Featured

ಸೌದಿ ಅರೇಬಿಯ : ಪ್ರಯಾಣಿಕರು ಔಷಧ ಕೊಂಡೊಯ್ಯಲು ಅನುಮತಿ ಪಡೆಯುವುದು ಕಡ್ಡಾಯ – vishwanews24

ಸೌದಿ ಅರೇಬಿಯ : ಪ್ರಯಾಣಿಕರು ಔಷಧ ಕೊಂಡೊಯ್ಯಲು ಅನುಮತಿ ಪಡೆಯುವುದು ಕಡ್ಡಾಯ

ರಿಯಾದ್: ಸೌದಿ ಅರೇಬಿಯಾಗೆ ಪ್ರಯಾಣಿಸುವವರು ತಮ್ಮೊಂದಿಗೆ ಔಷಧಗಳನ್ನು ಕೊಂಡೊಯ್ಯಲು ಬಯಸಿದರೆ, ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರ (SFDA) ನೀಡಿರುವ ಹೊಸ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೌದಿ ಅರೇಬಿಯ ಸರ್ಕಾರ ತಿಳಿಸಿದೆ.

ಹೊಸ ನಿಯಮದ ಅನ್ವಯ ನೋವು ನಿವಾರಕಗಳು, ನಿದ್ರೆಯ ಮಾತ್ರೆಗಳು ಅಥವಾ ಮನೋವೈದ್ಯಕೀಯ ಔಷಧಿಗಳಂತಹ ನಿಯಂತ್ರಿತ ಔಷಧಗಳನ್ನು ಸಾಗಿಸುವ ಮುನ್ನ, ಪ್ರಯಾಣಿಕರು ಅವುಗಳಿಗೆ ಮೊದಲೇ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು.

SFDA ಯ ನಿಯಂತ್ರಿತ ಔಷಧ ವ್ಯವಸ್ಥೆ (CDS) ಆನ್‌ಲೈನ್ ಪೋರ್ಟಲ್ ಮೂಲಕ ಸರಳವಾಗಿ ಅರ್ಜಿ ಸಲ್ಲಿಸಬಹುದು. ಈ ವ್ಯವಸ್ಥೆಯ ಉದ್ದೇಶ, ಪ್ರಯಾಣಿಕರು ತಮ್ಮ ವೈದ್ಯಕೀಯ ಅಗತ್ಯಗಳನ್ನು ಕಾನೂನುಬದ್ಧವಾಗಿ ಸಾಗಿಸಲು ಅನುಕೂಲ ಮಾಡಿಕೊಡುವುದು ಮತ್ತು ಪೋರ್ಟ್ ಗಳಲ್ಲಿ ವಿಳಂಬ ತಪ್ಪಿಸುವುದು.

ಔಷಧಿ ಗಳನ್ನು ಸಾಗಿಸಲು ಅನುಮತಿ ಪಡೆಯುವುದು ಹೇಗೆ?

1. ಖಾತೆ ರಚನೆ

CDS ಪ್ಲಾಟ್‌ಫಾರ್ಮ್‌ನಲ್ಲಿ ವೈಯಕ್ತಿಕ ಖಾತೆ ರಚಿಸಬೇಕು.

2. ಇ-ಪರವಾನಗಿಗಾಗಿ ಅರ್ಜಿ ಸಲ್ಲಿಕೆ

ವೈಯಕ್ತಿಕ ಮಾಹಿತಿ, ಪ್ರಯಾಣ ವಿವರಗಳು ಹಾಗೂ ಕೊಂಡೊಯ್ಯುವ ಔಷಧಗಳ ವಿವರಗಳನ್ನು ಅರ್ಜಿಯ ಜೊತೆ ನಮೂದಿಸಬೇಕು.

3.ದಾಖಲೆಗಳ ಅಪ್‌ಲೋಡ್

ಮಾನ್ಯವಾಗಿರುವ ವೈದ್ಯಕೀಯ ಪ್ರಿಸ್ಕ್ರಿಪ್ಷನ್, ವೈದ್ಯರಿಂದ ನೀಡಲಾದ ವೈದ್ಯಕೀಯ ವರದಿಯ ಜೊತೆಗೆ ಗುರುತಿನ ಚೀಟಿಯನ್ನು ಅಪ್ಲೋಡ್ ಮಾಡಬೇಕು. ಗುರುತಿನ ಚೀಟಿಯಾಗಿ ಪಾಸ್‌ಪೋರ್ಟ್/ ರೆಸಿಡೆಂಟ್ ಐಡಿ ಬಳಸಬಹುದು.

4. ಔಷಧದ ವಿವರಗಳನ್ನು ಘೋಷಿಸಬೇಕು.

ಈ ವೇಳೆ ಔಷಧದ ಹೆಸರು, ಅದರ ತಯಾರಿಕೆಯಲ್ಲಿ ಬಳಸಲಾದ ವಸ್ತುಗಳು, ಅದನ್ನು ತೆಗೆದುಕೊಳ್ಳುವ ವಿಧಾನವನ್ನು ತಿಳಿಸಬೇಕು. ಟ್ಯಾಬ್ಲೆಟ್/ಇಂಜೆಕ್ಷನ್ ಆಗಿದೆಯೇ ಎಂದು ನಮೂದಿಸಬೇಕು. ಅದರೊಂದಿಗೆ ಔಷಧ ಪ್ರಮಾಣ ಮತ್ತು ಅದರ ಪ್ಯಾಕೇಜ್ ಗಾತ್ರವನ್ನು ಉಲ್ಲೇಖಿಸಬೇಕು.

5.ವೈದ್ಯಕೀಯ ದೃಢೀಕರಣ ಅಗತ್ಯ.

ಅರ್ಜಿ ಸಲ್ಲಿಸುವವರು ಅಥವಾ ಅವರ ಕುಟುಂಬದವರಿಗೆ ಮಾತ್ರ ಬಳಸಲು ಎಂಬುದನ್ನು ಉಲ್ಲೇಖಿಸಬೇಕು.

6.ನಿಯಮ ಷರತ್ತುಗಳಿಗೆ ಒಪ್ಪಬೇಕು.

SFDA ನಿಯಮಗಳನ್ನು ಒಪ್ಪಿಕೊಂಡು ಅರ್ಜಿಯನ್ನು ಸಲ್ಲಿಸಬೇಕು.

7. ಅರ್ಜಿಯ ಸ್ಥಿತಿ ಟ್ರ್ಯಾಕ್ ಮಾಡಿ

ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ನೇರವಾಗಿ ಪರಿಶೀಲಿಸಬಹುದು. ಅರ್ಜಿ ಸ್ವೀಕೃತವಾಗಿದೆಯೇ ಅಥವಾ ತಿರಸ್ಕೃತಗೊಂಡಿದೆಯೇ ಎಂದು ಅಲ್ಲಿಯೇ ಪರಿಶೀಲಿಸಬಹುದು.

8. ಅನುಮತಿ ಪತ್ರ

ಅನುಮತಿ ಸಿಕ್ಕ ಬಳಿಕ ಅನುಮತಿ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಮಾಡಿಕೊಂಡು ಜೊತೆಗೆ ತೆಗೆದುಕೊಂಡು ಹೋಗಬೇಕು.

ಸೌದಿ ಸರಕಾರ ಜಾರಿಗೊಳಿಸಿರುವ ನೂತನ ನಿಯಮಗಳಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಸಮಯದ ಉಳಿತಾಯವಾಗಲಿದೆ. ಮುಂಚಿತವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ವಿಮಾನ ನಿಲ್ದಾಣದಲ್ಲಿ ಕಾಯುವ ಪ್ರಮೇಯ ಬರುವುದಿಲ್ಲ.

ಅನುಮತಿಗಾಗಿ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಎಲ್ಲವನ್ನೂ ಮನೆಯಿಂದಲೇ ಪೂರ್ಣಗೊಳಿಸಬಹುದು.

ಅರ್ಜಿ ಸಲ್ಲಿಸಬಹುದಾದ ಪೋರ್ಟಲ್ 24/7 ಲಭ್ಯವಿರುವುದರಿಂದ ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಲು ಅವಕಾಶವಿದೆ.

Vishwa News 24

Recent Posts

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ – vishwanews24

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ ಉಡುಪಿ: ಕೇಂದ್ರ…

13 hours ago

ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ – vishwanews24

ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ ಕಾಪು,: ಎಲ್ಲೂರಿನ ರೇವತಿ ಕುಂದರ್…

14 hours ago

ಮದರಂಗಡಿ : ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ ; ಇಬ್ಬರು ಆರೋಪಿಗಳು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ – vishwanews24

ಮದರಂಗಡಿ : ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ ; ಇಬ್ಬರು ಆರೋಪಿಗಳು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಉಡುಪಿ:ಮುದರಂಗಡಿ…

14 hours ago

ಟೈಮಿಂಗ್‌ ವಿವಾದ: ಕಾಪು ಸರ್ವಿಸ್ ರಸ್ತೆಯಲ್ಲಿ ಮತ್ತೆ ಖಾಸಗಿ ಎಕ್ಸ್‌ಪ್ರೆಸ್ ಬಸ್‌ ಚಾಲಕರ ವಾಗ್ವಾದ – vishwanews24

ಟೈಮಿಂಗ್‌ ವಿವಾದ: ಕಾಪು ಪೇಟೆಯಲ್ಲಿ ಮತ್ತೆ ಖಾಸಗಿ ಎಕ್ಸ್‌ಪ್ರೆಸ್ ಬಸ್‌ ಚಾಲಕರ ವಾಗ್ವಾದ ; ಸ್ಥಳೀಯರಲ್ಲಿ ಆತಂಕ ಕಾಪು: ರಾಷ್ಟ್ರೀಯ…

16 hours ago

ಉಡುಪಿ: ‘ಭಗವತಿ ಟೂರಿಸ್ಟ್’ ಟ್ರಾವೆಲ್ ಬುಕ್ಕಿಂಗ್ ಸಂಸ್ಥೆಯ ಮಾಲೀಕ ವಿನಯ್ ರಾಜ್ ವಿಧಿವಶ – vishwanews24

ಉಡುಪಿ: 'ಭಗವತಿ ಟೂರಿಸ್ಟ್' ಟ್ರಾವೆಲ್ ಬುಕ್ಕಿಂಗ್ ಸಂಸ್ಥೆಯ ಮಾಲೀಕ ವಿನಯ್ ರಾಜ್ ವಿಧಿವಶ ಉಡುಪಿ: ನಗರದ ಸರ್ವಿಸ್ ಬಸ್ ನಿಲ್ದಾಣದ…

16 hours ago

ಉಳ್ಳಾಲ: ತಲವಾರು ಹಿಡಿದು ದಾಂಧಲೆ ನಡೆಸಿದ ರೌಡಿ ಶೀಟರ್ ಸಹಿತ ಇಬ್ಬರ ಬಂಧನ – vishwanews24

ಉಳ್ಳಾಲ: ತಲವಾರು ಹಿಡಿದು ದಾಂಧಲೆ ನಡೆಸಿದ ರೌಡಿ ಶೀಟರ್ ಸಹಿತ ಇಬ್ಬರ ಬಂಧನ ಮಂಗಳೂರು: ಇಲ್ಲಿನ ಬಾರ್ ಒಂದರಲ್ಲಿ ತಲವಾರು…

16 hours ago