ಸುರತ್ಕಲ್ : ರಸ್ತೆ ದಾಟಲು ಡಿವೈಡರ್ ಬಳಿ ಬೈಕ್ ನಲ್ಲಿ ನಿಂತಿದ್ದ ಇಬ್ಬರು ಯುವಕರಿಗೆ ಬಸ್ ಡಿಕ್ಕಿ * ಗಂಭೀರ ಗಾಯ – Vishwanews24
ಸುರತ್ಕಲ್ : ರಸ್ತೆ ದಾಟಲು ಡಿವೈಡರ್ ಬಳಿ ಬೈಕ್ ನಲ್ಲಿ ನಿಂತಿದ್ದ ಇಬ್ಬರು ಯುವಕರಿಗೆ ಬಸ್ ಡಿಕ್ಕಿ * ಗಂಭೀರ ಗಾಯ
ಸುರತ್ಕಲ್ : ರಸ್ತೆ ದಾಟಲೆಂದು ನಿಂತಿದ್ದ ಬೈಕ್ಗೆ ವಿರುದ್ಧ ದಿಕ್ಕಿನಲ್ಲಿ ಬಂದ ಖಾಸಗಿ ಬಸ್ವೊಂದು ರಭಸವಾಗಿ ಡಿಕ್ಕಿ ಹೊಡೆದಿದ್ದು. ಅಪಘಾತದಲ್ಲಿ ಇಬ್ಬರು ಗಾಯಗೊಂಡ ಘಟನೆ ಭಾನುವಾರ ನಗರದ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ನ ಹೊಸಬೆಟ್ಟು ಸಮೀಪ ನಡೆದಿದೆ.
ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.
ಭಾನುವಾರ ಬೆಳ್ಳಂಬೆಳಗ್ಗೆ 7.55ರ ವೇಳೆಗೆ ಖಾಸಗಿ ಎಕ್ಸ್‌ಪ್ರೆಸ್ ಬಸ್ ಶರವೇಗದಿಂದ ಬಂದು ಬೈಕ್ಗೆ ಗುದ್ದಿದೆ.
ಈ ಘಟನೆಯಲ್ಲಿ ಬೈಕ್ ಸವಾರರಾದ ಪಕ್ಷಿಕೆರೆ ಹೊಸಕಾಡು ನಿವಾಸಿ ಅಬ್ದುಲ್ ಖಾದರ್ ಅರ್ಫಾನ್ ಮತ್ತು ಹಳೆಯಂಗಡಿ ಇಂದಿರಾ ನಗರದ ನಿವಾಸಿ ಅಮೀರ್ ಸಾಹಿಲ್ ಎಂಬುವವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ:
ಉಡುಪಿ: ಪುತ್ತಿಗೆ ಮಠದ ಪರ್ಯಾಯೋತ್ಸವ ಉದ್ಘಾಟಿಸಿದ ಡಾ.ವಿರೇಂದ್ರ ಹೆಗ್ಗಡೆ – Vishwanews24
ಇದರಲ್ಲಿ ಅರ್ಫಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಸಬೆಟ್ಟು ಬಳಿ ರಸ್ತೆ ದಾಟಲು ಬೈಕ್ ಡಿವೈಡರ್ ಬಳಿ ನಿಂತಿತ್ತು.
ಈ ವೇಳೆ ವೇಗದಲ್ಲಿ ಬಂದ ಮಂಗಳೂರು – ಉಡುಪಿ ಖಾಸಗಿ ಬಸ್ ಅಡ್ಡಲಾಗಿ ಬಂದು ಗುದ್ದಿಕೊಂಡು ಹೋಗಿದೆ. ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.
ತಕ್ಷಣ ಗಾಯಾಳುಗಳನ್ನು ನಗರದ ಎ.ಜೆ. ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ ಚಾಲಕ ಡೆಲ್ಸನ್ ಕ್ಯಾಸ್ಟಲಿನೋ ಎಂಬಾತನ ವಿರುದ್ಧ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಕರ್ನಾಟಕ ಮಾದರಿ ತೆಲಂಗಾಣದಲ್ಲೂ ಗ್ಯಾರಂಟಿ ಬ್ರಹ್ಮಾಸ್ತ್ರ ಪ್ರಯೋಗಿಸಿದ ಕಾಂಗ್ರೆಸ್ – Vishwanews24
