ಸುಳ್ಯ, ಸಂಪಾಜೆ ಬಳಿ ಬಸ್ ಮತ್ತು ಬೈಕಿನ ನಡುವೆ ಭೀಕರ ಅಫಘಾತ :ಇಬ್ಬರ ಸಾವು -Vishwanews24
ಸುಳ್ಯ: ಕೊಡಗು ಸಂಪಾಜೆ ಬಳಿಯ ಕೊಯಿ ನಾಡಿನಲ್ಲಿ ಬಸ್ ಮತ್ತು ಬೈಕಿನ ನಡುವೆ ನಡೆದ ಅಫಘಾತದಲ್ಲಿ ಬೈಕ್ ಸವಾರರಿಬ್ಬರು ಸಾವನಪ್ಪಿದ ಘಟನೆ ಶನಿವಾರ ನಡೆದಿದೆ.
ಮೃತ ಯುವಕರನ್ನು ಜಾರ್ಖಂಡ್ ಮೂಲದವರು ಎಂದು ಗುರುತಿಸಲಾಗಿದೆ.
ಜಾರ್ಖಂಡ್ ಮೂಲದ ಇಬ್ಬರು ಯುವಕರು ಬೈಕಿನಲ್ಲಿ ಸುತ್ತುವ ಉದ್ದೇಶದಿಂದ ಹೊರಟಿದ್ದು, ಶನಿವಾರ ಬೆಳಿಗ್ಗೆ ಮಂಗಳೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುವಾಗ ಕೊಯಿನಾಡಿನಲ್ಲಿ ಸಿದ್ದಾರಪುರದಿಂದ ಮಂಗಳೂರಿಗೆ ಬರುತ್ತಿದ್ದ ಸರಕಾರಿ ಬಸ್ಸಿಗೆ ಡಿಕ್ಕಿ ಹೊಡೆದಿದ್ದು ಬೈಕ್ ಸವಾರರು ಸ್ಥಳದಲ್ಲೇ ಸಾವನಪ್ಪಿದ್ದಾರೆ
ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
