ಸೊರಕೆ ಜತೆ ಅಂತರ ಕಾಯ್ದುಕೊಂಡಿದ್ದ ಬೆಳಪು ದೇವಿಪ್ರಸಾದ್ ಶೆಟ್ಟಿ ಪಿಲಿಪರ್ಬ ವೇದಿಕೆಯಲ್ಲಿ ಸೊರಕೆ ಜತೆ ಪ್ರತ್ಯಕ್ಷ : vishwanews24
ಸೊರಕೆ ಜತೆ ಅಂತರ ಕಾಯ್ದುಕೊಂಡಿದ್ದ ಬೆಳಪು ದೇವಿಪ್ರಸಾದ್ ಶೆಟ್ಟಿ ಪಿಲಿಪರ್ಬ ವೇದಿಕೆಯಲ್ಲಿ ಸೊರಕೆ ಜತೆ ಪ್ರತ್ಯಕ್ಷ : vishwanews24
ಕಾಪು : ಕಳೆದ ಹಲವಾರು ತಿಂಗಳಿನಿಂದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಜತೆ ಮುನಿಸುಗೊಂಡಿದ್ದ ಬೆಳಪು ದೇವಿ ಪ್ರಸಾದ್ ಶೆಟ್ಟಿ ಇಂದು ಸೊರಕೆಯ ಮುಂದಾಳತ್ವದಲ್ಲಿ ನಡೆಯುತ್ತಿರುವ ಕಾಪು ಪಿಲಿ ಪರ್ಬ ವೇದಿಕೆಯಲ್ಲಿ ದಿಢೀರ್ ಪ್ರತ್ಯಕ್ಷಗೊಂಡು ಜನಮಾನಸದಲ್ಲಿದ್ದ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.
ಮಾಧ್ಯಮದ ಮುಖಾಂತರ ಸೊರಕೆ ವಿರುದ್ಧ ದೇವಿಪ್ರಸಾದ್ ಶೆಟ್ಟಿ ನೇರ ಆರೋಪ ಹಾಗೂ ಅಸಮಾಧಾನ ಹೊರಹಾಕಿದ್ದರು ತದನಂತರದ ದಿನಗಳಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದೆ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿ ಮಾಡಿದ್ದರು .
ಈ ಬಗ್ಗೆ ಸೊರಕೆ ಜತೆ ಮಾಧ್ಯಮ ಪ್ರಶ್ನೆ ಮಾಡಿದ ಸಂಧರ್ಭದಲ್ಲಿ ದೇವಿಪ್ರಸಾದ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಗೊಂದಲ ಅನುಮಾನಗಳನ್ನು ಪಾರ್ಟಿಯ ಒಳಗಡೆ ಕೂತು ಸ inರಿ ಮಾಡುತ್ತೇವೆ ನನಗೆ ವೈಯಕ್ತಿಕವಾಗಿ ದೇವಿಪ್ರಸಾದ್ ಮೇಲೆ ಯಾವುದೇ ಅಸಮಾಧಾನ ಇಲ್ಲ ಎಂದಿದ್ದರು.
ಆದರೇ ಇಂದು ಕಾಪುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೊರಕೆ ಹಾಗೂ ದೇವಿಪ್ರಸಾದ್ ಜತೆಯಾಗಿ ಕಾಣಿಸಿಕೊಂಡಿದ್ದಾರೆ.

