ಸೆ. 15 : ಕಾಪು ಜೇಸಿ ಸಪ್ತಾಹ ಸಮಾರೋಪ – ವಾಯ್ಸ್ ಆಫ್ ಕಾಪು ಸಂಗೀತ ಸ್ಪರ್ಧೆ, ಗುಂಪು ನೃತ್ಯ ಸ್ಪರ್ಧೆ – Vishwanews24

Featured, ಉಡುಪಿ

ಸೆ. 15 : ಕಾಪು ಜೇಸಿ ಸಪ್ತಾಹ ಸಮಾರೋಪ, ವಾಯ್ಸ್ ಆಫ್ ಕಾಪು ಸಂಗೀತ ಸ್ಪರ್ಧೆ, ಗುಂಪು ನೃತ್ಯ ಸ್ಪರ್ಧೆ

ಕಾಪು, : ಜೇಸಿಐ ಭಾರತದ ವಲಯ ಹದಿನೈದರ ಪ್ರತಿಷ್ಠಿತ ಘಟಕವಾದ ಕಾಪು ಜೇಸಿಐನ ರಜತ ವರ್ಷದ ಜೇಸೀ ಸಪ್ತಾಹದ ಸಮಾರೋಪ ಸಮಾರಂಭವು ಸೆ. 15ರಂದು ಸಂಜೆ 5.30೦ ರಿಂದ ಕಾಪು ಶ್ರೀ ವೀರಭದ್ರ ಸಭಾಭವನದಲ್ಲಿ ನಡೆಯಲಿದೆ.

ಸಮಾರೋಪ ಸಮಾರಂಭದ ಪ್ರಯುಕ್ತ ಸಾಧಕರಿಗೆ ಸಮ್ಮಾನ, ಸ್ಕಾಲರ್‌ಶಿಪ್ ವಿತರಣೆ, ಬಹುಮಾನ ವಿತರಣೆ ಹಾಗೂ ಆಯ್ದ ಯುವ ಪ್ರತಿಭಾನ್ವಿತ ಗಾಯಕರಿಗಾಗಿ ವಾಯ್ಸ್ ಆಫ್ ಕಾಪು ಸಂಗೀತ ಸ್ಪರ್ಧೆ (ಜ್ಯೂನಿಯರ್ ಮತ್ತು ಸಿಇನಿಯರ್ ವಿಭಾಗ) ಮತ್ತು ನೃತ್ಯ ತಂಡಗಳಿಗೆ ಗುಂಪು ನೃತ್ಯ ಸ್ಪರ್ಧೆ ಸಹಿತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ…ನೋಡಿ ಇಂದಿನ ದಿನ ಭವಿಷ್ಯ .. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ವಾಯ್ಸ್ ಆಫ್ ಕಾಪು ಸಂಗೀತ ಸ್ಪರ್ಧೆ ಎರಡು ವಿಭಾಗದಲ್ಲಿ ನಡೆಯಲಿದ್ದು ಜೂನಿಯರ್ ವಿಭಾಗದ ವಿಜೇತರಿಗೆ ಪ್ರಥಮ – 3,೦೦೦/-, ದ್ವಿತೀಯ-2,೦೦೦/-, ತೃತೀಯ-1,೦೦೦ /- ರೂ. ಮತ್ತು ಟ್ರೋಫಿ, ಸಿಣಿಯರ್ ವಿಭಾಗದ ವಿಜೇತರಿಗೆ ಪ್ರಥಮ – 5555/-, ದ್ವಿತೀಯ-3333/-, ತೃತೀಯ-1111 /- ರೂ. ಹಾಗೂ ಟ್ರೋಫಿ ನೀಡಲಾಗುವುದು. ಆಯ್ದ ನೃತ್ಯ ತಂಡಗಳಿಗೆ ಡ್ಯಾನ್ಸ್ ಧಮಾಕ ಗುಂಪು ನೃತ್ಯ ಸ್ಪರ್ಧೆ ನಡೆಯಲಿದ್ದು ವಿಜೇತರಿಗೆ 10010 /-  ಮತ್ತು ದ್ವಿತೀಯ 6060/- ರೂ. ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು ಎಂದು ಕಾಪು ಜೇಸಿಐನ ಪ್ರಕಟಣೆಯು ತಿಳಿಸಿದೆ.

ಮಸ್ಕತ್ : ಏರ್ ಇಂಡಿಯಾ ವಿಮಾನದಲ್ಲಿ ಹೊಗೆ ; 14 ಮಂದಿಗೆ ಗಾಯ – Vishwanews24

Leave a Reply