Featured

ಸೂರ್ಯಗ್ರಹಣ: ಅ.25ರಂದು ಕರಾವಳಿ ದೇವಾಲಯಗಳಲ್ಲಿ ದೇವರ ದರ್ಶನ, ಸೇವೆಗಳಲ್ಲಿ ವ್ಯತ್ಯಯ – Vishwanews24

ಸೂರ್ಯಗ್ರಹಣ: ಅ.25ರಂದು ಕರಾವಳಿ ದೇವಳದಲ್ಲಿ ದೇವರ ದರ್ಶನ, ಸೇವೆಗಳಲ್ಲಿ ವ್ಯತ್ಯಯ

ಉಡುಪಿ ಕೃಷ್ಣಮಠದಲ್ಲಿ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಇರುವುದಿಲ್ಲ

ಅ.25ರಂದು ಮಂಗಳವಾರ ಸಂಭವಿಸಲಿರುವ ಸೂರ್ಯಗ್ರಹಣದ ದಿನದಂದು ಕರಾವಳಿಯ ದೇವಾಲಯಗಳಲ್ಲಿ ದೇವರ ದರ್ಶನ ಹಾಗೂ ಸೇವೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಯವಾಗಲಿದೆ.

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನದವರೆಗೆ ಎಂದಿನಂತೆ ಅವಕಾಶವಿದ್ದು, ಬಳಿಕ ಅಪರಾಹ್ನ 2.30ರಿಂದ ರಾತ್ರಿ 7.30ರ ವರೆಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಅನ್ನಛತ್ರದಲ್ಲಿ ಅಪರಾಹ್ನ 2.30 ರವರೆಗೆ ಭೋಜನ ಪ್ರಸಾದದ ವ್ಯವಸ್ಥೆ ಇರಲಿದೆ. ಬಳಿಕ ರಾತ್ರಿ 7.30 ರ ನಂತರ ಭೋಜನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ

ಕುಕ್ಕೆ: ದೀಪಾವಳಿಯ ಮಧ್ಯದಿನ ಅ.25 ಸೂರ್ಯಗ್ರಹಣ ಇರುವುದರಿಂದ ಆ ದಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯಾವುದೇ ಸೇವೆಗಳು ಹಾಗೂ ಭೋಜನ ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಅ.26ದಂದು ಕ್ಷೇತ್ರದಲ್ಲಿ ನಿತ್ಯ ಪೂಜಾ ಸಮಯಗಳಲ್ಲಿ ವ್ಯತ್ಯಯವಾಗುವುದರಿಂದ ಬೆಳಗ್ಗೆ ಗಂಟೆ 9ರಿಂದ ಭಕ್ತಾದಿಗಳಿಗೆ ದೇವರ ದರ್ಶನ, ಸೇವೆಗಳು ಆರಂಭಗೊಳ್ಳಲಿದೆ.

ಕಟೀಲು : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಧ್ಯಾಹ್ನ ಎಂದಿನಂತೆ ಅನ್ನಪ್ರಸಾದವಿರುತ್ತದೆ. ಗ್ರಹಣ ಆರಂಭಗೊಳ್ಳುವ ಅವಧಿಯಿಂದ ಮೋಕ್ಷದ ಅವಧಿಯಲ್ಲಿ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶವಿದ್ದು, ದೇವಳಕ್ಕೆ ಸುತ್ತು ಬರಬಹುದು ಹಾಗೂ ಜಪ ಮಾಡಬಹುದು. ಆದರೆ ಈ ಅವಧಿಯಲ್ಲಿ ಯಾವುದೇ ಸೇವೆ, ಪ್ರಸಾದ ವಿತರಣೆ ಇರುವುದಿಲ್ಲ ಎಂದು ದೇವಸ್ಥಾನದ ಅರ್ಚಕ ಶ್ರೀಹರಿನಾರಾಯಣ ಆಸ್ರಣ್ಣ ತಿಳಿಸಿದ್ದಾರೆ.

ತುಳುನಾಡಿನ ದೈವಾರಾಧನೆಯಲ್ಲಿ ಚೇತನ್ ನಂತಹ ಕಮ್ಯುನಿಸ್ಟರು ಮೂಗು ತೂರಿಸಬಾರದು : ಶ್ರೀಕಾಂತ್ ಶೆಟ್ಟಿ ಎಚ್ಚರಿಕೆ

ಕಟೀಲು ದೇವಳದಲ್ಲಿ ದೇವಿ ಲಿಂಗ ಸ್ವರೂಪಿಯಾಗಿರುವುದರಿಂದ ಅ.25ರಂದು ಸಂಜೆ 5.08ಕ್ಕೆ ಸೂರ್ಯಗ್ರಹಣ ಆರಂಭ ಗೊಂಡ (ಸ್ಪರ್ಶ) ಅವಧಿಯಿಂದ ಮಧ್ಯಕಾಲ 5.51ರ ವರೆಗೆ ದೇವರಿಗೆ ನಿರಂತರ ಅಭಿಷೇಕ ನಡೆಯಲಿದೆ. ಮಧ್ಯಕಾಲ 5.50ಕ್ಕೆ ದೇವರಿಗೆ ಪೂಜೆ ನಡೆಯಲಿದೆ. ಬಳಿಕ ಮಧ್ಯಕಾಲದಿಂದ ಸಂಜೆ 6.29ರ ಮೋಕ್ಷ ಕಾಲದವರೆಗ ಪುನಃ ನಿರಂತರ ದೇವರಿಗೆ ಅಭಿಷೇಕ ನಡೆಯಲಿದ್ದು ಮೋಕ್ಷದ ಬಳಿಕ ದೇವರಿಗೆ ಪೂಜೆ ಹಾಗೂ ನಿತ್ಯ ಪೂಜೆ ಜರುಗಲಿದೆ. ಗ್ರಹಣದ ಅವಧಿಯಲ್ಲಿ ಭಕ್ತರು ದೇವರಿಗೆ ತುಪ್ಪವನ್ನು ನೀಡಬಹುದು. ಭಕ್ತಾದಿಗಳು ದೇವರ ದೀಪಕ್ಕೆ ಶುದ್ಧ ಎಳ್ಳೆಣ್ಣೆ, ತುಪ್ಪ, ಬತ್ತಿ ಸಮರ್ಪಿಸುವುದರಿಂದ ಗ್ರಹಣ ದೋಷ ನಿವೃತ್ತಿಯಾಗಿ ಅನುಗ್ರಹ ಪ್ರಾಪ್ತಿಯಾಗುತ್ತದೆ. ರಾತ್ರಿ ಅನ್ನ ಪ್ರಸಾದವಿರುವುದಿಲ್ಲ. ಅದರ ಬದಲಿಗೆ ಫಲಾಹಾರ ಇರುತ್ತದೆ ಎಂದು ಶ್ರೀಹರಿನಾರಾಯಣ ಆಸ್ರಣ್ಣ ತಿಳಿಸಿದ್ದಾರೆ.

ಬಪ್ಪನಾಡು : ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೂರ್ಯ ಗ್ರಹಣದಂದು ಸಂಜೆ 4.45ರಿಂದ 6.45ರ ವರೆಗೆ ಯಾವುದೇ ಪೂಜೆ, ಸೇವೆ, ಪ್ರಸಾದ ವಿತರಣೆ ಇರುವುದಿಲ್ಲ. ಸಂಜೆ 6.45ರ ಬಳಿಕ ನಿತ್ಯ ಪೂಜೆ ಜರುಗಲಿದೆ. ಅಂದು ಮಧ್ಯಾಹ್ನ ಅನ್ನಪ್ರಸಾದ ಇರುವುದಿಲ್ಲ ಎಂದು ದೇವಸ್ಥಾನದ ಪ್ರಧಾನ ಅರ್ಚಕ ನರಸಿಂಹ ಭಟ್‌ ತಿಳಿಸಿದ್ದಾರೆ.

ಉಡುಪಿ: ಅ.25ರಂದು ಸಂಭವಿಸಲಿರುವ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಉಡುಪಿ ಕೃಷ್ಣಮಠದಲ್ಲಿ ಮಧ್ಯಾಹ್ನದ ಸಾರ್ವಜನಿಕ ಅನ್ನಸಂತರ್ಪಣೆ ಇರುವುದಿಲ್ಲ, ಸಾರ್ವಜನಿಕರಿಗೆ ಕೃಷ್ಣದರ್ಶನಕ್ಕೆ ಅವಕಾಶ ಇರುತ್ತದೆ.

ಕೃಷ್ಣಮಠದ ಸಂಪ್ರದಾಯದಂತೆ ಉಡುಪಿಯಲ್ಲಿ 23ರಂದು ಸಂಜೆ ದೀಪಾವಳಿಯ ಪ್ರಯುಕ್ತ ಯಮದೀಪ ಮತ್ತು ಜಲಪೂರಣ ನಡೆಯಲಿದೆ. 24ರಂದು ಬೆಳಿಗ್ಗೆ 5.14ಕ್ಕೆ ತೈಲಾಭ್ಯಂಜನ, ನರಕಚತುರ್ದಶಿ, ಸಂಜೆ ವ್ರೋಮದೀಪ, ಧನಧಾನ್ಯ-ಲಕ್ಷ್ಮೀ ಪೂಜೆ, ಬಲೀಂದ್ರ ಪೂಜೆ ನಡೆಯಲಿದೆ. 25ರಂದು ಬೆಳಗ್ಗೆ ಗೋಪೂಜೆ ನಡೆಯಲಿದೆ. 26ರಂದು ಬಲಿಪಾಡ್ಯ, ಸಂಜೆ ಅಂಗಡಿಪೂಜೆ, ತುಳಸಿಪೂಜೆಗಳು ನಡೆಯಲಿವೆ. ಉಡುಪಿಯಲ್ಲಿ ಸಂಜೆ 5.08 ಗಂಟೆಗೆ ಗ್ರಹಣ ಸ್ಪರ್ಶವಾಗಿ, 6.29 ಗಂಟೆಗೆ ಗ್ರಹಣ ಮೋಕ್ಷವಾಗಲಿದೆ ಎಂದು ತಿಳಿಸಲಾಗಿದೆ.

ನವೆಂಬರ್ 14 ರಂದು ಉಚ್ಚಿಲದಲ್ಲಿ ಉಡುಪಿ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹ ಉದ್ಘಾಟನೆ ಹಾಗೂ ಸಹಕಾರಿ ರತ್ನ ಡಾ ಎಂ ಎನ್ ರಾಜೇಂದ್ರ ಕುಮಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮ: vishwanews24

ದೀಪಾವಳಿ ಹಬ್ಬದಂದು ʼತಿರುಪತಿ ತಿಮ್ಮಪ್ಪನ ದರ್ಶನಕ್ಕೆ ʼಅವಕಾಶವಿಲ್ಲ

ಆಂಧ್ರಪ್ರದೇಶ : ಜಗತ್ತಿನ ಶ್ರೀಮಂತ ದೇವರೆಂದೇ ಕರೆಯಲ್ಪಡು ಆಂಧ್ರ ಪ್ರದೇಶದ ತಿರುಪತಿ ತಿಮ್ಮಪ್ಪನ ದರ್ಶನವನ್ನು ಸೂರ್ಯಗ್ರಹಣ ಚಂದ್ರಗ್ರಹಣ ಹಾಗೂ ದೀಪಾವಳಿ ಕಾರಣದಿಂದ ಮೂರು ದಿನಗಳ ಕಾಲ ರದ್ದು ಮಾಡಲಾಗಿದೆ.

ಅಕ್ಟೋಬರ್‌ 24ರಂದು ದೀಪಾವಳಿ ಆಚರಣೆ , ಅಕ್ಟೋಬರ್‌ 25ರಂದು ಸೂರ್ಯಗ್ರಹಣ ಮತ್ತು ನವೆಂಬರ್‌ 8ರಂದು ಚಂದ್ರಗ್ರಹಣದಿಂದಾಗಿ ಮೂರು ದಿನಗಳ ಕಾಲ ಭಕ್ತರಿಗೆ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ ಇರುವುದಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಪ್ರಕಟಿಸಿದೆ.

ಸೂರ್ಯ ಮತ್ತು ಚಂದ್ರಗ್ರಹಣ ದಿನದಂದು ದೇವಸ್ಥಾನದ ಬಾಗಿಲುಗಳನ್ನು ಬೆಳಗ್ಗೆ 8ರಿಂದ ಸಂಜೆ 7.30ರವರೆಗೆ 12 ಗಂಟೆಗಳ ಕಾಲ ಮುಚ್ಚಲಾಗುತ್ತದೆ. ಹಾಗೆಯೇ ದೀಪಾವಳಿ ದಿನವೂ ದೇವರ ದರ್ಶನವನ್ನು ರದ್ದುಗೊಳಿಸಿದ್ದರಿಂದ ಅಕ್ಟೋಬರ್‌ 23ರಂದು ಯಾವುದೇ ಶಿಫಾರಸ್ಸು ಪತ್ರಗಳನ್ನೂ ಸ್ವೀಕರಿಸಲಾಗುವುದಿಲ್ಲ ಎಂದು ಟಿಟಿಡಿ ತಿಳಿಸಿದೆ.

ಹಿಂದುಗಳ ಭಾವನೆಗೆ ಧಕ್ಕೆ – ಸುರತ್ಕಲ್‌ ಹಿಂದೂ ಜಾಗರಣ ವೇದಿಕೆಯ ವತಿಯಿಂದ ನಟ ಚೇತನ್ ವಿರುದ್ಧ ದೂರು ದಾಖಲು – Vishwanews24

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

1 day ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

2 days ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

2 days ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

2 days ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

2 days ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

2 days ago