ಬ್ಯೂನಸ್ ಐರಿಸ್, ಆರ್ಜೆಂಟೀನಾ : ಇಲ್ಲೀಗ ಸಾಗುತ್ತಿರುವ ಮೂರನೇ ಯುವ ಒಲಿಂಪಿಕ್ಸ್‌ನಲ್ಲಿ ವೇಟ್ ಲಿಫ್ಟರ್ ಜೆರೆಮಿ ಲ್ಯಾರಿನ್ನುಂಗ ಅವರು ಇಂದು ಮಂಗಳವಾರ ಭಾರತಕ್ಕೆ ಮೊತ್ತ ಮೊದಲ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದುಕೊಟ್ಟರು.
ಲ್ಯಾರಿನ್ನುಂಗ ಅವರು ತನ್ನ ಅಂತಿಮ ಯತ್ನದಲ್ಲಿ 150 ಕಿಲೋ ಭಾರ ಎತ್ತುವುದರೊಂದಿಗೆ ‘ಎ’ ಬಣದಲ್ಲಿ ಪುರುಷರ 62 ಕೆಜಿ ವಿಭಾಗದಲ್ಲಿ 274 ಕೆಜಿ ಸಂಯುಕ್ತ ಭಾರ ಎತ್ತುವ ಸಾಧನೆಯನ್ನು ಮಾಡುವ ಮೂಲಕ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದುಕೊಂಡರು.
15ರ ಹರೆಯದ ಲ್ಯಾರಿನ್ನುಂಗ ಅವರು ಸ್ನ್ಯಾಚ್‌ನಲ್ಲಿ 120 ಕಿಲೋ ಮತ್ತು 124 ಕಿಲೋ, ಕ್ಲೀನ್ ಆಯಂಡ್ ಜರ್ಕ್‌ನಲ್ಲಿ 142 ಕಿಲೋ ಮತ್ತು 150 ಕಿಲೋ ಎತ್ತುವ ಮೂಲಕ ಟರ್ಕಿಯ ತೋಪ್‌ಟಾಸ್ ಕಾನೇರ್ ಷವರನ್ನು (263 ಕಿಲೋ) ಮತ್ತು ಕೊಲಂಬಿಯಾ ದ ಜೋಸ್ ಮಂಜಾರಿಸ್ (260 ಕಿಲೋ) ಅವರನ್ನು ಹಿಂದಿಕ್ಕಿದರು.
ಈ ಮೊದಲ ಭಾರತೀಯ ತಂಡ ತುಷಾರ್‌ಮಾನೇ (10 ಮೀ. ಏರ್ ರೈಫಲ್) ಮೆಹೂಲಿ ಘೋಷ್ (10 ಮೀ. ಏರ್ ರೈಫಲ್) ಮತ್ತು ತಬಾಬಿ ದೇವಿ (44 ಕಿಲೋ ಜೂಡೋ) ಅವರು ಒಟ್ಟು ಮೂರು ಬೆಳ್ಳಿ ಪದಕ ಗೆಲ್ಲುವ ಉತ್ತಮ ಸಾಧನೆಯನ್ನು ದಾಖಲಿಸಿದ್ದರು. 2014ರ ಚೀನ ಯುವ ಒಲಿಂಪಿಕ್ಸ್ ನಲ್ಲಿ ಭಾರತ ಎರಡು ಪದಕಗಳನ್ನು ಗೆದ್ದಿತ್ತು. ಈ ಬಾರಿ ಭಾರತದ ಸಾಧನೆ 1 ಚಿನ್ನ ಮೂರು ಬೆಳ್ಳಿ ಆಗಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…