Featured

ಸೇನಾ ಮಿಲಿಟರಿ ಪೊಲೀಸ್ ಪಡೆಯಲ್ಲಿ ಮಹಿಳೆಯರಿಗೆ ಅವಕಾಶ : ರಕ್ಷಣಾ ಸಚಿವೆಯಿಂದ ಮಹತ್ವದ ನಿರ್ಣಾಯ – Vishwanews24

ನವದೆಹಲಿ,: ಸೈನ್ಯದ ಮಿಲಿಟರಿ ಪೊಲೀಸ್‌ ಗೆ ಮಹಿಳೆಯರನ್ನು ಸೈನಿಕರನ್ನಾಗಿ ನೇಮಿಸಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ಸೂಚಿಸಿದ್ದಾರೆ.

ಇನ್ನು ಮುಂದೆ ಮಹಿಳೆಯರು ಮಿಲಿಟರಿ ಪೊಲೀಸ್‌ನಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಒಟ್ಟು ಮಿಲಿಟರಿ ಪೊಲೀಸ್‌ ಸಿಬ್ಬಂದಿಯ 20% ನಷ್ಟು ಮಹಿಳೆಯರನ್ನು ಕಡ್ಡಾಯವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಶುಕ್ರವಾರದಂದು ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಈ ಐತಿಹಾಸಿಕ ನಿರ್ಧಾರವನ್ನು ಜಾರಿಗೆ ತಂದಿದ್ದಾರೆ. ಈ ಹಿಂದೆ ಮಹಿಳೆಯರನ್ನು ಕೇವಲ ಸೇನಾ ಅಧಿಕಾರಿಗಳಾಗಿ ಆಯ್ದ ಶಾಖೆಗಳಿಗೆ ಮಾತ್ರ ನೇಮಿಸಿಕೊಳ್ಳಲಾಗುತ್ತಿತ್ತು. ಆದ್ರೆ ಇನ್ಮುಂದೆ ಮಹಿಳೆಯರು ಕೂಡ ಭಾರತೀಯ ಸೇನೆಯ ಮಿಲಿಟರಿ ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸಲು ಸರ್ಕಾರ ಅನುಮತಿ ನೀಡಿದೆ.

ಮಿಲಿಟರಿ ಪೊಲೀಸ್ ಸಿಬ್ಬಂದಿ ಭಾರತೀಯ ಸೇನೆಯ ಭಾಗವೇ ಆಗಿದ್ದು, ಇವರು ಯುದ್ಧ ಖೈದಿಗಳ ನಿರ್ವಹಣೆ, ವಿಚಾರಣೆ, ಸಂಚಾರ ವ್ಯವಸ್ಥೆ, ಮಿಲಿಟರಿ ಸಂಪರ್ಕ ವ್ಯವಸ್ಥೆ, ಸೇನೆಯ ಒಳಗೆ ವಿಐಪಿ ಭದ್ರತೆಗಳನ್ನು ನಿಭಾಯಿಸುತ್ತಾರೆ.

ಕಳೆದ ವರ್ಷ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಮಹಿಳೆಯರಿಗೆ ಯುದ್ಧ ಭೂಮಿಯಲ್ಲಿ ಅವಕಾಶ ನೀಡಲು ಇನ್ನೂ ಕೆಲವು ವರ್ಷಗಳು ಸರಿಯಬೇಕು ಎಂದಿದ್ದರು. ಆದರೆ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಒಪ್ಪಿಗೆ ಸೂಚಿಸಿರುವುದರಿಂದ ಮಹಿಳೆಯರು ಯುದ್ಧ ಭೂಮಿಗೆ ಪ್ರವೇಶ ಪಡೆಯಲು ಈಗ ಮೊದಲ ಹೆಜ್ಜೆಯನ್ನು ಇರಿಸಿದಂತಾಗಿದೆ.

ಮಹಿಳೆಯರಿಗೆ ಮಿಲಿಟರಿ ಪೊಲೀಸ್ ಪಡೆಯಲ್ಲಿ ಅವಕಾಶ ನೀಡಬೇಕೆಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾಪ ಇಟಿದ್ದರು. ಈ ಪ್ರಸ್ತಾಪದ ಗಂಭೀರತೆಯನ್ನು ಅರಿತ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವಾಲಯವು ಮಹಿಳೆಯರಿಗೆ ಸೇನಾ ಮಿಲಿಟರಿ ಪೊಲೀಸ್ ಪಡೆಯಲ್ಲಿ ಅವಕಾಶ ಕಲ್ಪಿಸಿಕೊಟ್ಟಿದೆ.

Vishwa News 24

Recent Posts

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ – vishwanews24

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ…

17 minutes ago

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  – vishwanews24

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  ಉಡುಪಿ: ಉಡುಪಿಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಮೀನು ಸಾಗಾಟದ ಲಾರಿಯೊಂದು…

37 minutes ago

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ – vishwanews24

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ ನವದೆಹಲಿ: ಪೆಟ್ರೋಲ್‌, ಡೀಸೆಲ್‌ ಬಳಿಕ…

51 minutes ago

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು – vishwanews24

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು ಮಂಗಳೂರು: ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ ಕೆಲವು…

1 hour ago

ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಮಂಗಳೂರಿನಲ್ಲಿ SDPI ಪ್ರತಿಭಟನೆ – vishwanews24

ಬಿಜೆಪಿ ಸಂಘಪರಿವಾರವು ದೇಶದ ಕಾನೂನಿಗೆ ವಿರುದ್ಧವಾಗಿದೆ: ರಿಯಾಝ್ ಫರಂಗಿಪೇಟೆ ಗಲಭೆಕೋರರ ವಿರುದ್ಧದ ಪ್ರಕರಣ ಹಿಂಪಡೆದ ಕ್ರಮಕ್ಕೆ SDPI ತೀವ್ರ ವಿರೋಧ…

2 hours ago

ಬೆಳ್ತಂಗಡಿ : ಜೂನ್ 1 ರಿಂದ ಟ್ರೆಕ್ಕಿಂಗ್, ಜಲಪಾತಗಳ ಮೇಲಿನ ನಿರ್ಬಂಧ ತೆರವು – vishwanews24

ಬೆಳ್ತಂಗಡಿ : ಜೂನ್ 1 ರಿಂದ ಪ್ರವಾಸಿಗರಿಗೆ ಟ್ರೆಕ್ಕಿಂಗ್, ಜಲಪಾತಗಳ ಮೇಲಿನ ನಿರ್ಬಂಧ ತೆರವು ಅರಣ್ಯ ಇಲಾಖೆಯಿಂದ ಪ್ರವಾಸಿಗರಿಗೆ ಕಟ್ಟುನಿಟ್ಟಿನ…

2 hours ago