ರಾಜ್ಯ ನ್ಯೂಸ್

ಸೆಲ್ಫಿಯಿಂದ ಕಳವಾಗಲಿದೆ ನಿಮ್ಮ ದುಡ್ಡು, ಡಿಐಜಿ ರೂಪಾ ಮೇಡಮ್ ನೀಡಿದ್ರು ಕಡಕ್ ಎಚ್ಚರಿಕೆ, ಏನು ಅಂತಾ ನೀವೆ ಓದಿ..!

ಸೆಲ್ಫಿಯಿಂದ ಕಳವಾಗಲಿದೆ ನಿಮ್ಮ ದುಡ್ಡು, ಡಿಐಜಿ ರೂಪಾ ಮೇಡಮ್ ನೀಡಿದ್ರು ಕಡಕ್ ಎಚ್ಚರಿಕೆ, ಏನು ಅಂತಾ ನೀವೆ ಓದಿ..!

ಇಂದು ಇಂಟರ್ನೆಟ್ ಖದೀಮರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇಂದು ಇವರ ಜಾಲ ನಾವು ದಿನನಿತ್ಯ ತೆಗೆಯುವ ಸೆಲ್ಫಿಯ ಕಡೆಗೂ ಬಿದ್ದಿದೆ. ತಮ್ಮ ಬುದ್ಧಿವಂತಿಕೆಯನ್ನು ಒಳ್ಳೆಯ ಕಾರ್ಯಕ್ಕೆ ಉಪಯೋಗ ಮಾಡುವ ಬದಲು ಇವರು ಜನರನ್ನು ಯಾಮಾರಿಸಲು ಬಳಸುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಈಗ ಈ ಸೈಬರ್ ಕಳ್ಳರು ಜನರನ್ನು ದೋಚಲು ಹೊಸ ಐಡಿಯಾವೊಂದನ್ನು ಕಂಡು ಹಿಡಿದಿದ್ದು ಇದರ ಬಗ್ಗೆ ಸ್ಪೋಟಕ ಮಾಹಿತಿಯೊಂದನ್ನು ದಕ್ಷ ಅಧಿಕಾರಿಣಿ ಎಂದೇ ಖ್ಯಾತರಾಗಿರುವ ಡಿಐಜಿ ರೂಪ ಅವರು ಟ್ವಿಟ್ಟರ್ ಮೂಲಕ ಬಯಲು ಮಾಡಿ ಜನರನ್ನು ಎಚ್ಚರಿಸಿದ್ದಾರೆ.

ಸಾಮಾನ್ಯವಾಗಿ ಎಲ್ಲರೂ ಸೆಲ್ಫಿ ಫೋಟೋ ಕ್ಲಿಕ್ಕಿಸುವಾಗ ತಂಬ್ಸ್ ಅಪ್ ಅಥವಾ ವಿಕ್ಟರಿ ಚಿಹ್ನೆ ತೋರಿಸುವುದು ಸಾಮಾನ್ಯ. ಈಗ ಇದನ್ನೇ ಬಳಸಿಕೊಂಡು ಸೈಬರ್ ಕಳ್ಳರ ಗುಂಪು ಜನರನ್ನು ದೋಚಲು ಮುಂದಾಗಿದೆ. ನಾವು ಈ ಶೈಲಿಯಲ್ಲಿ ಫೋಟೋ ಕ್ಲಿಕ್ಕಿಸುವಾಗ ಅಲ್ಲಿ ಕಾಣುವ ಬೆರಳಿನ ಮೂಲಕ ತಂತ್ರಜ್ಞಾನವನ್ನು ಉಪಯೋಗಿಸಿ ಬೆರಳಚ್ಚನ್ನು ತೆಗೆದು ಅದನ್ನುಪಯೋಗಿಸಿಕೊಂಡು ನಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸಿ ಬ್ಯಾಂಕ್ ಖಾತೆಯಲ್ಲಿರುವ ಹಣ ಲಪಟಾಯಿಸುವ ಅಥವಾ ಇತರ ದಾಖಲೆಗಳನ್ನು ಬಳಸಿ ಮೋಸ ಮಾಡುವ ಗುಂಪು ಭಾರತ ಹಾಗೂ ಇತರ ರಾಷ್ಟಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ.

ಸಾಮಾನ್ಯವಾಗಿ ಇಂದಿನ ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್, ಪಾಸ್ ಪೋರ್ಟ್ ಮುಂತಾದ ಅತ್ಯಮೂಲ್ಯ ದಾಖಲೆಗಳಿಗೆ ಬೆರಳಚ್ಚು ಅಗತ್ಯವಾಗಿದ್ದು ಇಲ್ಲಿ ನಮ್ಮ ಬೆರಳಚ್ಚಿನ ತುದಿಯಲ್ಲಿ ಗುರುತಿನ ಜೊತೆಜೊತೆಗೆ ಎಲ್ಲಾ ಮಾಹಿತಿಗಳು ಅಡಕವಾಗಿರುತ್ತದೆ. ನಾವು ಸಾಮಾಜಿಕ ಜಾಲತಾಣಗಳಲ್ಲಿ ತಂಬ್ಸ್ ಅಪ್ ಅಥವಾ ವಿಕ್ಟರೀ ಸಂಕೇತಗಳನ್ನು ತೋರಿಸುವಂತಹ ಉತ್ತಮ ಗುಣಮಟ್ಟದ ಭಾವಚಿತ್ರಗಳನ್ನು ಅಪ್ಲೋಡ್ ಮಾಡುತ್ತಿರುತ್ತೇವೆ. ಸೈಬರ್ ಕಳ್ಳರು ಈ ಮೂಲಕ ನಮ್ಮ ಬೆರಳಿನ ಅಚ್ಚುಗಳನ್ನು ಸೈಬರ್ ಕಳ್ಳರು ಸಲೀಸಾಗಿ ಕದ್ದು ನಮ್ಮ ಬ್ಯಾಂಕ್ ಖಾತೆ ಹಾಗೂ ಇತರ ವೈಯಕ್ತಿಕ ಮಾಹಿತಿಗಳನ್ನು ನಮಗೆ ತಿಳಿಯದಂತೆ ಹ್ಯಾಕ್ ಮಾಡಿ ಸಮಸ್ಯೆಯನ್ನು ಉಂಟು ಮಾಡುತ್ತಿದ್ದಾರೆ.

https://twitter.com/D_Roopa_IPS/status/1013516719929856004?s=19

 

ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಿಷ್ಠಾವಂತ ಅಧಿಕಾರಿಣಿ ಎಂದೇ ಖ್ಯಾತರಾಗಿರುವ ಡಿಐಜಿ ರೂಪಾ ಅವರು ಎಚ್ಚರಿಕೆ ನೀಡಿದ್ದು ಈ ಕುರಿತು 45 ಸೆಕೆಂಡ್ಸ್ ಗಳ ವಿಡಿಯೋವೊಂದನ್ನು ಟ್ವೀಟ್ ಮಾಡಿ ಸೆಲ್ಫಿ ತೆಗೆದುಕೊಳ್ಳುವ ಮುನ್ನ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಬೆರಳಚ್ಚು ನಕಲು ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಒಟ್ಟಾರೆ ಈ ಡಿಜಿಟಲ್ ಯುಗದಿಂದಾಗಿ ನಮಗೆ ಲಾಭದಷ್ಟೆ ನಷ್ಟ ಕೂಡ ಸಂಭವಿಸುವ ಸಾಧ್ಯತೆಯಿದ್ದು ನಾವು ನಮ್ಮ ಎಚ್ಚರಿಕೆಯಲ್ಲಿರುವುದು ಒಳ್ಳೆಯದು ಅಲ್ವಾ..!

Vishwa News 24

Recent Posts

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…

3 days ago

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ : ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! vishwanews24

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…

3 days ago

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  – vishwanews24

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…

3 days ago

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು – vishwanews24

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…

3 days ago

ಡಿಕೆಶಿ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ – vishwanews24

 ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್‌.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…

3 days ago

ಉಡುಪಿ: ತುಳುನಾಡಿನ, ತುಳು ಜನರ ಭಾವನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಲೆ ಕೊಟ್ಟಿದ್ದಾರೆ : ರಮೇಶ್ ಕಾಂಚನ್ – vishwanews24

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…

3 days ago