Featured

ಸೆ. 5ರಂದು ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಪ್ರಾಯೋಗಿಕ ಸಂಚಾರ -vishwanews24

ಸೆ. 5ರಂದು ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಪ್ರಾಯೋಗಿಕ ಸಂಚಾರ

ಮಂಗಳೂರು : ಬೆಂಗಳೂರು ಮತ್ತು ಮಂಗಳೂರು ಸೆಂಟ್ರಲ್ ನಡುವೆ ರೈಲಿನ ಚಾಲನಾ ಸಮಯ ಹಾಗೂ ಮಾರ್ಗದ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಭಾರತೀಯ ರೈಲ್ವೆಯು 16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್ ಖಾಲಿ ರೇಕ್‌ನ ಪ್ರಾಯೋಗಿಕ ಸಂಚಾರ ಸೆ.5ರಂದು ನಡೆಯಲಿದೆ.

ಯಶವಂತಪುರದಿಂದ ಬೆಳಗ್ಗೆ 6:05ಕ್ಕೆ ರೈಲು ಹೊರಟು ಮಧ್ಯಾಹ್ನ 2:25ಕ್ಕೆ ಮಂಗಳೂರಿಗೆ ಆಗಮಿಸಲಿದೆ. ಮಂಗಳೂರಿನಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ರಾತ್ರಿ 11ಕ್ಕೆ ಯಶವಂತರಪುರ ತಲುಪಲಿದೆ. ಪ್ರಾಯೋಗಿಕ ಸಂಚಾರಕ್ಕಾಗಿ ತಾತ್ಕಾಲಿಕವಾಗಿ ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ಆಗಸ್ಟ್ 11 ರಿಂದ ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಘಾಟ್ ಪ್ರದೇಶದಲ್ಲಿ ಸಂಚರಿಸಲು ಅತ್ಯಗತ್ಯವಾದ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ವ್ಯವಸ್ಥೆ ಹೊಂದಿರುವ ರೇಕ್ ಲಭ್ಯವಿಲ್ಲದ ಕಾರಣ ಈ ಪ್ರಕ್ರಿಯೆ ತಡವಾಗಿತ್ತು. ಇದೀಗ ಈಗ ಎಇಬಿ ವ್ಯವಸ್ಥೆ ಹೊಂದಿರುವ ರೇಕ್ ಬಂದಿರುವುದರಿಂದ ಪ್ರಾಯೋಗಿಕ ಸಂಚಾರ ಯಶಸ್ವಿಯಾದ ತಕ್ಷಣವೇ ವಾಣಿಜ್ಯ ಸಂಚಾರಕ್ಕೆ ರೈಲ್ವೆ ಮಂಡಳಿಯಿಂದ ಅಧಿಕೃತ ಅನುಮೋದನೆ ದೊರೆಯಲಿದೆ.

ವಂದೇ ಭಾರತ್ ರೈಲು ಸಾಮಾನ್ಯವಾಗಿ ಅತ್ಯಾಧುನಿಕ ಎಲೆಕ್ಟ್ರೋ-ನ್ಯೂಮ್ಯಾಟಿಕ್ ಡಿಸ್ಕ್ ಬ್ರೇಕ್ ಹಾಗೂ Regenerative Braking ವ್ಯವಸ್ಥೆಯನ್ನು ಹೊಂದಿರುತ್ತದೆ. ಆದರೆ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಘಾಟ್ ಮಾರ್ಗವು ಅತ್ಯಂತ ಕಡಿದಾದ ಇಳಿಜಾರು ಹೊಂದಿದೆ. ಹೀಗಾಗಿ ಈ ಮಾರ್ಗದಲ್ಲಿ ಚಲಿಸುವ ರೈಲುಗಳ ಸುರಕ್ಷತೆಗಾಗಿ ಬ್ಯಾಂಕರ್ ಇಂಜಿನ್‌ಗಳನ್ನು ಜೋಡಿಸಲಾಗುತ್ತದೆ.

Vishwa News 24

Recent Posts

ಪಣಂಬೂರು: ಖಾಸಗಿ ಎಕ್ಸ್‌ಪ್ರೆಸ್ ಬಸ್ ಪಲ್ಟಿ: ಅದೃಷ್ಟವಶಾತ್  ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರು  -vishwanews24

ಪಣಂಬೂರು: ಖಾಸಗಿ ಎಕ್ಸ್‌ಪ್ರೆಸ್ ಬಸ್ ಪಲ್ಟಿ: ಅದೃಷ್ಟವಶಾತ್  ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರು  ಸುರತ್ಕಲ್: ಕಾರ್ಕಳದಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್…

3 minutes ago

ವಿಜಯ್  ಅವರು ತಮ್ಮ ಜೀವನದಲ್ಲಿ ಸಂತೋಷವಾಗಿರಲಿ; ಉಳಿದದ್ದನ್ನು ಕಾಲಕ್ಕೂ ಕರ್ಮಕ್ಕೂ ಬಿಡುತ್ತೇನೆ : ನಾಗರತ್ನ ಪ್ರತಿಕ್ರಿಯೆ -vishwanews24

ವಿಜಯ್  ಅವರು ತಮ್ಮ ಜೀವನದಲ್ಲಿ ಸಂತೋಷವಾಗಿರಲಿ; ಉಳಿದದ್ದನ್ನು ಕಾಲಕ್ಕೂ ಕರ್ಮಕ್ಕೂ ಬಿಡುತ್ತೇನೆ : ನಾಗರತ್ನ ಪ್ರತಿಕ್ರಿಯೆ ಬೆಂಗಳೂರು: ನಟ ದುನಿಯಾ…

22 minutes ago

ಪಡುಬಿದ್ರಿ : ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಸ್ಕೂಟರ್ ಡಿಕ್ಕಿ ; ಸವಾರ ಸಾವು -vishwanews24

ಪಡುಬಿದ್ರಿ : ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಸ್ಕೂಟರ್ ಡಿಕ್ಕಿ ; ಸವಾರ ಸಾವು ಉಡುಪಿ: ನಂದಿಕೂರಿನ ಕಾರ್ಕಳ–ಪಡುಬಿದ್ರಿ ಬಸ್ ನಿಲ್ದಾಣದ…

41 minutes ago

ಮಂಗಳೂರು: ಫಳ್ನೀರ್ ನಲ್ಲಿರುವ ಬ್ಲಿಂಕ್ ಇಟ್ ಮಳಿಗೆಗೆ ಅರೋಗ್ಯ ಇಲಾಖೆ ದಾಳಿ -vishwanews24

ಮಂಗಳೂರು: ಫಳ್ನೀರ್ ನಲ್ಲಿರುವ ಬ್ಲಿಂಕ್ ಇಟ್ ಮಳಿಗೆಗೆ ಅರೋಗ್ಯ ಇಲಾಖೆ ದಾಳಿ ಕೊಳೆತ ಮೊಟ್ಟೆ ಪತ್ತೆ, ಗೋದಾಮುಗೆ ಸೀಲ್‌ ಮಾಡಿದ…

4 hours ago

ಉಡುಪಿ : ಪಿ.ಒ.ಪಿ / ರಾಸಾಯನಿಕ ಬಳಸಿ ಗಣೇಶ ವಿಗ್ರಹಗಳ ತಯಾರಿ, ಮಾರಾಟ ನಿಷೇಧ -vishwanews24

ಉಡುಪಿ ಪಿ.ಒ.ಪಿ / ರಾಸಾಯನಿಕ ಬಳಸಿ ಗಣೇಶ ವಿಗ್ರಹಗಳ ತಯಾರಿ, ಮಾರಾಟ ನಿಷೇಧ ಉಡುಪಿ : ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ…

18 hours ago

ಇಲ್ಲಿಂದ ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ  :ವಿಚ್ಛೇದನ ಬೆನ್ನಲ್ಲೇ ವಿಜಯ್‌ ಪೋಸ್ಟ್ -vishwanews24

ಇಲ್ಲಿಂದ ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ  :ವಿಚ್ಛೇದನ ಬೆನ್ನಲ್ಲೇ ವಿಜಯ್‌ ಪೋಸ್ಟ್ ಬೆಂಗಳೂರು: ನಟ, ನಿರ್ದೇಶಕ ದುನಿಯಾ ವಿಜಯ್‌  ಮತ್ತು…

20 hours ago