Featured

ಸೋಷಿಯಲ್ ಮೀಡಿಯಾ ಎಫೆಕ್ಟ್, ಆ ಬಡ ಕುಟುಂಬಕ್ಕೆ ಹರಿದು ಬಂದ ಹಣ ಎಷ್ಟು ಗೊತ್ತಾ…? ಓದಿ ಈ ವರದಿ

ಹೊಸದಿಲ್ಲಿ, : ಕಳೆದ ವಾರ ದೆಹಲಿಯಲ್ಲಿ ಚರಂಡಿ ಸ್ವಚ್ಛಗೊಳಿಸಲು ಹಗ್ಗದ ಸಹಾಯದಿಂದ ಕೆಳಗೆ ಇಳಿದ ಕಾರ್ಮಿಕನ ಪಾಲಿಗೆ ಅದೇ ಹಗ್ಗ ಮೃತ್ಯುವಾಗಿತ್ತು. ದಯನೀಯ ಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅದ್ಭುತ ಸ್ಪಂದನೆ ಸಿಕ್ಕಿದ್ದು, 50 ಲಕ್ಷ ರೂಪಾಯಿಗೂ ಅಧಿಕ ನೆರವು ಹರಿದು ಬಂದಿದೆ.

ಮೃತಪಟ್ಟ ಅನಿಲ್ (37)ನ 11 ವರ್ಷದ ಮಗ ಗೌರವ್, ತಂದೆಯ ಅಂತ್ಯಸಂಸ್ಕಾರದ ವೇಳೆ ರೋdiಸುತ್ತಿರುವ ಚಿತ್ರವನ್ನು ವರದಿಗಾರರೊಬ್ಬರು ಟ್ವೀಟ್ ಮಾಡಿದ್ದರು. ಇದು ಟ್ವಿಟ್ಟರ್ ಬಳಕೆದಾರರು ಈ ಕುಟುಂಬಕ್ಕಾಗಿ ಹಣ ಸಂಗ್ರಹಿಸಲು ಪ್ರೇರಣೆಯಾಯಿತು.

ಅನಿಲ್ ಕುಟುಂಬದ ದಯನೀಯ ಸ್ಥಿತಿ ಎಷ್ಟಿತ್ತೆಂದರೆ, ಶವದ ಅಂತ್ಯಸಂಸ್ಕಾರಕ್ಕೂ ಅವರ ಬಳಿ ಹಣ ಇರಲಿಲ್ಲ. ಶವಸಂಸ್ಕಾರಕ್ಕೆ ನೆರೆಯವರು ಕಟ್ಟಿಗೆ ಖರೀದಿಸಿ ಕೊಟ್ಟರು. ಅನಿಲ್‌ನ ನಾಲ್ಕು ವರ್ಷದ ಮಗ ಶಿವಮ್, ತಂದೆ ಸಾಯುವ ನಾಲ್ಕು ದಿನ ಮೊದಲು ತೀವ್ರ ನ್ಯುಮೋನಿಯಾದಿಂದ ಬಳಲಿ ಮೃತಪಟ್ಟಿದ್ದ. ಆತನ ಚಿಕಿತ್ಸೆಗೆ ಕುಟುಂಬದ ಬಳಿ ಚೈತನ್ಯವಿರಲಿಲ್ಲ.

ಆನ್‌ಲೈನ್ ಕ್ರೌಡ್‌ ಫಂಡಿಂಗ್ ಪ್ಲಾಟ್‌ಫಾರಂ ಮೂಲಕ ಇದುವರೆಗೆ 2,422 ಮಂದಿ ದಾನಿಗಳು 51.43 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅನಿಲ್ ಪತ್ನಿ ರಾಣಿ, “ಇನ್ನಾದರೂ ನನ್ನ ಮೂವರು ಮಕ್ಕಳನ್ನು ಶಾಲೆಗೆ ಕಳುಹಿಸಬಹುದು” ಎಂದು ಹೇಳಿದ್ದಾರೆ. ಮೂರು ತಿಂಗಳಿಂದ ಬಾಡಿಗೆ ನೀಡಿರಲಿಲ್ಲ. ಅನಿಲ್ ಮೃತಪಟ್ಟ ಬಳಿಕ ಮನೆಯಿಂದ ನಮ್ಮನ್ನು ಹೊರಹಾಕುತ್ತಾರೆ ಎಂದುಕೊಂಡಿದ್ದೆವು. ಕುಟುಂಬಕ್ಕೆ ಅವರೊಬ್ಬರೇ ಜೀವನಾಧಾರವಾಗಿದ್ದರು” ಎಂದು ವಿವರಿಸಿದ್ದಾರೆ.

ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರಂ ಈಗಾಗಲೇ ಪಡಿತರ ಖರೀದಿಸಿಕೊಟ್ಟಿದೆ. ಮುಂದಿನ ತಿಂಗಳುಗಳಲ್ಲಿ ಒಂದು ಸೈಕಲ್ ಮತ್ತು ಇತರ ಅಗತ್ಯ ವಸ್ತುಗಳು ಸಿಗಲಿವೆ. ಜನ ಮಕ್ಕಳಿಗಾಗಿ ದೇಣಿಗೆ ನೀಡಿದ್ದಾರೆ. ಇದೀಗ ಮಕ್ಕಳನ್ನು ಒಳ್ಳೆಯ ಖಾಸಗಿ ಶಾಲೆಗೆ ಕಳುಹಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಗೌರವ್ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 7 ಸಾವಿರ ಮರುಟ್ವೀಟ್‌ಗಳಾಗಿವೆ. ಇದರಿಂದ ಉತ್ತೇಜಿತವಾದ ಸ್ವಯಂಸೇವಾ ಸಂಸ್ಥೆ ಉದಯ್ ಫೌಂಡೇಷನ್, ಕುಟುಂಬಕ್ಕೆ ನೆರವು ಸ್ವೀಕರಿಸಲು ಬ್ಯಾಂಕ್ ಖಾತೆ ತೆರೆದಿತ್ತು.

Vishwa News 24

Recent Posts

ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ – vishwanews24

ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…

14 hours ago

ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ – vishwanews24

ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…

14 hours ago

ದೇಣಿಗೆ ಕಳ್ಳತನ ವಿವಾದ: ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್‌ ರಾಯ್‌ ರಾಜೀನಾಮೆ – vishwanews24

ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್‌ ರಾಯ್‌ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…

14 hours ago

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್‌ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್‌ ಖರ್ಗೆ – vishwanews24

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್‌ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ  ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…

15 hours ago

ರಾಮ ಮಂದಿರ ದೇಣಿಗೆ ಹಣದಲ್ಲಿ ಅಕ್ರಮ ಎಸಗುವವರನ್ನು ಬಿಡುವುದಿಲ್ಲ: ಯೋಗಿ ಆದಿತ್ಯನಾಥ್‌ ಎಚ್ಚರಿಕೆ – vishwanews24

ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್‌ ಲಕ್ನೋ: ರಾಮಭಕ್ತರ…

15 hours ago

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ – vishwanews24

ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…

17 hours ago