ಸುಳ್ಯ: ‘ಶಾಫಿ ಬೆಳ್ಳಾರೆಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಬಾರದು : ಪ್ರವೀಣ್ ನೆಟ್ಟಾರು ಪೋಷಕರ ಆಕ್ರೋಶ – Vishwanews24
ಅಧಿಕಾರ ಸಿಕ್ಕರೆ ಎಲ್ಲರನ್ನೂ ಸಾಯಿಸುತ್ತಾನೆ ..
ಶಾಫಿ ಬೆಳ್ಳಾರೆಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಬಾರದು : ಪ್ರವೀಣ್ ನೆಟ್ಟಾರು ಪೋಷಕರು..
ಸುಳ್ಯ: ಚುನಾವಣೆಯಲ್ಲಿ ಸ್ಪರ್ಧಿಸಲು ಶಾಫಿ ಬೆಳ್ಳಾರೆಗೆ ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದು ಎಂದು ಪ್ರವೀಣ್ ನೆಟ್ಟಾರು ಹೆತ್ತವರು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವೀಣ್ ನೆಟ್ಟಾರು ಹೆತ್ತವರಾದ ಶೇಖರ ಪೂಜಾರಿ ಹಾಗೂ ರತ್ನಾವತಿ, ನಮ್ಮ ಮಗನನ್ನು ಅನ್ಯಾಯವಾಗಿ ಕೊಂದ ಪಾಪಿ ಆತ. ಆತನಿಗೆ ಅಧಿಕಾರ ಇಲ್ಲದಿದ್ದಾಗಲೇ ನಮ್ಮ ಪುತ್ರನನ್ನು ಸಾಯಿಸಿದವ, ನಾಳೆ ಅಧಿಕಾರ ಸಿಕ್ಕರೆ ಎಲ್ಲರನ್ನೂ ಸಾಯಿಸುತ್ತಾನೆ ಎಂದು ಆತಂಕ ವ್ಯಕ್ತಪಡಿಸಿದರು.
ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ – Vishwanews24
ಆತನಿಗೆ ಅಧಿಕಾರ ಸಿಕ್ಕಿದರೆ ನಮಗೆ ಮುಂದಿನ ದಿನಗಳಲ್ಲಿ ಹೊರಗಡೆ ನಡೆದಾಡಲೂ ಆಗದ ಪರಿಸ್ಥಿತಿಯನ್ನು ಆತ ತಂದೊಡ್ಡಬಹುದು. ಆತ ನಮ್ಮ ಮಗನನ್ನು ಕೊಂದು ನಮ್ಮನ್ನು ಇಂತಹ ಸ್ಥಿತಿಗೆ ತಂದು ಬಿಟ್ಟಿದ್ದಾನೆ. ಅವನಿಗೆ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

