ಸುರತ್ಕಲ್: ದ್ವಿಚಕ್ರ ವಾಹನ ಢಿಕ್ಕಿ; ಹೆದ್ದಾರಿ ದಾಟುತ್ತಿದ್ದ ಮಹಿಳೆ ಸಾವು – Vishwanews24

Featured, ದಕ್ಷಿಣ ಕನ್ನಡ

ಸುರತ್ಕಲ್: ದ್ವಿಚಕ್ರ ವಾಹನ ಢಿಕ್ಕಿ; ಹೆದ್ದಾರಿ ದಾಟುತ್ತಿದ್ದ  ಮಹಿಳೆ ಸಾವು

ಸುರತ್ಕಲ್: ದ್ವಿಚಕ್ರ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಸುರತ್ಕಲ್ ಶುಭಗಿರಿ ಸಮೀಪ ಬುಧವಾರ ರಾತ್ರಿ ಸಂಭವಿಸಿದೆ.

ಹೊಸಬೆಟ್ಟು ನಿವಾಸಿ ಲಕ್ಷ್ಮೀ(69) ಮೃತ ದುರ್ದೈವಿ.

ನಮಗೆ ಯಾವುದೇ ಭಯವಿಲ್ಲ , ಮೋದಿಯನ್ನ ತೆಗೆದು ಹಾಕುವುದೇ ನಮ್ಮ ಮುಂದಿರುವ ಗುರಿ : ಮಲ್ಲಿಕಾರ್ಜುನ ಖರ್ಗೆ – Vishwanews24

ಲಕ್ಷ್ಮೀ ಅವರು ಮಂಗಳೂರು ಕಡೆಯಿಂದ ಬಸ್ ನಲ್ಲಿ ಬಂದು ರಾ.ಹೆ. ದಾಟಿ ಉಡುಪಿ ಮಂಗಳೂರು ಹೆದ್ದಾರಿ ದಾಟುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಲಕ್ಷ್ಮೀ ಅವರಿಗೆ ಉಡುಪಿ ಮೂಲದ ಇಬ್ಬರಿದ್ದ ಬೈಕ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಢಿಕ್ಕಿಯ ಪರಿಣಾಮ ರಸ್ತೆಗೆಸೆಯಲ್ಪಟ್ಟ ಲಕ್ಷ್ಮೀ ಅವರು ಗಂಭೀರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ದಾರಿ‌ ಮಧ್ಯೆಯೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಪ್ರಕರಣ ದಾಖಲಿಸಿಕೊಂಡಿರುವ ಅವರು ತನಿಖೆ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹನುಮಾನ್‌ ಚಾಲೀಸಾ ಪ್ರಕರಣ : ಹಲ್ಲೆಗೊಳಗಾದ ಅಂಗಡಿ ಮಾಲೀಕನ ವಿರುದ್ಧವೇ ಎಫ್‌ಐಆರ್‌ ದಾಖಲು – Vishwanews24

Leave a Reply