂಡ ಆರೋಪಿ ಜಿಮ್ ಸೋಮ – vishwanews24

 

ಇವರಲ್ಲಿ ಶಿವಕುಮಾರ್ ಮತ್ತು ಸತ್ಯವೇಲು ಎಂಬವರ ಮೃತದೇಹ ದೊರಕಿದ್ದು, ಮಂಜುನಾಥ್ ಅವರ ಮೃತದೇಹಕ್ಕಾಗಿ ಪತ್ತೆ ಕಾರ್ಯ ಮುಂದುವರೆದಿದೆ.

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬೀಚ್ ನ ಜೆಟ್ಟಿ ಬಳಿಯಿರುವ ಬೀಚ್ ನಲ್ಲಿ ಈ ಘಟನೆ ಸಂಭವಿಸಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವುದು.

ಮೃತದೇಹಗಳನ್ನು ನಗರದ ಎ.ಜೆ.ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಯುವತಿಯ ಅತ್ಯಾಚಾರ: ಬಿಜೆಪಿ ಮುಖಂಡನ ವಿರುದ್ದ FIR , ತಲೆಮರೆಸಿಕೊಂಡ ಆರೋಪಿ ಜಿಮ್ ಸೋಮ – vishwanews24

Leave a Reply