ಸೋಲಿನಿಂದ ಕಂಗೆಟ್ಟಿಲ್ಲ,ಸದಾ ಕಾರ್ಯಕರ್ತರ ಜತೆಗಿರುವೆ: ವಿನಯ್ ಕುಮಾರ್ ಸೊರಕೆ

Featured, ಉಡುಪಿ, ಜಿಲ್ಲೆ

ಕಾಪು: ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ಉಚ್ಚಿಲ ತುಂಬೆ ಕರ್ಕೆರ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕಾಪು ಕ್ಷೇತ್ರದ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಮಾತನಾಡಿ” ಬಿಜೆಪಿಯವರು ಕೇವಲ ಮೋದಿ ಹೆಸರಲ್ಲಿ ಮತ ಕೇಳಿ ಜನರನ್ನ ಮರುಳು ಮಾಡಿದ್ದಾರೆ. ಜಾತಿ,ಧರ್ಮ,ದೇವರ ಹೆಸರಿನಲ್ಲಿ ಮತಯಾಚಿಸಿ ಇಂದು ಗೆಲುವು ಸಾಧಿಸಿರಬಹುದು ಆದ್ರೆ ಕಾಪುವಿನಲ್ಲಿ ನಾವು ಮಾಡಿರುವಷ್ಟು ಅಭಿವೃದ್ದಿ ಕಾರ್ಯ ಇವ್ರಿಂದ ಮಾಡಲು ಸಾಧ್ಯವಾಗಿಲ್ಲ, ಈಗಿನ ಶಾಸಕರಿಗೆ ಕಾಪುವನ್ನ ತಾಲೂಕ್ ಮಾಡಬೇಕೆಂದು ಕನಸಿನಲ್ಲಿಯೂ ಅನ್ನಿಸಿರಲು ಸಾಧ್ಯವಿಲ್ಲ, ಮತ್ತು ನಾನು ಸೋಲಿನಿಂದ ಕಂಗೆಟ್ಟಿಲ್ಲ ,ಕ್ಷೇತ್ರ ಬಿಡುವ ಪ್ರಮೇಯನೆ ಇಲ್ಲ ಸದಾ ಕ್ಷೇತ್ರದ ಜನರ ಜೊತೆ,ಕಾರ್ಯಕರ್ತರ ಜತೆಗಿದ್ದೇನೆಂದರು.

ಮುಂದಿನ ದಿನದಲ್ಲಿಯೂ ಕೂಡ ನಾವೂ ಹಾಕಿರುವ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲು ಈ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಬರುವ ವ್ಯಕ್ತಿಯ ಜತೆ ಸೇರಿಕೊಂಡು ಪ್ರಯತ್ನಿಸುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ ತೋನ್ಸೆ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವಿನ್ ಚಂದ್ರ ಶೆಟ್ಟಿ, ಕಾಪು ಯೋಜಾನ ಪ್ರಾಧಿಕಾರ ಅಧ್ಯಕ್ಷ ದಿವಾಕರ್ ಶೆಟ್ಟಿ ಕಾಪು,

ದೇವಿಪ್ರಸಾದ್ ಶೆಟ್ಟಿ ಬೆಳಪು, ದೀಪಕ್ ಕುಮಾರ್ ಏರ್ಮಾಳ್ ,ಗೀತಾ ವಾಗ್ಲೆ,ಎಮ್.ಎ ಗಫೂರ್, ವಿನಯ್ ಬಲ್ಲಾಳ್ ಕಟಪಾಡಿ ಮೊದಲಾದವರು   ಉಪಸ್ಥಿತರಿದ್ದರು .