ಸ್ಕೂಲ್‌ ಬಸ್‌ ಪಲ್ಟಿ : 6 ಮಕ್ಕಳು ಮೃತ್ಯು – 20ಕ್ಕೂ ಹೆಚ್ಚು ಮಂದಿ ಗಾಯ – Vishwanews24

Featured, ರಾಷ್ಟ್ರ ನ್ಯೂಸ್

ಸ್ಕೂಲ್‌ ಬಸ್‌ ಪಲ್ಟಿ : 6 ಮಕ್ಕಳು ಸಾವು, 20ಕ್ಕೂ ಹೆಚ್ಚು ಮಂದಿ ಗಾಯ

ಚಂಡೀಗಢ :  ಸ್ಕೂಲ್‌ ಬಸ್‌ ಪಲ್ಟಿಯಾಗಿ 6 ಮಕ್ಕಳು ಮಕ್ಕಳು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ನರ್ನಾಲ್‌ನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಜಿ.ಎಲ್ ಪಬ್ಲಿಕ್ ಸ್ಕೂಲ್‌ಗೆ ಸೇರಿದ ಬಸ್ ಕನಿನಾದ ಉನ್ಹಾನಿ ಗ್ರಾಮದ ಬಳಿ ಶಾಲಾ ಬಸ್‌ ಪಲ್ಟಿಯಾಗಿದೆ . ಈದ್‌ ಉಲ್‌ ಫ್ರಿತ್‌ (ರಂಜಾನ್‌) ಹೊರತಾಗಿಯೂ ಶಾಲೆಯು ರಜೆ ಘೋಷಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ -Vishwanews24

ಪ್ರಾಥಮಿಕ ತನಿಖೆಯ ನಂತರ ಚಾಲಕನ ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವುದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಅಲ್ಲದೇ ಚಾಲಕ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಾನೆ ಎಂದು ಶಂಕಿಸಿದ್ದಾರೆ.

ಸದ್ಯ ಗಾಯಗೊಂಡ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಯುತ್ತಿದೆ. 2018 ರಲ್ಲಿ ಬಸ್‌ನ ಫಿಟ್‌ನೆಸ್ ಪ್ರಮಾಣಪತ್ರದ ಅವಧಿ ಮುಗಿದಿದೆ ಎಂದು ಅಧಿಕೃತ ದಾಖಲೆಗಳಲ್ಲಿ ಕಂಡು ಬಂದಿದೆ.

ಉಡುಪಿ: ಬಸ್‌ ಟೈಮಿಂಗ್‌ ವಿಚಾರ – ಎರಡು ಖಾಸಗಿ ಬಸ್‌ ನಿರ್ವಾಹಕರ ನಡುವೆ ಹೊಡೆದಾಟ – Vishwanews24

Leave a Reply