ಸೂರಾಲು ಪಮ್ಮು ಸೇರಿಗಾರ್ತಿಗೆ ಕುಟುಂಬಕ್ಕೆ ಧರ್ಮದರ್ಶಿ ಭಾಸ್ಕರ್ ಪೂಜಾರಿ ಗುಂಡಿಬೈಲ್ ಸಹಾಯಧನ : vishwanews24
ಸೂರಾಲು ಪಮ್ಮು ಸೇರಿಗಾರ್ತಿಗೆ ಕುಟುಂಬಕ್ಕೆ ಧರ್ಮದರ್ಶಿ ಭಾಸ್ಕರ್ ಪೂಜಾರಿ ಗುಂಡಿಬೈಲ್ ಸಹಾಯಧನ.
ಉಡುಪಿ: ಭಾರಿ ಮಳೆಯಿಂದ ತತ್ತರಿಸಿ ಹೋಗಿ ಮನೆ ಕಳೆದುಕೊಂಡ ಸೂರಾಲು ಸಮೀಪದ ಪಮ್ಮು ಸೇರಿಗಾರ್ತಿ ಕುಟುಂಬಕ್ಕೆ ಶ್ರೀ ಕ್ಷೇತ್ರ ಮೂಡುಸಗ್ರಿಯ ಧರ್ಮದರ್ಶಿ ಭಾಸ್ಕರ್ ಗುಂಡಿಬೈಲ್ ಮತ್ತು ಅವರ ಅನುಯಾಯಿಗಳು ಧನಸಹಾಯ ಮತ್ತು ದಿನ ಬಳಕೆಯ ವಸ್ತುಗಳನ್ನ ನೀಡಿ ಸಹಕರಿಸಿದ್ದಾರೆ.
ಮುಂದಿನ ದಿನದಲ್ಲಿ ಮತ್ತಷ್ಟು ಸಹಕಾರ ನೀಡುವುದರ ಜತೆಗೆ ಮನೆ ನಿರ್ಮಾಣ ಕಾರ್ಯದಲ್ಲೂ ಕೂಡ ಕೈ ಜೋಡಿಸುವ ಭರವಸೆಯನ್ನು ನೀಡಿದ್ದಾರೆ.
ಸಾವಿರಾರು ಬಡ ಕುಟುಂಬಗಳಿಗೆ ನೆರವಾಗುವ ಭಾಸ್ಕರ್ ಪೂಜಾರಿ ಗುಂಡಿಬೈಲ್ ಸಹಕಾರ ದೇವರು ಮೆಚ್ಚುವಂತದ್ದು ಎಂದು ಪಮ್ಮು ಸೇರಿಗಾರ್ತಿ ಹೇಳಿದ್ದಾರೆ.
